ಶನಿವಾರ, ಜೂನ್ 19, 2021
21 °C

ಸಿಲಿಂಡರ್ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಮರ್ಪಕ ಸಿಲಿಂಡರ್ ವಿತರಣೆಗೆ ಒತ್ತಾಯಿಸಿ ಗ್ರಾಹಕರು ನಗರದ ಬಿ.ಎಚ್.ರಸ್ತೆಯ ಗ್ಯಾಸ್ ವಿತರಣಾ ಕೇಂದ್ರದ ಎದುರು ಬುಧವಾರ ಪ್ರತಿಭಟಿಸಿದರು.`ಬ್ಲಾಕ್‌ನಲ್ಲಿ ಕೊಳ್ಳಲೂ ಸೀಮೆಎಣ್ಣೆ ಸಿಗುತ್ತಿಲ್ಲ. ಹೊಸ ಕಾಲದ ಮನೆಗಳಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಲೂ ಆಗುವುದಿಲ್ಲ. ಸಿಲಿಂಡರ್‌ಗಳನ್ನೂ ಕೊಡದಿದ್ದರೆ ಅಡುಗೆ ಮಾಡುವುದು ಹೇಗೆ? ಕಳೆದ ಒಂದು ವಾರದಿಂದ ಪ್ರತಿದಿನ ಹೋಟೆಲ್‌ನಿಂದ ಊಟ ತಂದು ತಿಂದು ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಗ್ರಾಹಕ ಸುಂದರ್ ಆಕ್ರೋಶ ವ್ಯಕ್ತಪಡಿಸಿದರು.`ಗ್ಯಾಸ್ ಸಿಲಿಂಡರ್ ಸಾಗಿಸುವ ಲಾರಿ ಮಾಲೀಕರ ಮುಷ್ಕರದ ಸಮಸ್ಯೆ ಈಗ್ಗೆ ಒಂದು ತಿಂಗಳಿಂದ ಕಂಡು ಬಂದಿದೆ. ಆದರೆ ಒಂದು ವರ್ಷದಿಂದ ಇವರು ನಮಗೆ ಸಿಲಿಂಡರ್ ಸರಿಯಾಗಿ ವಿತರಿಸದೆ ಸತಾಯಿಸುತ್ತಿದ್ದಾರೆ. ಹೋಟೆಲ್, ಫುಟ್‌ಪಾತ್‌ಗಳಲ್ಲಿ ಬಜ್ಜಿ- ಬೋಂಡಾ ಮಾರುವರಿಗೆ ಬ್ಲಾಕ್‌ನಲ್ಲಿ ಮಾರಿಕೊಂಡು ನಮಗೆ ಆಟ ಆಡಿಸುತ್ತಿದ್ದಾರೆ~ ಎಂದು ಮತ್ತೊಬ್ಬ ಗ್ರಾಹಕ ಆರಾಧ್ಯ ದೂರಿದರು.`ಬುಕ್ ಮಾಡಿ ಒಂದು ತಿಂಗಳಾದರು ಮನೆಗೆ ಸಿಲಿಂಡರ್ ಬಂದಿಲ್ಲ. ನಾವು ಮಕ್ಕಳು- ಮರಿಗಳನ್ನು ಹೇಗೆ ಸಾಕಬೇಕು~ ಎಂದು ಗ್ರಾಹಕರಾದ ಸೈಯದಾ ಬಾನು ಕಷ್ಟ ತೋಡಿಕೊಂಡರು.ಗ್ರಾಹಕರನ್ನು ಸಂತೈಸಲು ಯತ್ನಿಸಿದ ಏಜೆನ್ಸಿ ಸಿಬ್ಬಂದಿ, ಅನಿಲ ಪೂರೈಕೆ ಕಂಪೆನಿಗಳು ಮತ್ತು ಸಾಗಣೆದಾರರ ನಡುವಣ ಸಂಘರ್ಷದಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ. ಏಜೆನ್ಸಿಗಳಿಗೆ ನಿಗದಿತ ಅಂತರದಲ್ಲಿ ಸಿಲಿಂಡರ್‌ಗಳು ದೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ದೇವರಾಯನದುರ್ಗ ಜಾತ್ರೆ ಇಂದಿನಿಂದ

ತುಮಕೂರು: ದೇವರಾಯನದುರ್ಗ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಮಾ. 1ರಿಂದ 13ರ ವರೆಗೆ ನಡೆಯಲಿದೆ. ಮಾ. 8ರಂದು ಬ್ರಹ್ಮರಥೋತ್ಸವ ಜರುಗಲಿದೆ.ಬ್ರಹ್ಮರಥೋತ್ಸವಕ್ಕೆ ಬೇಕಾದ ಸಿದ್ಧತೆ ಮಾಡಲಾಗಿದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದ್ದು, ದೇವರ ದರ್ಶನ, ಪ್ರಸಾದ ಪಡೆಯಲು ಬ್ಯಾರಿಕೇಡ್ ನಿರ್ಮಿಸಲಾಗಿದೆ. ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದ್ದಾರೆ.ಮದ್ಯ ಮಾರಾಟ ನಿಷೇಧದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ಮಾರ್ಚ್ 1ರಿಂದ 13ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಗುಲ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟನ್ನು ಡಿಸಿ ಆರ್.ಕೆ.ರಾಜು ನಿಷೇಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.