ಸೋಮವಾರ, ಜನವರಿ 20, 2020
24 °C

ಸೆಮಿಫೈನಲ್‌ಗೆ ಪಂಕಜ್, ಭಾಸ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಪಂಕಜ್ ಅಡ್ವಾಣಿ ಮತ್ತು ಕರ್ನಾಟಕದ ಬಿ. ಭಾಸ್ಕರ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದರು.ಪಿಎಸ್‌ಪಿಬಿಯನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಪಂಕಜ್ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 142-151, 150-65, 151- 135, 151-147, 151-16 ರಲ್ಲಿ ರೂಪೇಶ್ ಶಾ ಅವರನ್ನು ಸೋಲಿಸಿದರು.

ಭಾಸ್ಕರ್ 152-20, 150-13, 151-70, 150-2 ರಲ್ಲಿ ರೈಲ್ವೇಯ ಸಿದ್ಧಾರ್ಥ್ ಪಾರಿಖ್ ವಿರುದ್ಧ ಜಯ ಪಡೆದರು. ಸೌರವ್ ಕೊಠಾರಿ ಮತ್ತು ಅಲೋಕ್ ಕುಮಾರ್ ಅವರೂ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟರು.

ಚೆಸ್: ಹರಿಕೃಷ್ಣಗೆ ಗೆಲುವು

ವಿಕ್ ಆ್ಯನ್ ಜೀ, ಹಾಲೆಂಡ್ (ಪಿಟಿಐ): ಏಷ್ಯನ್ ಚಾಂಪಿಯನ್ ಪಿ. ಹರಿಕೃಷ್ಣ ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಗುರುವಾರ ನಡೆದ 10ನೇ ಸುತ್ತಿನ ಸ್ಪರ್ಧೆಯಲ್ಲಿ ಅವರು ಇಟಲಿಯ ಡೇನಿಯಲ್ ವೊಕಾಟುರೊ ವಿರುದ್ಧ ಗೆಲುವು ಪಡೆದರು.ಇದೀಗ ಭಾರತದ ಸ್ಪರ್ಧಿ ಒಟ್ಟು ಎಂಟು ಪಾಯಿಂಟ್‌ಗಳೊಂದಿಗೆ ಎಲ್ಲರಿಗಿಂತ ಮುಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಷ್ಯಾದ ಅಲೆಕ್ಸಾಂಡರ್ ಮೊಟಿಲೇವ್ ಬಳಿ ಏಳು ಪಾಯಿಂಟ್‌ಗಳಿವೆ. ಭಾರತದ ಡಿ. ಹರಿಕಾ ಹಾಲೆಂಡ್‌ನ ಜಾನ್ ಟಿಮನ್ ಜೊತೆ ಪಾಯಿಂಟ್ ಹಂಚಿಕೊಂಡರು. `ಸಿ~ ಗುಂಪಿನ ಪಂದ್ಯದಲ್ಲಿ ತಾನಿಯಾ ಸಚ್‌ದೇವ್ ಹಾಲೆಂಡ್‌ನ ಲೀಸಾ ಶ್ಕಟ್ ಅವರನ್ನು ಮಣಿಸಿ ಟೂರ್ನಿಯ ಮೊದಲ ಜಯ ದಾಖಲಿಸಿದರು.

ಪ್ರತಿಕ್ರಿಯಿಸಿ (+)