ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಎನ್ಎಂಡಿಸಿ ಹಾಗೂ ಖಾಸಗಿ ಮಾಲೀಕತ್ವದ ಅಸೋಶಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ)ಯಿಂದ ನಡೆ ದಿದೆ ಎನ್ನಲಾದ ಕಾನೂನು ಬಾಹಿರ ಗಣಿ ಗಾರಿಕೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸಮಾಜ ಪರಿವರ್ತನ ಸಮುದಾಯ ಸ್ವಾಗತಿಸಿದೆ.

ಸುಪ್ರೀಂ ಕೋರ್ಟ್ನಿಂದ ಆದೇಶ ಹೊರ ಬೀಳುತ್ತಿದ್ದಂತೆಯೇ ಶುಕ್ರವಾರ ಸಂಜೆ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆ ಸಿದ ಎಸ್ಪಿಎಸ್ ಮುಖ್ಯಸ್ಥ ಎಸ್.ಆರ್. ಹಿರೇಮಠ, `ಕೋರ್ಟ್ ತೀರ್ಪಿನಿಂದ ನಮ್ಮ ಹೋರಾಟಕ್ಕೆ ಮನ್ನಣೆ ಸಿಕ್ಕಂತಾ ಗಿದ್ದು, ಆನಂದವಾಗಿದೆ~ ಎಂದರು.

ಎನ್ಎಂಡಿಸಿ ಪ್ರದೇಶದಲ್ಲಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಪ್ರೈವೇಟ್ ಲಿಮಿ ಟೆಡ್ ಎಂಬ ಸಂಸ್ಥೆ ಕಾನೂನುಬಾಹಿರ ಗಣಿಗಾರಿಕೆ ನಡೆಸಿದ ವಿಷಯವಾಗಿ ಮಾಹಿತಿ ಇದೆ ಎಂದು ಅವರು ತಿಳಿಸಿ ದರು.

`ಲೋಕಾಯುಕ್ತರು ಅಕ್ರಮ ಗಣಿಗಾ ರಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ ಆರೇ ದಿನಗಳ ಅಂತರದಲ್ಲಿ ಆ ವರದಿಯ ಪ್ರತಿಯನ್ನು ಪಡೆದು ನಾವು ಕೋರ್ಟ್ಗೆ ಸಲ್ಲಿಸಿದ್ದೆವು. ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ)ಗೂ ಮನವಿ ಮಾಡಿದ್ದೆವು~ ಎಂದು ಅವರು ಹೇಳಿದರು.

ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ರಾಜ್ಯದಲ್ಲಿ ತಾವು ಯಾವುದೇ ಗಣಿಗಾರಿಕೆ ಹೊಂದಿಲ್ಲ ಎಂದು ತಿಳಿಸಿದ್ದರು. ಆದರೆ, ಎಎಂಸಿಯಲ್ಲಿ ಅವರ ಪತ್ನಿ ಲಕ್ಷ್ಮಿ ಅರುಣಾ ಪಾಲುದಾರಿಕೆ ಹೊಂದಿದ ದಾಖಲೆಗಳು ಸಿಕ್ಕಿದ್ದು, ಅದನ್ನು ಸಿಇಸಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿ ದರು.

ಆಂಧ್ರ ಪ್ರದೇಶದಲ್ಲೂ ಅಕ್ರಮ ಗಣಿ ಗಾರಿಕೆ ಕುರಿತಂತೆ ಸಿಬಿಐ ತನಿಖೆ ನಡೆಸಿ ರುವುದರಿಂದ ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ), ಎಎಂಸಿ ಹಾಗೂ ಜನಾರ್ದನ ರೆಡ್ಡಿ ನಡುವಿನ ಸಂಬಂಧದ ಬಗೆಗೆ ಸಮಗ್ರ ತನಿಖೆ ನಡೆದು, ಸತ್ಯಾಂಶ ಹೊರಬೀಳಲಿದೆ ಎಂದು ವಿವರಿಸಿದರು.

`ರಾಜ್ಯದ ವಿವಿಧ ಕೋರ್ಟ್ಗಳಲ್ಲಿ ದಾಖಲಾದ ಅಕ್ರಮ ಗಣಿಗಾರಿಕೆ ಕುರಿತ ಎಲ್ಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಅರಣ್ಯ ಪೀಠಕ್ಕೆ ವರ್ಗಾಯಿಸಲು ನಿರ್ಧಾರ ಕೈಗೊಂಡಿರುವುದು ಕೂಡ ಸ್ವಾಗತಾರ್ಹ ಕ್ರಮ~ ಎಂದರು.

ಲೋಕಾ ಯುಕ್ತರ ವರದಿ ಸಲ್ಲಿಕೆ ನಂತರ ಕ್ರಮ ಕೈಗೊಳ್ಳದೆ ಸುಮ್ಮನೇ ಕುಳಿತಿರುವ ರಾಜ್ಯ ಸರ್ಕಾರ, ಬೇಜವಾಬ್ದಾರಿತನ ಪ್ರದರ್ಶಿ ಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.ಆರ್.ವಿ. ನಾಗಮುಲೆ, ಐ.ಜಿ. ಪುಲ್ಲಿ ಹಾಗೂ ಶೆಹನವಾಜ್ ಫೌಜ ದಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.