ಸೆಂಟ್ರಲ್ನಲ್ಲಿ `ಹ್ಯಾಪಿನೆಸ್ ಸೇಲ್'
ದಿ ಸೆಂಟ್ರಲ್ ಮಳಿಗೆಯು ಸುಮಾರು ಒಂದು ಸಾವಿರ ಬ್ರಾಂಡ್ಗಳ ಮೇಲೆ ಶೇ.51 ರವರೆಗೆ ರಿಯಾಯಿತಿ ದರದ `ಹ್ಯಾಪಿನೆಸ್ ಸೇಲ್' ಮಾರಾಟ ಮೇಳ ಹಮ್ಮಿಕೊಂಡಿದೆ.
ದೇಶದ ಎಲ್ಲಾ ದಿ ಸೆಂಟ್ರಲ್ ಮಳಿಗೆಗಳಲ್ಲೂ ಜುಲೈ 5ರಿಂದ ಆಗಸ್ಟ್ 4ರವರೆಗೆ ಈ ಹ್ಯಾಪಿನೆಸ್ ಮೇಳ ಆಯೋಜಿಸಿದೆ. ಇತ್ತೀಚಿನ ಫ್ಯಾಷನ್ ಹಾಗೂ ಇತರೆ ಉತ್ಪನ್ನಗಳ ಮೇಲೆ ರಿಯಾಯಿತಿ ಘೋಷಿಸಿದೆ. ಎಲ್ಲಾ ವಯೋಮಾನದವರಿಗೂ ಮೇಳದಲ್ಲಿ ಉತ್ಪನ್ನಗಳಿವೆ.
ಮಹಿಳೆಯರಿಗಾಗಿ ಎಥ್ನಿಕ್, ಪಾಶ್ಚಾತ್ಯ, ಪಾರ್ಟಿವೇರ್ಗಳು ಗಮನ ಸೆಳೆಯಲಿವೆ. ಪುರುಷರಿಗೆ ಎಲ್ಲಾ ಬ್ರಾಂಡ್ಗಳ ಉಡುಪುಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ.
`ಅಂತರರಾಷ್ಟ್ರೀಯ ಹಾಗೂ ರಾಷ್ಟ್ರದ ಬ್ರಾಂಡ್ಗಳ ವಿಸ್ತೃತ ಶ್ರೇಣಿಯ ಉಡುಪುಗಳು ಇಲ್ಲಿ ದೊರೆಯಲಿವೆ. ಶಾಪಿಂಗ್ ಪ್ರಿಯರಿಗೆ ಇದೊಂದು ಉತ್ತಮ ಅವಕಾಶವಾಗಲಿದೆ' ಎಂದು ಹೇಳುತ್ತಾರೆ ಸೆಂಟ್ರಲ್ ಹಾಗೂ ಬ್ರಾಂಡ್ ಫ್ಯಾಕ್ಟರಿ ಮಾರುಕಟ್ಟೆ ಮುಖ್ಯಸ್ಥ ಜಿತೇಂದ್ರನಾಥ್ ಪತ್ರಿ. ನಗರದ ಎಲ್ಲಾ ದಿ ಸೆಂಟ್ರಲ್ ಮಾಲ್ಗಳಲ್ಲೂ `ಹ್ಯಾಪಿನೆಸ್ ಸೇಲ್' ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.