ಭಾನುವಾರ, ಜೂನ್ 13, 2021
29 °C

ಸಾಗರ: ವಿವಿಧ ಉತ್ಪನ್ನ ಪರಿಚಯ ಕಾರ್ಯಕ್ರಮ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಕೃಷಿಯಲ್ಲಿ ಯಾವ ಪದ್ಧತಿಯನ್ನು ಅನುಸರಿಸಬೇಕು ಎಂಬ ಗೊಂದಲದಲ್ಲಿ ರೈತರು ಸಿಲುಕಿದ್ದು, ತಜ್ಞರು ಈ ಗೊಂದಲವನ್ನು ಬಗೆಹರಿಸಬೇಕಿದೆ ಎಂದು ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಹೇಳಿದರು.

ಪಾಂಚಜನ್ಯ ಗ್ರೂಫ್ ಆಫ್ ಸರ್ವೀಸ್ ಹಾಗೂ ಅಡ್ಕನಡ್ಕ ವಾರಣಾಸಿ ಸಂಶೋಧನಾ ಪ್ರತಿಷ್ಠಾನದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ವಾರಣಾಸಿ ಸಾವಯವ ವಿವಿಧ ಉತ್ಪನ್ನಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಅಧಿಕ ಇಳುವರಿ ದೊರಕುತ್ತದೆ ಎಂದಾಗ ಸಹಜವಾಗಿ ರೈತರು ಅದರತ್ತ ಆಕರ್ಷಿತರಾಗಿದ್ದಾರೆ. ಆದರೆ, ಹೀಗೆ ಭೂಮಿಗೆ ನಿರಂತರವಾಗಿ ರಾಸಾಯನಿಕಗಳನ್ನು ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಪರ್ಯಾಯ ಮಾರ್ಗದತ್ತ ಮನಸ್ಸು ಮಾಡುತ್ತಾರೆ ಎಂದರು.ವಿವಿಧ ರೀತಿಯ ಕೃಷಿ ಪದ್ಧತಿಗಳ ಪರಿಚಯದ ಜತೆಗೆ ಕೃಷಿ ಕ್ಷೇತ್ರವನ್ನು ಕಾಡುತ್ತಿರುವ ಕೂಲಿ ಕಾರ್ಮಿಕರ ಸಮಸ್ಯೆ, ಬೆಳೆಗಳಿಗೆ ತಗಲುತ್ತಿರುವ ವಿವಿಧ ಬಗೆಯ ರೋಗಗಳು ಇವೇ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಕೃಷಿಯಿಂದ ರೈತರು ವಿಮುಖ ಆಗುತ್ತಿರುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು.ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, 60ರ ದಶಕದಲ್ಲಿ ಭಾರತದಲ್ಲಿ ಉಂಟಾದ ಆಹಾರ ಸಮಸ್ಯೆಯನ್ನು ನೀಗಿಸಲು ರಾಸಾಯನಿಕ ಗೊಬ್ಬರವನ್ನು ವ್ಯಾಪಕವಾಗಿ ಬಳಸಲಾಯಿತು. ಅದಕ್ಕೂ ಮುನ್ನ ಸಾವಯವ ಕೃಷಿ ಪದ್ಧತಿ ಜಾರಿಯಲ್ಲಿತ್ತು. ಇದರ ಉಪಯುಕ್ತತೆಯನ್ನು ರೈತರು ಅರಿತಾಗ ಮಾತ್ರ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಸಾಧ್ಯ ಎಂದರು.ವಾರಣಾಸಿ ಸಂಶೋಧನಾ ಕೇಂದ್ರದ ಡಾ.ವಾರಣಾಸಿ ಕೃಷ್ಣಮೂರ್ತಿ, ಡಾ.ಅಶ್ವಿನಿ ಕೃಷ್ಣಮೂರ್ತಿ, ರಬ್ಬರ್ ಉತ್ಪಾದಕರ ಸಂಘದ ಚಂದ್ರು ಜಿ. ಉಳ್ಳೂರು, `ಮ್ಯಾಮ್ಕೊಸ್~ ನಿರ್ದೇಶಕ ಎಲ್.ಟಿ. ತಿಮ್ಮಪ್ಪ, ಬಿ.ಎಚ್. ರಾಘವೇಂದ್ರ, ಟಿಎಪಿಎಂಸಿಎಸ್ ಅಧ್ಯಕ್ಷ ಎಂ.ಸಿ. ರತ್ನಾಕರಗೌಡ, ಕೆ.ಸಿ. ದೇವಪ್ಪ, ಆರ್.ಎಸ್. ಗಿರಿ, ಕೆ.ಆರ್. ವೆಂಕಟ ರಾವ್,  ಡಿ.ಕೆ. ತಿಮ್ಮಪ್ಪ ಇದ್ದರು.ವಸಂತ ಲಕ್ಷ್ಮೀ ಪ್ರಾರ್ಥಿಸಿದರು. ಭಾಸ್ಕರ ಜೋಷಿ ಶಿರಳಗಿ ಪ್ರಾಸ್ತಾವಿಕ ಮಾತನಾಡಿದರು. ಪಿ.ಜಿ. ಗಣಪತಿ ಸ್ವಾಗತಿಸಿದರು. ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.