ದಾವಣಗೆರೆ: ಅದೊಂದು ಸಂಧಿಕಾಲ. ಬಹುಶಃ ನಗರದಲ್ಲಿ ಶಿಕ್ಷಣ ಜ್ಯೋತಿಯೊಂದು ಹೊತ್ತಿಕೊಳ್ಳಲು ಸಣ್ಣ ಕಿಡಿಯೇ ಸಾಕಾಯಿತು. 1958ರ ಜುಲೈನಲ್ಲಿ ನಗರದ ಡಿಆರ್ಎಂ ಕಾಲೇಜನ್ನು ಸರ್ಕಾರಿ ಕಾಲೇಜನ್ನಾಗಿ ಅಭಿವೃದ್ಧಿಪಡಿಸಲು ಅಸಾಧ್ಯ ಎಂದು ಸರ್ಕಾರ ನಿಯಮಾವಳಿಗಳನ್ನು ಮುಂದಿಟ್ಟು ಕೈಚೆಲ್ಲಿತು.

ಧರ್ಮರತ್ನಾಕರ ಮದ್ದೂರಾಯಪ್ಪ ಅವರು ಈ ಕಾಲೇಜು ಸ್ಥಾಪನೆಗೆ ರೂ 1 ಲಕ್ಷವನ್ನು ದಾನವಾಗಿ ನೀಡಿದ್ದರು. ಹಾಗಿದ್ದರೂ ಸರ್ಕಾರ ಅಭಿವೃದ್ಧಿಗೆ ಮುಂದಾಗಲಿಲ್ಲವಲ್ಲ ಎಂದು ಬೇಸತ್ತ ಅಂದಿನ ಸ್ವಾಭಿಮಾನಿಗಳು ಮದ್ದೂರಾಯಪ್ಪ ನೇತೃತ್ವದಲ್ಲಿ ಸೇರಿ ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿಬಿಟ್ಟರು.

1961ರಲ್ಲಿ ಸರ್ಕಾರ ತಾನು ನಡೆಸುತ್ತಿದ್ದ ಇಂಟರ್ಮೀಡಿಯೇಟ್ ಕಾಲೇಜನ್ನೂ ಸಹ 99 ವರ್ಷಗಳ ಅವಧಿಗೆ ಬಾಪೂಜಿ ವಿದ್ಯಾಸಂಸ್ಥೆಗೆ ಬಿಟ್ಟುಕೊಟ್ಟಿತು. ಹೀಗೆ ಪುಟ್ಟ ಸಸಿಯಾಗಿ ಹುಟ್ಟಿದ ಬಾಪೂಜಿ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ವಿಶ್ವದ ಶಿಕ್ಷಣ ಭೂಪಟದಲ್ಲೊಂದು ಗಣನೀಯ ಸ್ಥಾನ ಹೊಂದಿದೆ. ದಾವಣಗೆರೆ ನಗರ, ಜ್ಲ್ಲಿಲೆಯ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೊಂದು ಗರಿ. ದಾವಣಗೆರೆಗೆ ವಿದ್ಯಾನಗರ ಎಂಬ ಮಾನ್ಯತೆ ದೊರಕಿಸುವಲ್ಲಿ ಮಹತ್ವದ ಪಾತ್ರ ಈ ಸಂಸ್ಥೆಯದ್ದು.

40 ಶಾಲಾ ಕಾಲೇಜುಗಳು, 14 ವಿದ್ಯಾರ್ಥಿ ನಿಲಯಗಳು ಸೇರಿ 54 ಅಂಗ ಸಂಸ್ಥೆಗಳು `ಬಾಪೂಜಿ~ ಛತ್ರದಡಿ ಇವೆ.

ಪ್ರಮುಖ ವಿದ್ಯಾಸಂಸ್ಥೆಗಳು: ನಗರದ ಡಿಆರ್ಎಂ ಕಾಲೇಜು (1958), ಅಜ್ಜಂಪುರ ವಿರೂಪಾಕ್ಷಪ್ಪ ಕಮಲಮ್ಮ ಮಹಿಳಾ ಕಾಲೇಜು (1967), ಎಆರ್ಜಿ ಕಾಲೇಜು (1973) ಮಾಸಬ ಕಾಲೇಜು (1983), ಆರ್.ಎಲ್. ಕಾನೂನು ಕಾಲೇಜು.

ವೈದ್ಯಕೀಯ ಸಂಸ್ಥೆಗಳು: ಜೆಜೆ ಮೆಡಿಕಲ್ ಕಾಲೇಜು (1965), ಬಾಪೂಜಿ ಆಸ್ಪತ್ರೆ (1970), ಬಾಪೂಜಿ ಫಾರ್ಮಸಿ ಶಾಲೆ (1977) ಫಾರ್ಮಸಿ ಕಾಲೇಜು ( 1992),ಬಾಪೂಜಿ ದಂತ ವೈದ್ಯಕೀಯ ಕಾಲೇಜು (1979), ದಂತ ವಿಜ್ಞಾನ ಕಾಲೇಜು(1991) ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ(1993), ಶಿವಪಾರ್ವತಿ ಹೈಟೆಕ್ ನವಜಾತ ಶಿಶು ವಿಭಾಗ, ಎಸ್ಎಸ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ(2006)

