ಸೋಮವಾರ, ಮಾರ್ಚ್ 1, 2021
24 °C

ಸಾಹಿತ್ಯ ಅಭಿರುಚಿ ಜನಸಾಮಾನ್ಯರಲ್ಲಿ ಬೆಳೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತ್ಯ ಅಭಿರುಚಿ ಜನಸಾಮಾನ್ಯರಲ್ಲಿ ಬೆಳೆಯಲಿ

ದೇವದುರ್ಗ: ಸಾವಿರಾರು ವರ್ಷ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಲೋಕಕ್ಕೆ ಕೆಲವೇ ಅಭಿರುಚಿಕರು ಹೊಂದಿದ್ದು, ಮುಂದಿನ ದಿನಮಾನಗಳಲ್ಲಿ ಜನಸಾಮಾನ್ಯರಿಗೂ ಇದರ ವ್ಯಾಪ್ತಿ ಬೆಳೆಯುವಂತೆ ಆಗಬೇಕಾಗಿದೆ ಎಂದು ಉಪನ್ಯಾಸಕ ಶಂಕರರಾವ್ ಉಭಾಳೆ ಅಭಿಪ್ರಾಯಪಟ್ಟರು.ಪಟ್ಟಣದ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ರಂಗಮ್ಮರಂಗಪ್ಪ ಅಕ್ಕರಿಕಿ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದರು.ದತ್ತಿಯನ್ನು ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮತಗೊಳಿಸುವ ಸಂಪ್ರದಾಯ ನಡೆದಿರುವುದು ಸಂತೋಷದಾಯವಾಗಿದೆ ಎಂದರು.ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಿ.ಎಸ್. ಪಾಟೀಲ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಅವರು ಅಧ್ಯಕ್ಷತೆ ವಹಿಸಿದ್ದರು.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರಂಗಣ್ಣ ಪಾಟೀಲ ಅಳ್ಳುಂಡಿ ಅವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮುನಿಯಪ್ಪ ನಾಗೋಲಿ ಮತ್ತು ಸಿಪಿಐ ಎಸ್.ವೈ. ಹುಣಿಶಿಕಟ್ಟಿ ಅವರು ಜನಪದ ಸಾಹಿತ್ಯ ಕುರಿತು ಮಾತನಾಡಿದರು.ಉದ್ಘಾಟನೆ: ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯವನ್ನು ಕಸಾಪ ಜಿಲ್ಲಾ ಗೌರವ ಅಧ್ಯಕ್ಷ ಶರಣೇಗೌಡ ಅವರು ಉದ್ಘಾಟನೆ ಮಾಡಿದರು.ಹೊಸದಾಗಿ ದತ್ತಿ ನೀಡಿದ ಬಸವರಾಜಪ್ಪ ಬಂಡೆಗುಡ್ಡ ಮತ್ತು ನಿರಂಜನ ಬಳೆ ಮಸರಕಲ್, ಭಾರತಿ ಕೋಡಿಮಠ, ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದಿರುವ ವಿದ್ಯಾರ್ಥಿನಿ ಸಂಜನಾ ಅವರ ಪಾಲಕರಾದ ಕೆ. ಶರಣಗೌಡ, ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಮಟ್ಟ ಮೊದಲ ಬಾರಿಗೆ 50 ಲಕ್ಷ ಬಹುಮಾನ ಪಡೆದಿರುವ ಶಿಕ್ಷಕ ಪಂಪಣ್ಣ ಅವರಿಗೆ ಕಾರ್ಯಕ್ರಮದ ವತಿಯಿಂದ ಸನ್ಮಾನಿಸಲಾಯಿತು.ಹಸ್ತಾಂತರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ಗೆ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನರಸಿಂಗರಾವ್ ಸರ್ಕಿಲ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಅವರು ಕನ್ನಡ ಧ್ವಜ ನೀಡುವ ಮೂಲಕ ಅಧಿಕಾರಿ ಹಸ್ತಾಂತರ ಮಾಡಿದರು.ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಅಧ್ಯಕ್ಷ ಶರಣೇಗೌಡ, ಕಾರ್ಯದರ್ಶಿ ದೇವಿಂದ್ರಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ನರಸಿಂಗರಾವ್ ಸರ್ಕಿಲ್, ಪದಾಧಿಕಾರಿಗಳಾದ ವನಜಾಕ್ಷಮ್ಮವಾರದ, ಇಕ್ಬಾಲ್‌ಸಾಬ ಅರಕೇರಾ, ಬಸವರಾಜ ಅಕ್ಕರಿಕಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕನ್ಯಾ ಮಾದರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶಿವರಾಜ ಅಕ್ಕಿಕಲ್, ಭೀಮೋಜಿರಾವ್ ಜಗತಾಪ್ ನಿರೂಪಿಸಿದರು, ಪ್ರಾಣೇಶ ಶೆಟ್ಟಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.