ಭಾನುವಾರ, ಜನವರಿ 19, 2020
20 °C

ಸೈಫ್‌ಗೆ ಸಮಯ ನಿರ್ವಹಣೆಯೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸದ್ಯಕ್ಕೆ ಸಮಯ ನಿರ್ವಹಣೆಯೇ ಸವಾಲಾಗಿದೆ. ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯಲಾಗುತ್ತಿಲ್ಲ. ಮಗಳು ಸಾರಾ ಜೊತೆಗೆ ಸ್ನೇಹಿತನಂತಿದ್ದೇನೆ. ಮಗ ಇಬ್ರಾಹಿಂಗೆ ಕ್ರಿಕೆಟ್‌ ಆಡುವುದೆಂದರೆ ಇಷ್ಟ. ಬಿಡುವಿದ್ದಾಗ ನಾವಿಬ್ಬರೂ ಆಟದ ಮೈದಾನದಲ್ಲಿ ಸಾಕಷ್ಟು ಬೆವರಿಳಿಸುತ್ತೇವೆ. ಆದರೆ ಈಗ ಸಮಯದ್ದೇ ಕೊರತೆ. ಅಮ್ಮನೊಂದಿಗೂ ಸಾಕಷ್ಟು ಸಮಯ ಕಳೆಯಲಾಗುತ್ತಿಲ್ಲ...’ಹೀಗೆ ಸೈಫ್‌ ಅಲಿ ಖಾನ್‌ ತಮ್ಮ ಜೀವನದ ಬಗ್ಗೆ ಸಾಕಷ್ಟು ವಿವರಗಳನ್ನು ನೀಡುತ್ತಿದ್ದಾರೆ. ಯಾವತ್ತೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಇಷ್ಟಪಡದ ಸೈಫ್‌, ಇದೀಗ ಜೀವನದ ಪುಟಗಳನ್ನು ಅಭಿಮಾನಿಗಳಿಗಾಗಿ ಬಿಚ್ಚಿಡುತ್ತಿದ್ದಾರಂತೆ.‘ನನಗೆ ಮನೆಯೂಟವೆಂದರೆ ಇಷ್ಟ. ಅನ್ನ, ಸಾರು, ಬೆಂಡೆಕಾಯಿ... ಪ್ರತಿದಿನ ಬೆಂಡೆಕಾಯಿ ತಿಂದರೂ ಬೇಸರಿಸುವುದಿಲ್ಲ. ಆದರೆ ಊಟ ಸರಳವಾಗಿರಬೇಕು. ಊಟದ ವಿಷಯದಲ್ಲಿ ಇಷ್ಟಿದ್ದರೆ ಸಾಕು. ಶೂ ಸಂಗ್ರಹದ ಶೋಕಿ ಇದೆ. ಅದನ್ನು ಮಾತ್ರ ತಡೆಯಲು ಆಗದು’ ಎಂದು ಹೇಳುತ್ತಾರೆ ಅವರು.

ನಟಿ ಅಮೃತಾ ಸಿಂಗ್‌ ಅವರೊಡನೆ 2004ರಲ್ಲಿ ವಿಚ್ಛೇದನ ಪಡೆದ ನಂತರ ಸೈಫ್‌ ತಮ್ಮ ಮಕ್ಕಳೊಂದಿಗೆ ಬಿಡುವಿನ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರಂತೆ.ಇನ್ನಷ್ಟು ವೈಯಕ್ತಿಕ ಜೀವನದ ಪ್ರಶ್ನೆಗಳನ್ನು ಕೇಳಿದರೆ, ಒಬ್ಬ ಕಲಾವಿದ ತನ್ನ ಪಾತ್ರಗಳಿಂದಾಗಿ ಚರ್ಚೆಯಲ್ಲಿರಬೇಕು. ವೈಯಕ್ತಿಕ ಜೀವನದಿಂದಲ್ಲ ಎಂದೂ ಉತ್ತರಿಸುತ್ತಾರೆ ಈ ನವಾಬ್‌ ಖಾನ್‌.

ಪ್ರತಿಕ್ರಿಯಿಸಿ (+)