ವಿಜಾಪುರ: ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಇದೇ 10ರಂದು (ಮಂಗಳವಾರ) ನಗರದಲ್ಲಿ ಜನತಾ ದರ್ಶನ ನಡೆಸಲಿದ್ದಾರೆ.

ನಗರದಲ್ಲಿ ಮುಖ್ಯಮಂತ್ರಿಗಳು ಇದೇ ಮೊದಲ ಬಾರಿಗೆ ಜನತಾ ದರ್ಶನ ನಡೆಸುತ್ತಿರುವುದರಿಂದ ತಮ್ಮ ಕುಂದು–ಕೊರತೆಗಳನ್ನು ಅವರ ಗಮನಕ್ಕೆ ತರಲು ಜನತೆ ಉತ್ಸುಕರಾಗಿದ್ದರೆ, ಕೆಲ ಅಧಿಕಾರಿಗಳು ಕೊರೆಯುವ ಚಳಿಯಲ್ಲಿಯೂ ಬೆವರುತ್ತಿದ್ದಾರೆ.

ಬೆಂಗಳೂರಿನಿಂದ ಮಧ್ಯಾಹ್ನ 12ಕ್ಕೆ ಇಲ್ಲಿಗೆ ಆಗಮಿಸುವ ಮುಖ್ಯಮಂತ್ರಿ ಗಳು, ಜಿಲ್ಲಾ ಪಂಚಾಯಿತಿ ಕಚೇರಿ ಎದುರಿನ ಮಿನಿ ವಿಧಾನಸೌಧ (ತಹಶೀ ಲ್ದಾರ್ ಕಚೇರಿ) ಆವರಣದಲ್ಲಿ ಮಧ್ಯಾಹ್ನ 12.15ರಿಂದ 1 ಗಂಟೆಯ ವರೆಗೆ ಜನತಾ ದರ್ಶನ ನಡೆಸಲಿ ದ್ದಾರೆ.

ಇದಕ್ಕಾಗಿ ಶಾಮಿಯಾನ ಹಾಕ ಲಾಗಿದ್ದು, ಜನರನ್ನು ನಿಯಂತ್ರಿಸಲು ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಶಾಮಿಯಾನದಲ್ಲಿ ತಂಗಬೇಕು. ಮುಖ್ಯಮಂತ್ರಿಗಳೇ ಅವರ ಬಳಿಗೆ ತೆರಳಿ ಅರ್ಜಿ ಸ್ವೀಕರಿಸಲಿದ್ದಾರೆ. ಸಲ್ಲಿಕೆಯಾಗುವ ಅರ್ಜಿಗಳನ್ನು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ಸೋಮ ವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ, ಮುಖ್ಯಮಂತ್ರಿಗಳಿಗೆ ಸಲ್ಲಿಸ ಬೇಕಾದ ಬೇಡಿಕೆಗಳ ಕುರಿತು ಚರ್ಚಿಸ ಲಾಯಿತು.

ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸುವುದು. ವಿಮಾನ ನಿಲ್ದಾಣ ಸ್ಥಾಪನೆ, ದ್ರಾಕ್ಷಿ ಬೆಳೆ ಹಾನಿ ಪರಿಹಾರ ಮತ್ತು ರೈತರ ಇತರ ಬೇಡಿಕೆಗಳ ಈಡೇರಿಕೆ. ಕುಡಿಯುವ ನೀರಿನ ಸಮಸ್ಯೆ. ಧಾರವಾಡದಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ ವಲಯ ಕಚೇರಿಯನ್ನು ವಿಜಾಪುರಕ್ಕೆ ಸ್ಥಳಾಂತರಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಜಿಲ್ಲಾ ಆಡಳಿತದಿಂದ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಜನತಾ ದರ್ಶನದ ನಂತರ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ನಡೆಸುವ ಮುಖ್ಯಮಂತ್ರಿಗಳು, ಮಧ್ಯಾಹ್ನ 3.10ಕ್ಕೆ ನಗರದಿಂದ ಬೆಂಗಳೂರಿಗೆ ವಾಪಸ್ಸಾಗುವರು.

ಜಿಲ್ಲಾಧಿಕಾರಿ ರಿತ್ವಿಕ್ ಪಾಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಎಸ್ಪಿ ಅಜಯ್ ಹಿಲೋರಿ, ಜಿ.ಪಂ. ಸಿಇಒ ಶಿವಕುಮಾರ ಅವರು ಜನತಾ ದರ್ಶನ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.