ಬುಧವಾರ, ಏಪ್ರಿಲ್ 14, 2021
31 °C

ಸೆಹ್ವಾಗ್, ಜಹೀರ್‌ಗೆ ಸ್ಥಾನ; ಸಚಿನ್‌ಗೆ ವಿಶ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ವೇಗದ ಬೌಲರ್‌ ಜಹೀರ್ ಖಾನ್ ಅವರು ಶ್ರೀಲಂಕಾ ವಿರುದ್ಧ ಜುಲೈ 21 ರಿಂದ ಆರಂಭವಾಗುವ 5 ಏಕದಿನ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಗಾಯಗೊಂಡಿದ್ದ ಸೆಹ್ವಾಗ್ ಹಾಗೂ ಜಹೀರ್ ಅವರು ಗುಣಮುಖರಾಗಿದ್ದು, ಅವರು ಮತ್ತೆ ತಂಡಕ್ಕೆ ಮರಳಿದ್ದಾರೆ.

ಸಚಿನ್ 2011ರ ವಿಶ್ವಕಪ್ ನಂತರ ಕೇವಲ 2 ಏಕದಿನ ಸರಣಿಯಲ್ಲಷ್ಠೆ ಆಟವಾಡಿದ್ದರೂ ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಅವರಿಗೆ ವಿಶ್ರಾಂತಿ ನೀಡಲು ಇಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿಯು ನಿರ್ಧರಿಸಿತು.

ಸಚಿನ್ ಸ್ಥಾನಕ್ಕೆ ಮುಂಬೈ ಬ್ಯಾಟ್ಸ್ ಮ್ಯಾನ್ ಆಜೀಂಕೆ ರಹಾನೆ ಆಯ್ಕೆಯಾಗಿದ್ದರೆ, ರವೀಂದ್ರ ಜಡೇಜಾ ಬದಲಿಗೆ ಪ್ರಜ್ಞಾನ್ ಓಜಾ ಅವರನ್ನು ಆಯ್ಕೆ ಮಾಡಲಾಗದೆ.

5 ಏಕದಿನ ಪಂದ್ಯದ ಜತೆಗೆ ಒಂದು  ಟ್ವೆಂಟಿ-20 ಪಂದ್ಯದಲ್ಲೂ ಭಾರತ ಶ್ರೀಲಂಕಾ ವಿರುದ್ಧ ಸೆಣಸಲಿದೆ.

ತಂಡ ಇಂತಿದೆ:

ಮಹೇಂದ್ರ ಸಿಂಗ್ ದೋನಿ (ನಾಯಕ)

ವಿರೇಂದ್ರ ಸೆಹ್ವಾಗ್

ಜಹೀರ್ ಖಾನ್

ವಿರಾಟ್ ಕೋಹ್ಲಿ

ಗೌತಮ್ ಗಂಭೀರ್

ಆರ್. ಅಶ್ವಿನ್

ಉಮೇಶ್ ಯಾದವ್

ಅಶೋಕ್ ದಿಂಡಾ

ಸುರೇಶ್ ರೈನಾ

ವಿನಯ್ ಕುಮಾರ್

ರೋಹಿತ್ ಶರ್ಮಾ

ಪ್ರಜ್ಞಾನ್ ಓಜಾ

ಅಜಿಂಕ್ಯಾ ರಹಾನೆ

ಮನೋಜ್ ತಿವಾರಿ

ರಾಹುಲ್ ಶರ್ಮಾ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.