ಬೆಂಗಳೂರು: `ಚಲನಚಿತ್ರ ಕಲಾವಿದರನ್ನೂ ನಾಚಿಸುವಂತಹ ರಾಜಕಾರಣಿಗಳಿದ್ದಾರೆ. ಇಂತಹ ರಾಜಕಾರಣಿಗಳ ಮುಂದೆ ಕಲಾವಿದರು ತುಸು ಸಪ್ಪೆ ಎನಿಸುತ್ತಾರೆ~ ಎಂದು ವಿಧಾನ ಪರಿಷತ್ ಸದಸ್ಯ ಸಾಹಿತಿ ಡಾ. ದೊಡ್ಡರಂಗೇಗೌಡ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾ ರಂಭದಲ್ಲಿ ಪತ್ನಿ ಡಾ.ರಾಜೇಶ್ವರಿ ಗೌಡ ಅವರೊಂದಿಗೆ ಡಾ.ಎಸ್.ಎಂ. ವೃಷ ಭೇಂದ್ರಸ್ವಾಮಿ ಮತ್ತು ಪ್ರೊ.ಲಲಿತಾಂಬ `ಸಾಹಿತ್ಯ ದಂಪತಿ~ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

`ಸತ್ಯದ ತಲೆಯ ಮೇಲೆ ಹೊಡೆದಂತೆ ನಟನೆ ಮಾಡುವ ರಾಜಕಾರಣಿಗಳೇ ಹೆಚ್ಚು. ಈ ರೀತಿಯ ರಾಜಕಾರಣಿ ಗಳನ್ನು ಮೀರಿಸುವಂತಹ ಸಾಹಿತಿಗಳಿದ್ದಾರೆ. ಈ ಸಾಹಿತಿಗಳಿಗೆ ಯಾವ ರಾಜಕಾರಣಿಗಳು ಸಾಟಿಯಿಲ್ಲ~ ಎಂದರು.
`ಕೆಲ ಸಾಹಿತಿಗಳು ಇತರರನ್ನು ತುಳಿಯಲು ನಿರಂತರವಾಗಿ ಷಡ್ಯಂತ್ರ ನಡೆಸುತ್ತಾರೆ.

ಮತ್ತೆ ಬರವಣಿಗೆಯಲ್ಲಿ ತೊಡಗದಂತೆ ಮಾಡುವಷ್ಟರ ಮಟ್ಟಿಗೆ ದೌರ್ಜನ್ಯ ನಡೆಸುತ್ತಾರೆ. ಇಂತಹವರ ಬಗ್ಗೆ ಅಸಹ್ಯವೆನಿಸಿ ಬರೆಯಲೇ ಬಾರದೆನಿಸುತ್ತದೆ. ಆದರೂ ಬರವಣಿಗೆಯ ಗೀಳು ಹೋಗುತ್ತಿಲ್ಲ~ ಎಂದರು.

`ನನ್ನನ್ನು ಇಂದಿಗೂ ವಿಮರ್ಶಕರು ಕವಿ ಎಂದು ಪರಿಗಣಿಸಿಯೇ ಇಲ್ಲ. ನನಗೆ ಕಿರುಕುಳ ನೀಡಿದ ಸಾಹಿತ್ಯ ಲೋಕದ ಗೋಸುಂಬೆ, ಊಸರವಳ್ಳಿ, ಹಂದಿ, ತಿಮಿಂಗಲ, ಹುಲಿ, ಚಿರತೆ, ನರಿ ಬುದ್ದಿಯವರ ಬಗ್ಗೆ ನನ್ನ ಆತ್ಮಕಥನದಲ್ಲಿ ಅನಾವರಣಗೊಳಿಸುತ್ತೇನೆ~ ಎಂದರು.

`ಜನರಲ್ಲಿ ಜಾಗೃತಿ ಮೂಡಿಸದವನು ಸಾಹಿತಿಯೇ ಅಲ್ಲ. ಸಾಹಿತಿ ಎಂದರೆ ಸಮಾಜ ವಿಜ್ಞಾನಿ ಇದ್ದಂತೆ. ಸಮಾಜದಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರ, ಅನೀತಿಯ ಬಗ್ಗೆ ತಿಳಿಸುವುದು ಸಾಹಿತಿಯ ಹೊಣೆ~ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, `ದೊಡ್ಡರಂಗೇಗೌಡರು ಪರಿಸ್ಥಿತಿಗೆ ರಾಜಿಯಾಗದೇ ಸಾಮಾಜಿಕ ಬದಲಾವಣೆಗೆ ತಮ್ಮದೇ ಆದ ಪ್ರಯತ್ನ ನಡೆಸಿ ಮಾದರಿಯಾದರು~ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ` ನಿಮ್ಮನ್ನು ಓದುಗರು ಒಪ್ಪಿದರೆ ಸಾಕು. ವಿಮರ್ಶಕರು ಒಪ್ಪದಿದ್ದರೆ ನಷ್ಟವಿಲ್ಲ. ಆದರೆ ಈ ಕಲುಷಿತ ವಾತಾವರಣ ಆದಷ್ಟು ಬೇಗ ಅಂತ್ಯವಾಗಲಿದೆ~ ಎಂದು ಹೇಳಿದರು. ಸಾಹಿತಿಗಳಾದ ಪ್ರೇಮಾಭಟ್, ಡಾ.ಬೈರಮಂಗಲ ರಾಮೇಗೌಡ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.