ಭಾನುವಾರ, ಮಾರ್ಚ್ 7, 2021
19 °C

ಸುಡು ಬಿಸಿಲಿಗೆ ಶ್ಯಾವಿಗೆ ಬಳ್ಳಿ ಬಳಬಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಡು ಬಿಸಿಲಿಗೆ ಶ್ಯಾವಿಗೆ ಬಳ್ಳಿ ಬಳಬಳ

ಪ್ರಕೃತಿ ಒಂದಿಲ್ಲ ಒಂದು ರೀತಿಯಲ್ಲಿ ಮನುಷ್ಯನಿಗೆ ಉಪಕಾರ ಮಾಡುತ್ತಲೇ ಬರುತ್ತದೆ ಈಗ  ಏಪ್ರೀಲ್ ತಿಂಗಳು ಎಲ್ಲಡೆಯೂ ವಿಪರಿತ ಸುಡು ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಝಳಕ್ಕೆ ಜನತೆ ತತ್ತರಿಸಿ ಹೋಗುತ್ತಿದ್ದರೆ, ಇತ್ತ ಶ್ಯಾವಿಗೆ ತಯಾರಿಕೆ ಮೆಷಿನಲ್ಲಿ ತೆಳವಾದ ನವಿರಾದ ಬಿಳಿ ಬಣ್ಣದ ಶ್ಯಾವಿಗಿ ಸುಳ್ಳಿಗಳು ಬಳಬಳ ಅಂತ ಬರುತ್ತಿವೆ. ನಿಜವಾಗಿಯೂ ಸುಡು ಬಿಸಿಲು ಶ್ಯಾವಿಗೆ ತಯಾರಿಕೆಗೆ ಅತ್ಯಂತ ಅನಕೂಲ ವಾತಾವರಣ ಕಲ್ಪಿಸಿದೆ.ಹಿಂದೆ ಹಳ್ಳಿಗಳಲ್ಲಿ ಬೇಸಿಗೆಯ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಜಾನಪದ ಹಾಡುಗಳನ್ನು ಹೇಳುತ್ತ ಮೂರು ನಾಲ್ಕು ಹೆಣ್ಣು ಮಕ್ಕಳು ಕೂಡಿಕೊಂಡು ಶ್ಯಾವಿಗೆ ಹೊಸೆಯು ತ್ತಿದ್ದರು. ಆದರೆ ಮಷಿನ್‌ಗಳು ಬಂದ ಮೇಲೆ ಗ್ರಾಮೀಣ ಪ್ರದೇಶ ದವರು ಸಹ ಶ್ಯಾವಿಗಿ ಹೊಸೆಯುವುದನ್ನು ನಿಲ್ಲಿಸಿದ್ದಾರೆ.ವಯಸ್ಸಾದ ಮಹಿಳೆಯರು ಶ್ಯಾವಿಗೆ ಬಗ್ಗೆ ಈ ರೀತಿ ಹೇಳುತ್ತಾರೆ ನಸುಕಿನಲ್ಲಿ ಎದ್ದು ಗೋಧಿ ಹಿಟ್ಟಿನ್ನು ನೆನೆಸಿ  ಮನೆಯ ದಿನದ ಚಟುವಟಿಕೆಗಳು ಮುಗಿಸಿದ ಬಳಿಕ ಮಧ್ಯಾಹ್ನ ಓಣಿಯ ಇತರೆ ಮಹಿಳೆಯರ ಜೊತೆಗೂಡಿ ಮಾಡುತ್ತಿದ್ದ ಶ್ಯಾವಿಗೆಯ ರುಚಿಯೇ ಬೇರೆ ಎನ್ನುತ್ತಾರೆ ಶಿವಪೇಟೆಯ ಓಣಿಯ ನಿವಾಸಿ ವೀರಮ್ಮ ಹಕಾರಿ.