ಎಂಜಿನಿಯರಿಂಗ್, ವೃತ್ತಿ ಶಿಕ್ಷಣ: ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು (1979), ಬಾಪೂಜಿ ಪಾಲಿಟೆಕ್ನಿಕ್(1984) ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ರಿಸರ್ಚ್ ಕಾಲೇಜು(1996) ಬಾಪೂಜಿ ಹೈಟೆಕ್ ಎಜುಕೇಷನ್(2000) ಉಳಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಪ್ರಾಥಮಿಕ, ಪ್ರೌಢಶಾಲೆಗಳು, ಶಿಕ್ಷಕರ ತರಬೇತಿ ಸಂಸ್ಥೆ, ವಸತಿ ಶಾಲೆಗಳು ಇವೆ.

ವಿಶ್ವದ ಯಾವುದೇ ಮೂಲೆಗೆ ಹೋದರೂ ಬಾಪೂಜಿ ಸಂಸ್ಥೆಯ ವಿದ್ಯಾರ್ಥಿಗಳು ಕಾಣಸಿಗುತ್ತಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹೇಳುತ್ತಾರೆ. ಇಂಥ ಸಂಸ್ಥೆಗೆ 1972ರಲ್ಲಿ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಗೌರವ ಕಾರ್ಯದರ್ಶಿ ಆದರು. ಅದುವರೆಗೆ ಕೇವಲ 5 ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. 1972ರ ಬಳಿಕ ಸಂಸ್ಥೆ ಹಿಂತಿರುಗಿ ನೋಡಲಿಲ್ಲ. ಅದು ನಡೆದದ್ದೇ ಸಾಧನೆಯ ದಾರಿಯಾಯಿತು.ಇದೀಗ ಸುವರ್ಣ ಸಂಭ್ರಮದಲ್ಲಿದೆ.

ದೇಶ- ವಿದೇಶಗಳ ಒಟ್ಟು 20 ಸಾವಿರ ವಿದ್ಯಾರ್ಥಿಗಳು, 4,000 ಬೋಧಕ ಬೋಧಕೇತರ ಸಿಬ್ಬಂದಿ ಸಂಸ್ಥೆಯಲ್ಲಿದ್ದಾರೆ. ಜ್ಞಾನದ ಬೆಳಕು, ವಿಜ್ಞಾನ -ತಂತ್ರಜ್ಞಾನದ ಪ್ರಸರಣ, ಸಾಂಸ್ಕೃತಿಕ ಅಭಿವ್ಯಕ್ತಿಗೊಂದು ವೇದಿಕೆಯಾಗಿ ನಾನಾ ಸ್ತರಗಳಲ್ಲಿ ಬೆಳೆದಿದೆ ಈ ಸಂಸ್ಥೆ. ಜಿಲ್ಲೆಯ ಶೈಕ್ಷಣಿಕ ಹಸಿವನ್ನು ನೀಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿತು.

ಸುವರ್ಣ ಮಹೋತ್ಸವ ಸಮಾರಂಭ ಮಾರ್ಚ್ 17ರಂದು ಸಂಜೆ 6ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಜ್ಞಾನಿ, ಮಾಜಿ ರಾಷ್ಟ್ರಪತಿ ಭಾರತರತ್ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಕಾರ್ಪೊರೇಟ್ ವ್ಯವಹಾರ ಸಚಿವ ಎಂ. ವೀರಪ್ಪ ಮೊಯಿಲಿ, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಇತರರು ಭಾಗವಹಿಸಲಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಕಾಸಲ್ ಎಸ್. ವಿಠಲ್ ಹಾಗೂ ಸದಸ್ಯರ ನೇತೃತ್ವದಲ್ಲಿ ಸಂಸ್ಥೆ ಉತ್ತಮ ಪ್ರಗತಿ ದಾಖಲಿಸಿದೆ. ಸಂಸ್ಥೆಯು ದಾವಣಗೆರೆ ಮತ್ತು ರಾಜ್ಯದ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಒಂದು ಪರಿಪೂರ್ಣ ಕಂಪ್ಯೂಟರೀಕೃತ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯವನ್ನು ತೆರೆಯಲು ಉದ್ದೇಶಿಸಿದ್ದೇವೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಇದೆ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಸಂಸ್ಥೆಯ ಗೌರವ ಜಂಟಿ ಕಾರ್ಯದರ್ಶಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್.

ಸಾರ್ವಜನಿಕರಿಗೆ ಮುಕ್ತ ಪ್ರವೇಶ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 17ರಂದು ಸಂಜೆ 6ಕ್ಕೆ ನಡೆಯಲಿರುವ ಬಾಪೂಜಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ. ಕಾರ್ಯಕ್ರಮದ ನಂತರ ರಾತ್ರಿ 8.30ಕ್ಕೆ ವೈ.ಕೆ. ಮುದ್ದುಕೃಷ್ಣ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅಥಣಿ ವೀರಣ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.