ಗುರುವಾರ , ಏಪ್ರಿಲ್ 15, 2021
31 °C

ಸಿರಿಯಾ: ಇರಾನ್ ವಿಚಾರ ಸಂಕಿರಣಕ್ಕೆ ಜನರೇ ಇಲ್ಲ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಹರಾನ್ (ಎಎಫ್‌ಪಿ): ಸಿರಿಯಾ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸಲು ಇರಾನ್ ಮುಂದಾಗಿದ್ದು, ಈ ಸಂಬಂಧ ಗುರುವಾರ ವಿಚಾರ ಸಂಕಿರಣವೊಂದನ್ನು ಆಯೋಜಿಸಿತ್ತು.

ಸಿರಿಯಾ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಅರಬ್ ಸಂಧಾನಕಾರರಾಗಿದ್ದ ಕೋಫಿ ಅನ್ನಾನ್ ಕಳೆದ ವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ,  ಇರಾನ್ ಸ್ವಯಂಪ್ರೇರಿತವಾಗಿ ಮಧ್ಯಸ್ಥಿಕೆ ವಹಿಸಲು ಮುಂದಾಗಿತ್ತು.

ಇದರ ಮೊದಲ ಹೆಜ್ಜೆಯಾಗಿ ಗುರುವಾರ ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಖಂಡಗಳ 12 ರಿಂದ 13 ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಈ ವಿಚಾರ ಸಂಕಿರಣಕ್ಕೆ ಆಹ್ವಾನಿಸಿತ್ತು. ಸಂಕಿರಣದಲ್ಲಿ ಯಾವ ದೇಶಗಳ ವಿದೇಶಾಂಗ ಸಚಿವರೂ ಪಾಲ್ಗೊಂಡಿರಲಿಲ್ಲ. ಸಭೆಯಲ್ಲಿ ಭಾಗವಹಿಸುವಿಕೆಯನ್ನು ಯಾರೂ ಖಚಿತಪಡಿಸಿರಲಿಲ್ಲ.

ಆದರೆ ವಿಚಾರ ಸಂಕಿರಣದಲ್ಲಿ ಭಾಗವಹಿಸದಿರುವುದಕ್ಕೆ ಒಬ್ಬೊಬ್ಬ ವಿದೇಶಾಂಗ ಸಚಿವರು ಒಂದೊಂದು ಸಬೂಬು ನೀಡಿದರು. 

ಈ ನಡುವೆ, ಇರಾನ್ ವಿದೇಶಾಂಗ ಸಚಿವ ಅಲಿ ಅಕ್ಬರ್ ಸಲೇಹಿ, `ಸಿರಿಯಾ ಬಿಕ್ಕಟ್ಟು ಬಗೆಹರಿಸಲು ಕೋಫಿ ಅನ್ನಾನ್ `ಕದನ ವಿರಾಮ, ಮಾನವೀಯ ನೆರವು ನೀಡುವುದು, ಸಿರಿಯಾದಲ್ಲಿ ಆಂತರಿಕ ಚರ್ಚೆ ನಡೆಸುವುದು~ ಸೇರಿದಂತೆ ವಿವಿಧ ಯೋಜನೆಗಳನ್ನು  ರೂಪಿಸಿದ್ದರು. ಇರಾನ್ ಕೂಡ ಅವುಗಳನ್ನೇ ಮುಂದುವರಿಸಲಿದೆ~ ಎಂದು ಹೇಳಿದ್ದಾರೆ. 

 `ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ 12 ರಿಂದ 13 ದೇಶಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿವೆ ಎಂದು ಬುಧವಾರ ಇರಾನ್‌ನ ಅಧಿಕೃತ ಮಾಧ್ಯಮಗಳಲ್ಲಿ ಸಲೇಹಿ ಹೇಳಿಕೆ ನೀಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.