ಮುಡಿಪು: ಸುಮಾರು 900 ವರ್ಷಗಳ ಹಿಂದೆ ಸಾಗಿಬಂದ ಜೀವ ವಿಕಾಸದಿಂದಾಗಿ ಭೂಮಿಯಲ್ಲಿ ವೈವಿಧ್ಯಮಯ ಜೀವಿಗಳು ರೂಪುಗೊಂಡಿದ್ದು, ಮನುಷ್ಯನ ಸುಸ್ಥಿರವಲ್ಲದ ಅಭಿವೃದ್ಧಿಯಿಂದಾಗಿ ಈ ಜೀವಿಗಳು ನಾಶವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಖ್ಯಾತ ವಿಜ್ಞಾನ ಅಂಕಣಕಾರ ಪ್ರೊ.ಎಸ್.ಎನ್.ಹೆಗ್ಡೆ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಭಾಗಿತ್ವದೊಂದಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆಶ್ರಯದಲ್ಲಿ ಮಂಗಳವಾರ ಮಂಗಳೂರು ವಿ.ವಿ. ಹಳೆ ಸೆನೆಟ್ ಹಾಲ್ನಲ್ಲಿ ನಡೆದ ‘ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನ: 2010-11’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭುವಿಯಲ್ಲಿರುವ ವೈವಿಧ್ಯಮಯ ಜೀವರಾಶಿಯನ್ನು ಜೀವ ವೈವಿಧ್ಯತೆ ಎಂದು ಕರೆಯುತ್ತೇವೆ. ಎಲ್ಲಾ ಜೀವರಾಶಿಗಳು ತಮ್ಮದೇ ಆದ ವಿಶಿಷ್ಟ ವಂಶವಾಹಿಗಳನ್ನು ಹೊಂದಿದ್ದು, ಈ ವಂಶವಾಹಿಗಳು ಪ್ರಕೃತಿಯಲ್ಲಿ ಲಕ್ಷಾಂತರ ವರ್ಷ ಕಾಲ ನೈಸರ್ಗಿಕವಾಗಿ ನಡೆದ ಪ್ರಯೋಗಗಳ ಫಲದಿಂದ ಹುಟ್ಟಿದ ಜೀವವಿಶಿಷ್ಟ ಸೂತ್ರವಾಗಿದೆ ಎಂದು ಅವರು ವಿಶ್ಲೇಷಿಸಿದರು.

ಒಂದು ಜೀವ ಸಂತತಿ ನಾಶವಾದರೆ ಪ್ರಕೃತಿಯ ಲಕ್ಷಾಂತರ ವರ್ಷದ ಶ್ರಮ ವ್ಯರ್ಥವಾದಂತೆ. ವೈವಿಧ್ಯಮಯ ಜೀವಿಗಳು ಇರುವುದಷ್ಟೇ ಅಲ್ಲದೆ ಅವುಗಳ ನಡುವೆ ಒಂದಕ್ಕೊಂದು ಅನ್ಯೋನ್ಯ ಸಂಬಂಧವಿರುತ್ತದೆ. ಯಾವುದೇ ಜೀವಿ, ಇನ್ನೊಂದು ಜೀವಿಯನ್ನು ಅವಲಂಬಿಸದೆ ಬದುಕಲು ಖಂಡಿತ ಸಾಧ್ಯವೇ ಇಲ್ಲ. ಹೂವು-ಜೇನುಗಳು ನಡುವೆ, ಹುಲ್ಲು-ಸಸ್ಯಾಹಾರಿಗಳ ನಡುವೆ, ಹೀಗೆ ಅನೇಕಾನೇಕ ಜೀವಿಗಳ ನಡುವೆ ಬಿಡಿಸಲಾರದ ಸಂಬಂಧ ಜಟಿಲವಾದ ಜೀವ ಜಾಲವಾಗಿ ಹೆಣೆದುಕೊಂಡಿವೆ ಎಂದರು.
ಕಾರ್ಯಗಾರವನ್ನು ಕಣ್ಣೂರು ಮತ್ತು ಕಲ್ಲಿಕೋಟೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ.ಅಬ್ದುಲ್ ರಹಿಮಾನ್ ಉದ್ಘಾಟಿಸಿದರು.

ಮಂಗಳೂರು ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದ ಡೀನ್ ಪ್ರೊ.ಕೆ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಚಾಲಕರಾದ ಡಾ,ಪ್ರಶಾಂತ್ ನಾಯ್ಕೊ, ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ರಾಜಶೇಖರ್, ನಿವೇದಿತಾ ರಾಮಕುಂಜ, ಡಾ.ಕೆ.ಮಂಜುಳಾ ಭಾಗವಹಿಸಿದ್ದರು.

‘ದೈನಂದಿನ ಜೀವನದಲ್ಲಿ ಪರಿಸರಸ್ನೇಹಿ ಕಾರ್ಯ ಚಟುವಟಿಕೆಗಳು’ ಎನ್ನುವ ಕೈಪಿಡಿಯನ್ನು ಪ್ರೊ.ಎಸ್.ಎನ್.ಹೆಗ್ಡೆ ಬಿಡುಗಡೆಗೊಳಿಸಿದರು. ಖ್ಯಾತ ಪ್ರಕೃತಿ ಛಾಯಾಚಿತ್ರಕಾರರಾದ ಪುಟ್ಟರಾಜು ಕೆ.ಕೈಗಾ ಇವರು ಸೆರೆ ಹಿಡಿದ ನಿಸರ್ಗ ಮತ್ತು ವನ್ಯ ಜೀವಿಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಯಿತು. ಸುಮಾರು 900 ವರ್ಷಗಳ ಹಿಂದೆ ಸಾಗಿಬಂದ ಜೀವ ವಿಕಾಸದಿಂದಾಗಿ ಭೂಮಿಯಲ್ಲಿ ವೈವಿಧ್ಯಮಯ ಜೀವಿಗಳು ರೂಪುಗೊಂಡಿದ್ದು, ಮನುಷ್ಯನ ಸುಸ್ಥಿರವಲ್ಲದ ಅಭಿವೃದ್ಧಿಯಿಂದಾಗಿ ಈ ಜೀವಿಗಳು ನಾಶವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಖ್ಯಾತ ವಿಜ್ಞಾನ ಅಂಕಣಕಾರ ಪ್ರೊ.ಎಸ್.ಎನ್.ಹೆಗ್ಡೆ ಅಭಿಪ್ರಾಯಪಟ್ಟರು.

‘ದೈನಂದಿನ ಜೀವನದಲ್ಲಿ ಪರಿಸರಸ್ನೇಹಿ ಕಾರ್ಯ ಚಟುವಟಿಕೆಗಳು’ ಎನ್ನುವ ಕೈಪಿಡಿಯನ್ನು ಪ್ರೊ.ಎಸ್.ಎನ್.ಹೆಗ್ಡೆ ಬಿಡುಗಡೆಗೊಳಿಸಿದರು. ಖ್ಯಾತ ಪ್ರಕೃತಿ ಛಾಯಾಚಿತ್ರಕಾರರಾದ ಪುಟ್ಟರಾಜು ಕೆ.ಕೈಗಾ ಇವರು ಸೆರೆ ಹಿಡಿದ ನಿಸರ್ಗ ಮತ್ತು ವನ್ಯ ಜೀವಿಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.