ಕುಜ
ಮಂಗಳ ಗ್ರಹದ ಮೇಲೆ ಮನುಷ್ಯ ಅಡ್ಡಾಡಿ ಬಂದದ್ದಕ್ಕೋ ಏನೋ ನಮ್ಮ ಕಾಲೇಜು ಹೈಕಳೆಲ್ಲಾ ತಮ್ಮ ಪರಿಭಾಷೆಗೆ ಒಂದು ಪದಸಿಕ್ಕಿಸಿಕೊಂಡು ಓಡಾಡುತ್ತಿದ್ದಾರೆ. ಅದೇ `ಕುಜ~. ಕುಜ ಎಂಬುದು ಮಂಗಳ ಗ್ರಹಕ್ಕೆ ಇರುವ ಇನ್ನೊಂದು ಹೆಸರು. ಆ ಗ್ರಹದ ಕದಲಿಕೆಯಿಂದಾಗಿ ಯಾವುದೋ ದೋಷ ಉಂಟಾದರೆ ಅದನ್ನು ಕುಜದೋಷ ಎಂದು ಜ್ಯೋತಿಷಿಗಳು ಜನರನ್ನು ನಂಬಿಸುವುದುಂಟು.

ಆದರೆ, ನಮ್ಮ ಕಾಲೇಜು ಹೈಕಳಿಗೆ ಇಂಥ ಯಾವ ತರ್ಕದ ಹಂಗೂ ಇಲ್ಲ. ಅಪ್ಪ-ಅಮ್ಮನ ಕೈಲಿ ತಲತಲಾಂತರದಿಂದ ಶನಿ ಎಂದು ಬೈಯಿಸಿಕೊಂಡು ಸಾಕಾಗಿರುವ ಈ ಗಂಡ್ಮಕ್ಕಳೆಲ್ಲಾ ಕುಜ ಎಂಬ ಪದವನ್ನು ಬೈಯ್ಗುಳವಾಗಿಯೂ ಹೊಗಳಿಕೆಯಾಗಿಯೂ ಬಳಸುತ್ತಾರೆ. ಅದು ಅವರವರ ಅನುಕೂಲವನ್ನಷ್ಟೆ ಅವಲಂಬಿಸಿರುತ್ತದೆ. ಯಾರೋ ಏನೋ ಕಡಿದುಹಾಕಿಬಿಟ್ಟ ಎಂದಿಟ್ಟುಕೊಳ್ಳಿ. ಅವನ ಹೆಸರಿನ ಪಕ್ಕ `ಕುಜ ಸ್ಟಾರ್~ ಎಂಬ ಬಿರುದನ್ನು ಅಂಟಿಸುತ್ತಾರೆ. ಅಕಸ್ಮಾತ್ತಾಗಿ ಎಡವಟ್ಟು ಮಾಡಿದರೆ ಅದೇ ಸ್ಟಾರ್ `ಕುಜ ನನ್ಮಗ~ ಆಗಲೂಬಹುದು. ಹೀಗೆ ಕಾಲೇಜು ಪಡ್ಡೆಗಳು ಶನಿಗೆ ಪರ್ಯಾಯವಾಗಿ ಕುಜ ಪದವನ್ನು ವಿಲಕ್ಷಣವಾಗಿಯೂ ವಿಚಿತ್ರ ಎನ್ನುವಂತೆಯೂ ಬಳಸುತ್ತಿದ್ದಾರೆ. ಪರಭಾಷಾ ವಿದ್ಯಾರ್ಥಿಗಳಿಗೂ ಈ ಎರಡಕ್ಷರದ ಹೊಗಳಿಕೆ/ಬೈಗುಳ ಇಷ್ಟವಾಗಿರುವುದು ಚೋದ್ಯ.

ಡಾರ್ಲಿಂಗ್
ಪ್ರೀತಿಪಾತ್ರರನ್ನು ಸಂಬೋಧಿಸಲು ಬಳಕೆಯಾಗುತ್ತಿದ್ದ ಈ ಆಂಗ್ಲೋ-ಸ್ಯಾಕ್ಸನ್ ಪದ ಕೆಲವು ರೌಡಿಗಳ ಬಾಯಿಂದ ಸಿನಿಮಾ ಪ್ರವೇಶಿಸಿ, ಆಮೇಲೆ ಶಾಲಾ ಆವರಣ ಹೊಕ್ಕಿದೆ. ನಲ್ಲ ನಲ್ಲೆಯನ್ನು ಉದ್ದೇಶಿಸಿ ಬಳಸುತ್ತಿದ್ದ ಈ ಪದವನ್ನು ಈಗ ಹುಡುಗ ತನ್ನ ಗೆಳೆಯನನ್ನು ಕರೆಯಲು ಬಳಸುತ್ತಾನೆ. `ಗುಲಾಮ~ ಚಿತ್ರದಲ್ಲಿ ನಿರ್ದೇಶಕ ರಂಗನಾಥ್ ಖಳನಾಯಕನ ಬಾಯಿಗೆ ಇದೇ ಮಾತನ್ನು ಹಾಕಿದ್ದರು. ಆ ಪಾತ್ರ ನಿರ್ವಹಿಸಿದ್ದ ವಿಶ್ವ ಎಂಬ ನಟನನ್ನು ಆತನ ಆಪ್ತರಲ್ಲಿ ಕೆಲವರು `ಡಾರ್ಲಿಂಗ್ ವಿಶ್ವ~ ಎಂದೇ ಸಂಬೋಧಿಸುತ್ತಾರೆ.

ಎದುರಾಳಿಗಳನ್ನು ಕೆಣಕಲು, ಮಿತ್ರನನ್ನು ಹೊಗಳಲು, ಹುಡುಗಿಯರ ಎದುರು ಕಿಚಾಯಿಸಲು, `ಹೆಣ್ಣುಮುಂಡೇದು~ ಎಂದು ಹಂಗಿಸುತ್ತಾರಲ್ಲ; ಅದಕ್ಕೆ ಪರ್ಯಾಯವಾಗಿ `ಡಾರ್ಲಿಂಗ್~ ಎಂಬ ಪದವು ಯಥೇಚ್ಛ ಬಳಕೆಯಾಗುತ್ತಿದೆ. ಈ ಪದಾರ್ಥವನ್ನು ತಮ್ಮಿಷ್ಟಕ್ಕೆ ತಕ್ಕಂತೆ ಉಜ್ಜುತ್ತಾ ಉಪಯೋಗಿಸುತ್ತಿರುವವರಲ್ಲೂ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. `ಏ ಡಾರ್ಲಿಂಗ್... ಇಲ್ಲಿ ನೋಡು...~ ಎಂದು ಕರೆದ ಹುಡುಗನನ್ನು ಇತ್ತೀಚೆಗೆ ಸಲಿಂಗಿಗಳ ಚಳವಳಿಯಲ್ಲಿದ್ದವರೊಬ್ಬರು ತಪ್ಪಾಗಿ ಅರ್ಥ ಮಾಡಿಕೊಂಡು, ಅವನ ಬಾಯಿಗೆ ಕಾದ ಸೀಸೆ ಸುರಿಯುವಂತೆ ಮಾತಾಡಿದ್ದರಂತೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.