ಶುಕ್ರವಾರ, ಫೆಬ್ರವರಿ 26, 2021
31 °C

ಸಿರಿಯಾ: 24 ಲಕ್ಷ ಇ-ಮೇಲ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಯಾ: 24 ಲಕ್ಷ ಇ-ಮೇಲ್ ಬಿಡುಗಡೆ

ಲಂಡನ್, ಮಾಸ್ಕೊ, ರೋಮ್ (ಪಿಟಿಐ, ಐಎಎನ್‌ಎಸ್, ಎಫ್‌ಪಿ): ಅರಾಜಕತೆಗೆ ಒಳಗಾಗಿರುವ ಸಿರಿಯಾದ ರಾಜಕಾರಣಕ್ಕೆ ಸಂಬಂಧಿಸಿದಂತೆ ವಿನಿಮಯಗೊಂಡಿರುವ 24 ಲಕ್ಷ ಇ-ಮೇಲ್ ಸಂದೇಶಗಳನ್ನು ಬಿಡುಗಡೆಗೊಳಿಸಿರುವುದಾಗಿ ವಿಕಿಲೀಕ್ಸ್ ವೆಬ್‌ಸೈಟ್ ಹೇಳಿಕೊಂಡಿದೆ.2006ರ ಆಗಸ್ಟ್‌ನಿಂದ 2012ರ ಮಾರ್ಚ್‌ವರೆಗೂ ಸಿರಿಯಾದಿಂದ ವಿವಿಧೆಡೆಗೆ ವಿನಿಮಯಗೊಂಡಿರುವ ಮತ್ತು ವಿದೇಶಗಳು ಸೇರಿದಂತೆ ಇತರೆಡೆಯಿಂದ ಸಂವಹನಗೊಂಡಿರುವ 24 ಲಕ್ಷ ಇ-ಮೇಲ್‌ಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ.ಇದರಲ್ಲಿನ ಬಹುತೇಕ ಮೇಲ್‌ಗಳು ಸಿರಿಯಾ ರಾಜಕಾರಣಕ್ಕೆ ಸಂಬಂಧಿಸಿವೆ. ಅಧ್ಯಕ್ಷರು ಮತ್ತು ಸಚಿವರ ಮೇಲ್‌ಗಳು, ವಿದೇಶ ವ್ಯವಹಾರ, ಹಣಕಾಸು, ಮಾಹಿತಿ ತಂತ್ರಜ್ಞಾನ, ಸಾರಿಗೆ, ಸಂಸ್ಕೃತಿ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮಹತ್ವದ ಅಂಶಗಳಿರುವ ಮಾಹಿತಿ ಇವುಗಳಿಂದ ಲಭ್ಯವಾಗಿದೆ ಎಂದು ವಿಕಿಲೀಕ್ಸ್  ತಿಳಿಸಿದೆ.ಸಿರಿಯಾ ವಿರೋಧಿಗಳು ಮಾತ್ರವಲ್ಲದೇ, ಸಿರಿಯಾ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಬಂಡುಕೋರರು ನಡೆಸಿರುವ ಮಾಹಿತಿ ವಿನಿಮಯದ ಮೇಲ್‌ಗಳು ತಮಗೆ ಲಭ್ಯವಾಗಿವೆ ಎಂದು ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ ಹೇಳಿದ್ದಾರೆ.ಸಿರಿಯಾ ಸಚಿವರುಗಳಿಗೆ ವಿದೇಶಗಳಿಂದ ಹರಿದು ಬಂದಿರುವ ಬೇನಾಮಿ ಹಣದ ಮಾಹಿತಿಯೂ ಸಿಕ್ಕಿದೆ. ಲಭ್ಯವಿರುವ ಎಲ್ಲ ಮೇಲ್‌ಗಳ ವಿಳಾಸ ಮತ್ತು ವ್ಯಕ್ತಿಗಳ ವಿವರಗಳಿವೆ. ವಿಶ್ವದ ನಾನಾ ಭಾಷೆಗಳಲ್ಲಿ ಮೇಲ್‌ಗಳು ವಿನಿಮಯಗೊಂಡಿವೆ. ಇವುಗಳಲ್ಲಿ ಹೆಚ್ಚಿನವು ಅರೇಬಿಕ್ ಮತ್ತು ರಷ್ಯಾ ಭಾಷೆಯಲ್ಲಿವೆ ಎಂದು ಅಸಾಂಜ್ ಹೇಳಿದ್ದಾರೆ.ಇಟಲಿಯ ಅತಿ ದೊಡ್ಡ ರಕ್ಷಣಾ ಸಾಮಗ್ರಿ ತಯಾರಿಕ ಉದ್ಯಮವಾದ  ಫಿನ್‌ಕಾನಿಕ ಕಂಪನಿಯು ಸಿರಿಯಾಕ್ಕೆ ಸಂವಹನ ಸಾಮಗ್ರಿಗಳಾದ ಟೆಲಿಕಾಂ ಉಪಕರಣಗಳು, ಉನ್ನತ ತಂತ್ರಜ್ಞಾನದ ರೇಡಿಯೊಗಳು, ವೈರ್‌ಲೇಸ್ ಸಾಧನಗಳನ್ನು ನೀಡಿರುವ ಅಂಶ ಬೆಳಕಿಗೆ ಬಂದಿದೆ.2008ರಿಂದ ನಡೆದ ಮೇಲ್‌ಗಳ ವಿನಿಮಯದಿಂದ ಇದು ಗೊತ್ತಾಗಿದೆ. ಸಿರಿಯಾದಲ್ಲಿ ಅರಾಜಾಕತೆ ಉಂಟಾಗಿದ್ದರೂ ಈ ಉಪಕರಣಗಳ ಸರಬರಾಜು ಮುಂದುವರೆದಿತ್ತು ಎಂದೂ ವಿಕಿಲೀಕ್ಸ್ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.