`ಯಮ್ಲಾ ಪಗ್ಲಾ ದಿವಾನಾ 2' ಚಿತ್ರದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ತಂದೆ ಧರ್ಮೇಂದ್ರ, ತಮ್ಮ ಬಾಬಿ ಜತೆ ಊರೂರು ಅಲೆಯುತ್ತಿರುವ ನಟ ಸನ್ನಿ ಡಿಯೋಲ್ ಇತ್ತೀಚೆಗೆ ಮುಂಬೈನಲ್ಲಿದ್ದರು.

ಪ್ರಚಾರ ಕಾರ್ಯಕ್ರಮ ವ್ಯರ್ಥ ಪ್ರಯತ್ನದ ಜತೆ ತೀವ್ರ ಬಳಲಿಕೆ ಎಂದಿರುವ ಸನ್ನಿ `ಇದೊಂದು ಪ್ರಯಾಸದ ಕೆಲಸ. ಹಣ, ಸಮಯದ ಜತೆ ಎಲ್ಲವೂ ವ್ಯರ್ಥ. ಪ್ರಚಾರಕ್ಕೆ ಮಾಡುತ್ತಿರುವ ಖರ್ಚಿನಲ್ಲಿ ಮತ್ತೊಂದು ಸಿನಿಮಾ ಮಾಡಬಹುದು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

`ಸಿನಿಮಾ ಪ್ರಚಾರ ಫ್ಯಾಷನ್ ಆಗಿರುವ ಈ ಕಾಲದಲ್ಲಿ ಪ್ರಚಾರ ಮಾಡದಿದ್ದರೆ ಜನರಿಂದ ದೂರವೇ ಉಳಿಯುವ ಅಪಾಯವೂ ಇದೆ. ಹಾಗಾಗಿ ಇದು ಅನಿವಾರ್ಯ. ಇದರೊಂದಿಗೇ ಬದುಕು ನಡೆಸಬೇಕಾಗಿದೆ' ಎಂದು ಸನ್ನಿ ಬೇಸರದಿಂದ ವ್ಯಕ್ತಪಡಿಸಿದ್ದಾರೆ. ಜೂನ್ 7 ರಂದು ತೆರೆ ಕಾಣಲಿರುವ `ಯಮ್ಲಾ ಪಗ್ಲಾ ದಿವಾನಾ 2' ಚಿತ್ರವನ್ನು ಸಂಗೀತ ಶಿವನ್ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.