ಸಾಹಿತ್ಯ ಸಂಜೆಯಲ್ಲಿ ಲಕ್ಷ್ಮೀನಾರಾಯಣ ಭಟ್ಟ

ಬುಧವಾರ, ಮೇ 22, 2019
29 °C

ಸಾಹಿತ್ಯ ಸಂಜೆಯಲ್ಲಿ ಲಕ್ಷ್ಮೀನಾರಾಯಣ ಭಟ್ಟ

Published:
Updated:

ಸುಚಿತ್ರ ಕಲಾಕೇಂದ್ರ: ಶನಿವಾರ ತಿಂಗಳ ಸಾಹಿತ್ಯ ಸಂಜೆಯಲ್ಲಿ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರೊಂದಿಗೆ ಸಂವಾದ. ಕಾವ್ಯವಾಚನ.ಶಿವಮೊಗ್ಗದಲ್ಲಿ ಜನಿಸಿದ ಭಟ್ಟರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರು ಸಾಹಿತಿಯಾಗಿಯೂ ಜನಪ್ರಿಯರು. ಅಲ್ಲದೇ ವಿಮರ್ಶಕ, ಅನುವಾದಕರಾಗಿದ್ದಾರೆ. `ವೃತ್ತ~, `ಸುಳಿ~, `ಚಿತ್ರಕೂಟ~ ಸೇರಿದಂತೆ ಹಲವು ಕವನ ಸಂಗ್ರಹಗಳನ್ನು ಹೊರತಂದಿದ್ದಾರೆ. `ದೀಪಿಕಾ~, `ಭಾವಸಂಗಮ~, `ಬಂದೇ ಬರತಾವ ಕಾಲ~ ಮುಂತಾದ ಮಧುರ ಭಾವಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಷೇಕ್ಸ್‌ಪಿಯರ್, ಟಿ.ಎಸ್. ಈಲಿಯಟ್ ಮತ್ತು ಯೇಟ್ಸ್‌ರಂಥಹ ಲೇಖಕರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಭಾವಗೀತದ ಪ್ರಚಾರ ಕಾರ್ಯದಲ್ಲಿ ವಿಶೇಷವಾಗಿ ದುಡಿದಿದ್ದಾರೆ.  ರಾಜ್ಯ ಸಾಹಿತ್ಯ ಅಕಾಡೆಮಿಯು ಅವರ ಕೃತಿಗಳಿಗೆ ಮೂರು ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮಡಿಲಿಗೆ ಸಂದಿದೆ.ಸ್ಥಳ: ಕಿ.ರಂ. ನುಡಿಮನೆ, ಸುಚಿತ್ರ ಆವರಣ, ನಂ36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 5.30.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry