ಸುಳ್ಯ: ತಾಲ್ಲೂಕಿನ ಕಂದಡ್ಕದಲ್ಲಿ ರಸ್ತೆ ಬದಿ ನಡೆಯುತ್ತಿದ್ದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ಜನರ ಮೇಲೆ ಎರಗಿದ ಪಿಕಪ್ ವಾಹನ ಇಬ್ಬರನ್ನು ಬಲಿ ತೆಗೆದುಕೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.

ಸ್ಥಳೀಯ ನವಚೇತನ ಯುವಕ ಮಂಡಲದ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಂದಡ್ಕ ಸೇತುವೆ ಬಳಿ ಇರುವ ಹೊಳೆಯ ಬದಿ ಸಣ್ಣ ಮೈದಾನದಲ್ಲಿ ಸ್ಪರ್ಧೆ ನಡೆಯುತ್ತಿತ್ತು.

ವೀಕ್ಷಕರಿಗೆ ನಿಂತುಕೊಳ್ಳಲು ಇಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದೆ ಹೆಚ್ಚಿನ ಜನರು ಸುಳ್ಯ-ಸುಬ್ರಹ್ಮಣ್ಯ ಮುಖ್ಯ ರಸ್ತೆಯ ಬದಿ ನಿಂತಿದ್ದರು. ಸಂಜೆ 6 ಗಂಟೆಗೆ ಸುಳ್ಯ ಕಡೆಯಿಂದ ಬಂದ ಮಹೀಂದ್ರಾ ಪಿಕಪ್ ವಾಹನವೊಂದು ರಸ್ತೆ ಬಲ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು.

ವಿದ್ಯುತ್ ಕಂಬ ಮುರಿದು ಸೇರಿದ್ದ ಜನರ ಮೇಲೆ ಬಿದ್ದಿತು. ಜನರು ದಿಕ್ಕಾಪಾಲಾಗಿ ಓಡಿದರು. ಆಗ ವಾಹನದ ಅಡಿ ವ್ಯಕ್ತಿಯೊಬ್ಬರ ಆಕ್ರಂದನ ಕೇಳಿಸಿತು. ವಾಹನವನ್ನು ಸರಿಸಿ ನೋಡಿದಾಗ ಯುವಕ ಹಾಗೂ ಬಾಲಕಿಯೊಬ್ಬಳು ಅದರಡಿಗೆ ಸಿಕ್ಕಿ ತೀವ್ರ ಗಾಯಗೊಂಡಿದ್ದು ಕಂಡುಬಂತು. ಕೂಡಲೇ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ದರೂ ದಾರಿ ಮಧ್ಯೆ ಮೃತಪಟ್ಟರು.

ಯುವಕನನ್ನು ಸ್ಥಳೀಯ ಮಂಡೋಕಜೆ ನಿವಾಸಿ ಜನಾರ್ದನ ಮಣಿಯಾಣಿ ಅವರ ಪುತ್ರ ಗೋಪಾಲಕೃಷ್ಣ (22) ಎಂದು ಗುರುತಿಸಲಾಗಿದೆ. ಈತ ಸುಳ್ಯದ ಮಾರುತಿ ಶೋರೂಮ್ನಲ್ಲಿ ಉದ್ಯೋಗಿಯಾಗಿದ್ದ. ಮೃತ ಬಾಲಕಿ ಸ್ಥಳೀಯ ನಿವಾಸಿ ಪನ್ನೀರ್ಸೆಲ್ವಂ ಅವರ ಪುತ್ರಿ ಸುಷ್ಮಿತಾ (12). ದೊಡ್ಡತೋಟ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ನವೋದಯ ಪರೀಕ್ಷೆಗೆ ಹಾಜರಾಗಿ ಸಂಜೆ ಮನೆಗೆ ವಾಪಸಾಗುತ್ತಿದ್ದ ವೇಳೆ ಪಂದ್ಯಾಟ ವೀಕ್ಷಣೆಗೆ ನಿಂತಿದ್ದಳು. ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಲೆ ಮೇಲೆ ಬಿದ್ದು ಸ್ಥಳೀಯ ಗೀತಾ, ವೆಂಕಪ್ಪ ಗೌಡ, ಅಮರಮೂಡ್ನೂರು ಗ್ರಾ.ಪಂ.ಸದಸ್ಯ ಉಮೇಶ್ ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಿಕಪ್ ವಾಹನ ಕಂದಡ್ಕ ನಿವಾಸಿ ಸೆಲ್ವನಾಯಕಂ ಎಂಬುವವರಿಗೆ ಸೇರಿದ್ದು, ಹೊಸದಾಗಿ ಚಾಲನೆ ಕಲಿಯುತ್ತಿದ್ದ ಯುವಕ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಬಳಿಕ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ರದ್ದುಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.