ಭಾನುವಾರ, ಜನವರಿ 19, 2020
28 °C

ಸಾರ್ಥಕ ಸೇವೆಯಲ್ಲಿ ಸರ್ಕಾರಿ ನೌಕರರ ಸಂಘ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ:   ರಾಜ್ಯ ಸರ್ಕಾರಿ ನೌಕರರು ಕೇವಲ ಸಂಬಳಕ್ಕೆ ಸೀಮಿತ ಎನ್ನುವ ಮಾತಿಗೆ ವ್ಯತ್ತಿರಿಕ್ತವಾಗಿ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಅಪರೂಪ ನಿರ್ದಶನ ರೋಣದಲ್ಲಿ ಬೆಳಕಿಗೆ ಬಂದಿದೆ.

 

ರೋಣ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಘಟಕ  ಸಂಘದ ಆದಾಯವನ್ನು ಹೆಚ್ಚಿಸುವ ಜೊತೆಗೆ ನೌಕರರಲ್ಲಿ ಜನರಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಮೂಢಿಸುವ ಕಾರ್ಯದಲ್ಲಿ ನಿರತವಾಗಿದೆ.ಪ್ರಸ್ತುತ ತಾಲ್ಲೂಕು ನೌಕರರ ಸಂಘದ ಕಾರ್ಯಾಲಯ ಇರುವ ಸ್ಥಳದಲ್ಲಿ ಸಂಘದ ವತಿಯಿಂದ ನೂತನ ಮಾರುತಿ ದೇವಸ್ಥಾನ ನಿರ್ಮಾಣಗೊಂಡಿದೆ.

 

ಮನಸೆಳೆಯುವ ಮಾರುತಿ ಮೂರ್ತಿಯನ್ನು ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಶಿಲ್ಪಿ ಬಾಗಲಕೋಟೆಯ ಮಾಯಚಾರಿ ಅತ್ಯಾಕರ್ಷಕ ಶೈಲಿಯಲ್ಲಿ  ಕೆತ್ತನೆ ಮಾಡಿದ್ದಾರೆ.  ಸಂಘದ ಸದಸ್ಯರೊಂದಿಗೆ ಪಟ್ಟಣದ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಕೊಡಗೈ ದಾನಿಗಳಾಗಿದ್ದು ದೇವಸ್ಥಾನ ಸುಂದರವಾಗಿ ನಿರ್ಮಾಣಗೊಂಡಿದೆ. ನೌಕರರ ಸಂಘಕ್ಕೆ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗಿದ್ದು ವಾಣಿಜ್ಯ ಮಳಿಗೆಗಳಿಂದ ಗಳಿಸುವ ಆದಾಯವನ್ನು ಸಂಘದ ವಿವಿಧ ರಚನಾತ್ಮಕ ಸಾಮಾಜಿಕ ಚಟುವಟಿಕಗಳಿಗಾಗಿ ಬಳಸುವ ಉದ್ದೇಶವನ್ನು ಹೊಂದಲಾಗಿದೆ.ಸಂಘವು ಕೈಕೊಳ್ಳುವ ಪ್ರಗತಿಪರ ಸಾಮಾಜಿಕ ಕಾರ್ಯಗಳಿಗೆ ಬೆನ್ನಲಬಾಗಿ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ಮಡಿವಾಳರ ತಮ್ಮ ಸಂಘದ ಪದಾಧಿಕಾರಿಗಳೊಂದಿಗೆ ಸಂಘದ ಅಭಿವದ್ಧಿ ಏಳ್ಗಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ, ಅಧ್ಯಕ್ಷರ ನಿರಂತರ ಪ್ರಯತ್ನಗಳಿಗೆ ತಾಲ್ಲೂಕ ನೌಕರ ವರ್ಗದವರು ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡುತ್ತಿರುವ  ಪ್ರತಿಫಲವಾಗಿ ಸಂಘ ವಿಶಿಷ್ಟ ಕಾರ್ಯಗಳಿಗೆ ಹೆಸರಾಗಿದೆ.

ಪ್ರತಿಕ್ರಿಯಿಸಿ (+)