ಸಿಂಧನೂರು: ನಗರದ ಜನತೆಯ ಹಲವು ದಶಕಗಳ ಬೇಡಿಕೆಯಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನ ಶಾಸಕ ನಾಡಗೌಡರ ಪ್ರಯತ್ನದಿಂದ ಪ್ರಾರಂಭವಾಯಿತು ಎನ್ನುವಷ್ಟರಲ್ಲಿಯೇ ಬಾಲಗ್ರಹಕ್ಕೀಡಾಗಿದೆ.
ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದರು. ಕಳೆದ ಆಗಸ್ಟ್ 15, 2011ರಂದು ಶಾಸಕರೇ ಶಂಕುಸ್ಥಾಪನೆಗೆ ಚಾಲನೆ ನೀಡುವ ಮೂಲಕ ಕಲಾಸಕ್ತರ ಆಸಕ್ತಿ ನೀರೆರೆದಿದ್ದರು.

ರೂ. 1.34,34,830 ಅಂದಾಜು ಪತ್ರಿಕೆಯನ್ನು ತಯಾರಿಸಿ ನಗರದ ಅವಶ್ಯಕ ಬೇಡಿಕೆಯಾದ ಸಾಂಸ್ಕೃತಿಕ ಭವನಕ್ಕೆ ನೆರವು ನೀಡುವಂತೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ, ವಿಜಯ್ ಮಲ್ಯ, ನಾರಾಯಣಸ್ವಾಮಿ ಅವರಲ್ಲಿ ಶಾಸಕ ವೆಂಕಟರಾವ್ ನಾಡಗೌಡರು ಮಾಡಿಕೊಂಡ ಮನವಿಗೆ ತಲಾ 20 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.

ಕೆಲಸ ಪ್ರಾರಂಭಿಸಿ ಕಾಮಗಾರಿ ಅರ್ಧಕ್ಕೆ ನಿಂತಿದ್ದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಭರವಸೆ ನೀಡಿದವರಿಂದ ಇಲ್ಲಿಯವರೆಗೆ ನಯಾಪೈಸೆ ಅನುದಾನ ಬಿಡುಗಡೆಯಾಗದಿರುವುದು ಸಿಂಧನೂರಿನ ಸಾಂಸ್ಕೃತಿಕ ವಲಯದಲ್ಲಿ ಅಸಮಾಧಾನ ಮೂಡಿಸಿದೆ.

ನಗರಸಭೆಗೆ ಮಂಜೂರಾಗುವ ಕರ್ನಾಟಕ ರಾಜ್ಯ ಹಣಕಾಸು ನಿಧಿಯಲ್ಲಿ 31ಲಕ್ಷ ಹಣವನ್ನು ನಗರಸಭಾ ಸದಸ್ಯರ ಅನುಮತಿಯ ಮೇರೆಗೆ ಸಾಂಸ್ಕೃತಿಕ ಭವನಕ್ಕೆ ಪಡೆಯುವುದಾಗಿ ಶಾಸಕರು ಹೇಳಿದ್ದರು. ಈ ಹಣವೂ ಕೂಡ ಬಿಡುಗಡೆಯಾಗದಿರುವುದು ಒಂದುಕಡೆಯಾದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾದ ಹಣವನ್ನು ಸಹ ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರದವರಿಗೆ ನೀಡದಿರುವುದಿಂದ ಕಾಮಗಾರಿ ಬುನಾದಿಯಿಂದ ಮೇಲೆದ್ದಿಲ್ಲ.

ಕಟ್ಟಡದ ಸಿಮೆಂಟ್ ಕಂಬಗಳನ್ನು ಹಾಕಲು ತೋಡಿರುವ ಗುಂಡಿಗಳನ್ನು ಹಾಗೆಯೇ ಬಿಟ್ಟಿದ್ದು, ಈಗಾಗಲೇ ಮೂರು ಆಕಳುಗಳು ಇಲ್ಲಿ ಬಿದ್ದು ಮೃತಪಟ್ಟಿವೆ. ಇನ್ನು ಮಳೆಗಾಲ ಬರುವುದರಿಂದ ಹೆಚ್ಚಿನ ಅನಾಹುತಗಳಾಗುವ ಸಂಭವಗಳಿವೆ ಎಂದು ಸುತ್ತಮುತ್ತಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆ ಮಾಡುವ ಮೂಲಕ ಕಾಮಗಾರಿ ಮುಂದುವರೆಸಲು ಅನುಕೂಲ ಕಲ್ಪಿಸುವಂತೆ ಸಮುದಾಯ ಸಂಘಟನೆಯ ಮುಖಂಡ ದೇವೇಂದ್ರಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಮಾದೇವಿ ಶಂಭೋಜಿ ಮತ್ತು ಪಿ.ಲಂಕೇಶ್ ಬಳಗದ ಸಂಚಾಲಕ ಬಸವರಾಜ ಹಳ್ಳಿ ಮತ್ತಿತರರು ಒತ್ತಾಯಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒಂದು ಸಣ್ಣ ಕೊಠಡಿಯೂ ಇಲ್ಲದ ಸಿಂಧನೂರಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಅವಶ್ಯಕತೆ ಇರುವುದರಿಂದ ಶಾಸಕರು ಕಾಮಗಾರಿ ಮುಂದುವರೆಸಲು ಮುತುವರ್ಜಿ ವಹಿಸಬೇಕೆನ್ನುವುದು ಸಾರ್ವಜನಿಕರ ಆಶಯ.
-ಡಿ.ಎಚ್.ಕಂಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.