ಸೋಮವಾರ, ಜೂನ್ 21, 2021
20 °C

ಸಿಬಿಐ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಂಗಳೂರು ಕೋರ್ಟ್ ಆವರಣದಲ್ಲಿ ಮಾಧ್ಯಮ ಹಾಗೂ ಪೊಲೀಸ್ ಸಿಬ್ಬಂದಿಯ ಮೇಲೆ ವಕೀಲರು ನಡೆಸಿದ ಹಲ್ಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ನ್ಯಾಯಾಂಗ ತನಿಖೆ ನಡೆಸುವುದಾಗಿ ಸರ್ಕಾರ ಹೇಳಿರುವುದು ಪಲಾಯನವಾದ~ ಎಂದು ಹೇಳಿದರು.ಈ ಹಿಂದೆ ಹಾವೇರಿ ಗೋಲಿಬಾರ್ ಹಾಗೂ ಚರ್ಚ್ ದಾಳಿ ಪ್ರಕರಣಗಳ ನ್ಯಾಯಾಂಗ ತನಿಖೆಯ ಫಲಿತಾಂಶ ಏನು ಎಂಬುದು ಇಡೀ ರಾಜ್ಯದ ಜನಕ್ಕೆ  ಗೊತ್ತಿದೆ. ಗೋಲಿಬಾರ್‌ನಲ್ಲಿ ಸತ್ತವರು ರೈತರೇ ಅಲ್ಲ ಎಂದು ವರದಿ ನೀಡಲಾಯಿತು~ಎಂದರು.ನ್ಯಾಯಾಂಗ ತನಿಖೆ ತಡ ಆಗುವುದರಿಂದ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಪಾಯ ಇರುವುದರಿಂದ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.ಗುಪ್ತಚರ ಇಲಾಖೆಯ ವೈಫಲ್ಯವೇ ಘಟನೆಗೆ ಕಾರಣ. ಆರಂಭದಲ್ಲಿಯೇ ಸ್ಪಂದಿಸಿ ಗಲಭೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲ ಎಂದು ಅವರು ಹೇಳಿದರು.ಆರ್ಥಿಕ ಆಶಿಸ್ತು: ಬಿಜೆಪಿ ಸರ್ಕಾರದಲ್ಲಿ ಜಗಳ ತಾರಕಕ್ಕೇರಿದೆ. ಸಂಪುಟದ ಸಹೊದ್ಯೋಗಿಗಳೇ ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ರಾಜೀನಾಮೆ ಕೇಳುತ್ತಿದ್ದಾರೆ ಎಂದು ಟೀಕಿಸಿದರು.ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಆರ್ಥಿಕ ಶಿಸ್ತು ಸರಿಪಡಿಸಲಾಗದಷ್ಟು ಹಾದಿ ತಪ್ಪಿದೆ ಇದರಿಂದ ಜನಪರ ಬಜೆಟ್ ನಿರೀಕ್ಷಿಸಲು ಸಾಧ್ಯವಿಲ್ಲ. ಕೇವಲ ಘೋಷಣೆಗೆ ಅಷ್ಟೇ ಬಜೆಟ್ ಸೀಮಿತಗೊಳ್ಳಲಿದೆ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.