ಮಹಿಳೆಯರು ಸಾಮಾಜಿಕ ಕ್ಷೇತ್ರಕ್ಕೆ ಬರುವುದೇ ಅಪರೂಪವಾದ ಕಾಲಘಟ್ಟದಲ್ಲಿ ಉದ್ಯಮ ಸ್ಥಾಪಿಸಿ, ಈಗ ಮಾರ್ಗದರ್ಶಕರ ಸಾಲಿನಲ್ಲಿ ನಿಂತವರು ಅನೇಕರು.

ಮನೆಯನ್ನು ನಿಭಾಯಿಸುತ್ತಲೇ ಉದ್ಯಮ-ವ್ಯಾಪಾರ-ವ್ಯವಹಾರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಪಾಲ್ಗೊಂಡರು. ಪರಿಣಾಮ ಅವರನ್ನು ಕಂಡು, ಹಲವರು ಮುಂದೆ ಬಂದರು. ಸಮಾಜದಲ್ಲಿ ಮಹಿಳೆಯರು ಮುನ್ನುಗ್ಗಲು ನಾಂದಿ ಹಾಡಿದಂತ ಹಲವು ಮಹಿಳೆಯರುನ್ನು ಎಫ್ಕೆಸಿಸಿಐನ ಮಹಿಳಾ ಉದ್ಯಮಿಗಳ ಮಂಡಳಿಯು ಮಾರ್ಚ್ 8ರಂದು ಗುರುವಾರ ಹೋಟೆಲ್ ಅಶೋಕದಲ್ಲಿ ಸನ್ಮಾನಿಸುತ್ತಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ 15 ಜನರು ಗೌರವಕ್ಕೆ ಪಾತ್ರರಾಗಿದ್ದಾರೆ. ಹೈದರಾಬಾದ್ ಕರ್ನಾಟಕದಂತ ಪ್ರದೇಶದಲ್ಲಿ ಉದ್ಯಮಿಯಾಗಿ ಹೆಸರು ಮಾಡಿರುವ ಉಷಾ ಲಾಹೋಟಿ, ಫೈನಾನ್ಸ್ ಕ್ಷೇತ್ರದಿಂದ ಮೀರಾ ರಘೋಜಿ, ಬೀದರ್ನ ಕರುಣಾ ರಾಮ್ತೆರೆ, ಗಂಗಾವತಿ ಶೈಲಜಾ ಹಿರೇಮಠ, ಕೊಪ್ಪಳದ ಸಾವಿತ್ರಿ ಮಜುಮ್ದಾರ್, ಗದಗ್ ಜಿಲ್ಲೆಯ ಮುಂಡರಗಿಯ ರೇಣುಕಾ ಎಂ.ಹಂದ್ರಾಳ, ಜಯಶ್ರೀ ಬಸಯ್ಯ ಹಿರೇಮಠ, ಬಿಜಾಪುರದ ಅನ್ನಪೂರ್ಣ ಶ್ರೀಶೈಲ ನಾಗರಾಳ, ಬಳ್ಳಾರಿಯ ಬೀನಾ ಶ್ರೀನಿವಾಸ್, ಮುಧೋಳ್ನ ಕಮಲಾ ಮುರುಗೇಶ್ ನಿರಾಣಿ, ಮೈಸೂರಿನ ರಾಜೀ ವಿ. ರಾಮನ್, ಶಿವಮೊಗ್ಗದ ಗೌರಿ ಬದ್ರಿ, ಸಹಕಾರಿ ಬ್ಯಾಂಕ್ ಕ್ಷೇತ್ರದಿಂದ ಹಾಸನದ ವನಜಾರಾವ್, ಮಂಗಳೂರಿನ ನಿರ್ಮಲಾ ಕಾಮತ್, ಮಣಿಪಾಲ್ನ ಸಾಧನಾ ಕಿಣಿ, ಉಡುಪಿಯ ಡಾ.ಎಚ್. ಜಿ.ಗೌರಿ ಮುಂತಾದವರನ್ನು ಸನ್ಮಾನಿಸಲಾಗತ್ತಿದೆ.

ಡಾ.ಟಿ ಸದಾನಂದ ಗೌಡ, ದೊಡ್ಡ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ, ರಾಜ್ಯ ಮಹಿಳಾ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥೆ ಸರೋಜಿನಿ ಭಾರದ್ವಾಜ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಥಳ: ಹೈಗ್ರೌಂಡ್ಸ್ ಬಳಿ ಇರುವ ಹೋಟೆಲ್ ಲಲಿತ್ ಅಶೋಕ್, ಸಮಯ: ಮಧ್ಯಾಹ್ನ 3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.