ಸಾಗುವಳಿ ಜಮೀನು ವಶ ಖಂಡಿಸಿ ಪ್ರತಿಭಟನೆ
ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ಹಳೇಹಳ್ಳಿ ಲಂಬಾಣಿಹಟ್ಟಿಯ ಬಗರ್ಹುಕುಂ ಸಾಗುವಳಿ ಮಾಡುತ್ತಿರುವ ವೆಂಕಟೇಶ್ನಾಯ್ಕ ಹಾಗೂ ಇತರರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಆಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಹೊಳಲ್ಕೆರೆ ತಾಲ್ಲೂಕಿನ ಹಳೇಹಳ್ಳಿ ಲಂಬಾಣಿ ಹಟ್ಟಿಯ ರಿ.ಸರ್ವೆ ನಂ. 61ರಲ್ಲಿ ವೆಂಕಟೇಶ ನಾಯ್ಕ, ಶಾಂತಿಬಾಯಿ ಮತ್ತು ಚಂದ್ರನಾಯ್ಕ ಎನ್ನುವವರು ಕಳೆದ 30 ವರ್ಷಗಳಿಂದ ಬಗರ್ಹುಕುಂ ಅಡಿಯಲ್ಲಿ ಸಾಗುವಳಿ ಮಾಡುವ ಮೂಲಕ ಬದುಕು ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ತಹಶೀಲ್ದಾರ್ ಅವರು ಸರ್ಕಾರಿ ಕಟ್ಟಡ ನಿರ್ಮಾಣ ಮಾಡುವುದಕ್ಕಾಗಿ ಸಾಗುವಳಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದೌರ್ಜನ್ಯಎಸಗಿ ಅಕ್ರಮವಾಗಿ ನಿರ್ಮಿಸುತ್ತಿರುವ ಸರ್ಕಾರಿ ಕಟ್ಟಡಗಳನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಸಂಚಾಲಕ ರಾಘವೇಂದ್ರನಾಯ್ಕ, ಸಂಚಾಲಕ ಆರ್. ನಿಂಗಾನಾಯ್ಕ, ರಾಜ್ಯ ಸಂಚಾಲಕ ನರೇನಹಳ್ಳಿ ಅರುಣ್ ಕುಮಾರ್, ಮಾಜಿ ಶಾಸಕ ಉಮಾಪತಿ, ಮುರುಘ ರಾಜೇಂದ್ರ ಒಡೆಯರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.