ಪಟ್ಟಣದ ತಳವಾರ ಓಣಿಯ ನಿವಾಸಿ  ಇಲ್ಲಿಯ ಹಳೆ ಸಂತೆ ಬಜಾರನಲ್ಲಿರುವ  ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿ ಕಳೆದ ಏಳು ವರ್ಷಗಳಿಂದ  ಶ್ಯಾವಿಗೆ ತಯಾರಿಕೆಯಲ್ಲಿ ತೊಡಗಿರುವ 58 ವರ್ಷದ ಅನಸಮ್ಮ ಮಲಕಸಮುದ್ರಮಠ  ಮನೆಯವರೊಂದಿಗೆ ಈಗ ಬಿಡುವಿಲ್ಲದ ಕೆಲಸ ಬೆಳಿಗ್ಗೆ 7ರಿಂದ ಕಾರ್ಯಾರಂಭ ಮಾಡುವ ಇವರ ಶ್ಯಾವಿಗೆ ಘಟಕ ರಾತ್ರಿ 8 ರವರೆಗೂ ಚಾಲೂ ಇರುತ್ತದೆ ಹೆಚ್ಚು ಬಿಸಿಲು, ಕಡಿಮೆ ಗಾಳಿ ಶ್ಯಾವಿಗೆ ತಯಾರಿಕೆಗೆ ಹೇಳಿ ಮಾಡಿಸಿದ ವಾತಾವರಣ ಎಂಬುದು ಈ ಮಲಕಸಮುದ್ರಮಠರ ಅನುಭವದ ಮಾತು. ಬಿಸಿಲು ಹೆಚ್ಚಿದಷ್ಟು ಚನ್ನಾಗಿ ಶ್ಯಾವಿಗೆ ಬಳಿ ಬಿಡುತ್ತದೆ. ಎನ್ನುವ ಇವರು ಆದರೆ ವರ್ಷದಲ್ಲಿ ಕೇವಲ ಎರಡ್ಮೂರು ತಿಂಗಳು ಮಾತ್ರ ಶ್ಯಾವಿಗೆ  ಮಾಡುವ ಕೆಲಸ ಇರುತ್ತದೆ, ಎಂದು ಹೇಳುವ ಮಲಕಸಮುದ್ರಮಠ  ವರ್ಷ ಪೂರ್ತಿ ಬಾಡಿಗೆ ಕೊಡಬೇಕು, ವಿದ್ಯುತ್ಯ ಬಿಲ್ ತುಂಬುವುದು ಹೊರೆಯಾಗುತ್ತದೆ ಎನ್ನುವ ಇವರು ಬೆಸಿಗೆಯ ನಂತರದ ದಿವಸದಲ್ಲಿ ಹೂಲದ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದು ಎನ್ನುತ್ತಾರೆ.ಗ್ರಾಹಕರೇ ಹಿಟ್ಟು ತಗೆದುಕೊಂಡು ಬಂದರೆ ಕೆ.ಜಿ.ಗೆ 10ರೂಪಾಯಿ, ಪಡಯುವ ಇವರು ತಮ್ಮದೇ ಹಿಟ್ಟಿನಲ್ಲಿ ಶ್ಯಾವಿಗೆ ತಯಾರಿಸಿ ಕೊಟ್ಟರೆ ಕೆ.ಜಿ.ಗೆ 32ರೂಪಾಯಿ ತೆಗೆದುಕೊಳ್ಳುತ್ತಾರೆ ದಿನಕ್ಕೆ ಕನಿಷ್ಠ ಒಂದು ಕ್ವಿಂಟಾಲ್ ಶ್ಯಾವಿಗೆ ತಯಾರಿಸುತ್ತಾರೆ.ತಾಲ್ಲೂಕಿನ ವಿವಿಧ ಭಾಗಗಳಿಂದ ಪ್ರತಿ ವರ್ಷ ಶ್ಯಾವಿಗೆ ತಯಾರಿಸಿಕೊಳ್ಳಲು ಇವರ ಘಟಕಕ್ಕೆ ನೂರಾರು ಗ್ರಾಹಕರು ಬರುತ್ತಾರೆ ಮದುವೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಡೆ ಆಕಾರದ ಡಿಸೈನ್‌ನಲ್ಲಿ ಶ್ಯಾವಿಗೆ ಮಾಡುವುದ ಇವರ ವಿಶಿಷ್ಟ ಕಲೆಯಾಗಿದೆ.ಅತಿ ಉದ್ದದ ಶ್ಯಾವಿಗೆ ತಯಾರಿಸುವ ಕನಸು ಇವರದು, ಕನಿಷ್ಠ 60 ಅಡಿ ಉದ್ದ ಶ್ಯಾವಿಗೆ ತಯಾರಿಸುವ ಕನಸು ಕಟ್ಟಿಕೊಂಡಿದ್ದಾರೆ. ಈಗ ಗಾಳಿಯ ವೇಗ ಹೆಚ್ಚಾಗಿದ್ದು ಮುಂದಿನ ತಿಂಗಳು ಗಾಳಿ ಕಡಿಮೆಯಾದರೆ ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳುವ ತುಡಿತದಲ್ಲಿದ್ದಾರೆ.  ಅಂತೂ ನೆತ್ತಿ ಸುಡುವ ಬಿಸಿಲು ಬೇರೆಯವರಿಗೆ ಬೆವರು ಇಳಿಸುತ್ತಿದ್ದರೆ ಶ್ಯಾವಿಗೆ ತಯಾರಕರಿಗೆ ಮಾತ್ರ ವರದಾನವಾಗಿರುವುದು ಸತ್ಯ. 

      

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.