ಶನಿವಾರ, ಫೆಬ್ರವರಿ 27, 2021
25 °C
ರಿಯೊ ಓಪನ್‌ ಟೆನಿಸ್‌

ಸೆಮಿಫೈನಲ್‌ಗೆ ನಡಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಫೈನಲ್‌ಗೆ ನಡಾಲ್‌

ರಿಯೊ ಡಿ ಜನೈರೊ (ಐಎಎನ್‌ಎಸ್‌): ವಿಶ್ವದ ಅಗ್ರಮಾನ್ಯ ಆಟಗಾರ ಸ್ಪೇನ್‌ನ ರಫೆಲ್‌ ನಡಾಲ್‌ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ರಿಯೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ನಡಾಲ್‌ 6–1, 6–0ರಲ್ಲಿ ಪೋರ್ಚುಗಲ್‌ನ ಜೊಒ ಸೌಸಾ ಎದುರು ನಿರಾಯಾಸವಾಗಿ ಜಯ ಪಡೆದರು.ಎರಡೂ ಸೆಟ್‌ಗಳಲ್ಲಿ ಅವರು ಸಂಪೂರ್ಣ ಪಾರಮ್ಯ ಮೆರೆದರು. ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಒಂದೂ ಗೇಮ್‌ ಗೆಲ್ಲಲು ಸಾಧ್ಯವಾಗಲಿಲ್ಲ.

‘ಈ ಪಂದ್ಯದಲ್ಲಿ ನಾನು ಸಾಮರ್ಥ್ಯಕ್ಕೆ ತಕ್ಕಂತೆ  ಆಡಿದ್ದೇನೆ.  ಇದು ಟೂರ್ನಿಯಲ್ಲಿ ನಾನಾಡಿದ  ಅತ್ಯುತ್ತಮ ಪಂದ್ಯಗಳಲ್ಲೊಂದು. ಈಗ ಬೆನ್ನು ನೋವಿನ ಕುರಿತು ಮಾತನಾಡಲು  ಇಷ್ಟಪಡುವುದಿಲ್ಲ. ಸೆಮಿಫೈನಲ್‌ ಪ್ರವೇಶಿಸಿರುವುದಕ್ಕೆ ಸಂತಸವಾಗಿದ್ದು, ಮುಂದಿನ ಹಂತದಲ್ಲಿ ನಾನು ಕಠಿಣ ಪೈಪೋಟಿ ಎದುರಿಸಬೇಕಿದೆ. ’ ಎಂದು ಪಂದ್ಯದ ನಂತರ ನಡಾಲ್‌ ಪ್ರತಿಕ್ರಿಯಿಸಿದ್ದಾರೆ.ಸೆಮಿಫೈನಲ್‌ನಲ್ಲಿ ಅವರು ಪ್ಯಾಬ್ಲೊ ಆ್ಯಂಡುಜಾರ್‌ ಎದುರು ಆಡಲಿದ್ದಾರೆ. ದಿನದ ಮತ್ತೊಂದು ಎಂಟರ ಘಟ್ಟದ ಪಂದ್ಯದಲ್ಲಿ ಪ್ಯಾಬ್ಲೊ 6–1, 6–1ರಲ್ಲಿ ಟಾಮಿ ರೊಬೆರ್ಡೊ ವಿರುದ್ಧ ಸುಲಭವಾಗಿ ಗೆದ್ದರು.ಕ್ಲಾರಾಗೆ ಗೆಲುವು: ಮಹಿಳಾ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಕ್ಲಾರಾ ಜಾಕೊಪಲೊವಾ 6–4, 6–0ರಲ್ಲಿ ಕತಾರ್‌ಜ್ಯಾನ ಪೀಟರ್‌ ಅವರನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದರು.ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬ್ರೆಜಿಲ್‌ನ ತೆಲಿಯಾನ ಪೆರೀರಾ  6–4, 6–4ರಲ್ಲಿ ರೊಮೇನಿಯಾದ ಇರಿನಾ ಕ್ಯಾಮೆಲಿಯಾ ಬೇಗು ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.