ಶಿರಹಟ್ಟಿ: ಆರ್ಥಿಕವಾಗಿ ಪ್ರಗತಿ ಹೊಂದಲು ಬ್ಯಾಂಕ್ಗಳ ಸಹಾಯ ಅತ್ಯಗತ್ಯ. ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಬ್ಯಾಂಕ್ಗಳ ಸಹಕಾರ ಅನನ್ಯವಾದದು ಎಂದು ಗದಗ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವ ಸ್ಥಾಪಕ ಕೆ. ನರಸಿಂಹಲು ಹೇಳಿದರು.

ತಾಲೂಕಿನ ಶ್ರೀಮಂತಗಡ ಗ್ರಾಮದ ಶ್ರೀಕ್ಷೇತ್ರ ಹೂಳಲಮ್ಮ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕೆಸಿಸಿ ಬ್ಯಾಂಕ್, ನಬಾರ್ಡ್ ಹಾಗೂ ರೂರಲ್ ಎಜ್ಯುಕೇಷನ್ ಲಿಬರ್ಟಿ ರಿಯಲ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಂಟಿ ಬಾಧ್ಯತಾ ಗುಂಪಿನ ಸದಸ್ಯರಿಗೆ ಒಂದು ದಿನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬಡ ವರ್ಗದ ಜನರು ಬ್ಯಾಂಕ್ಗಳಲ್ಲಿ ಸಾಲವನ್ನು ತೆಗೆದುಕೊಂಡು ಕುಟುಂಬದ ಆರ್ಥಿಕ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಸಾಲ ಮರು ಪಾವತಿಸುವ ಮೂಲಕ ಬ್ಯಾಂಕ್ಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು. ಎಸ್ಎಚ್ಎಜಿ ನೋಡಲ್ ಅಧಿಕಾರಿ ಎಸ್.ವಿ. ನಾಯ್ಕರ ಮಾತನಾಡಿ, ಕೆಸಿಸಿ ಬ್ಯಾಂಕ್ ಅಡಿಯಲ್ಲಿ 9 ಸಾವಿರ ಸ್ವ ಸಹಾಯ ಗುಂಪುಗಳನ್ನು ರಚಿಸಿದ್ದು, 11 ಕೋಟಿ ಹಣಕಾಸಿನ ವ್ಯವಹಾರವನ್ನು ಮಾಡುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಹೂಳಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ನಿಂಗಪ್ಪ ಮಕರಂಬಿ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಜಿಲ್ಲಾ ಉಸ್ತುವಾರಿ ಅಧಿಕಾರಿ ವಿ.ಬಿ. ಪಾಟೀಲ, ಎಸ್.ಜಿ.ಚೋಟಗಲ್, ಎಸ್.ವಿ.ಪಾಟೀಲ, ಟಿ.ಎಸ್. ಹೊಸ ರಿತ್ತಿ ಹಾಗೂ 60 ಗುಂಪುಗಳ ಸದ ಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.