ಗುರುವಾರ , ಜನವರಿ 23, 2020
20 °C

ಸಿಗ್ನಲ್ ಸಮಯ ಹೆಚ್ಚಿಸಿ

–ಯುವರಾಜ,ಮತ್ತಿಕೆರೆ Updated:

ಅಕ್ಷರ ಗಾತ್ರ : | |

ಸದಾಶಿವನಗರ ಬಾಷ್ಯಂ ವೃತ್ತದ ಸ್ಯಾಂಕಿ ರಸ್ತೆಯಲ್ಲಿ ಕಳೆದ ಎರಡು ತಿಂಗಳಿನಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ.ಕಾರಣ ಟಾಟಾ ಇನ್‌ಸ್ಟಿಟ್ಯೂಟ್‌ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು. ನಾಲ್ಕು ವರ್ಷಗಳಾದರೂ ಕಾಮಗಾರಿ ಪೂರ್ಣವಾಗದೇ ಆಮೆಗತಿಯಲ್ಲಿ ಸಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಆದರೆ ಮೇಲ್ಸೇತುವೆ ಕೆಳಭಾಗದಲ್ಲಿ ಶಿವಾಜಿನಗರಕ್ಕೆ ಹೋಗುವ ರಸ್ತೆ ಮಾಡುತ್ತಿರುವುದರಿಂದ ಶಿವಾಜಿನಗರಕ್ಕೆ ಸಂಚರಿಸುವ ವಾಹನಗಳನ್ನು ಬಾಷ್ಯಂ ವೃತ್ತದ ಮೂಲಕ ಬಿಡುತ್ತಿದ್ದಾರೆ.ಇದರಿಂದಾಗಿ ಸ್ಯಾಂಕಿ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಅತಿಯಾದ ಸಂಚಾರ ದಟ್ಟಣೆಯಾಗುತ್ತಿದ್ದು ಗಂಟೆಗಟ್ಟಲೆ ಕಾಯಬೇಕಾಗಿದೆ. ಆದ್ದರಿಂದ ಸ್ಯಾಂಕಿರಸ್ತೆ ಕಡೆಯ ವಾಹನಗಳಿಗಾಗಿ ಹೆಚ್ಚು ಸಮಯ ಸಿಗ್ನಲ್‌ ಮುಕ್ತಮಾಡಬೇಕು. ಇದರಿಂದ ಸಂಚಾರದಟ್ಟಣೆ ಸಲ್ಪ ಕಡಿಮೆಯಾಗಬಹುದು.

ಪ್ರತಿಕ್ರಿಯಿಸಿ (+)