ಸೋಮವಾರ, ಜನವರಿ 20, 2020
20 °C

ಸೊನಾಟಾ: ಅಗ್ಗದ ಕೈಗಡಿಯಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಾಟಾ ಸಂಸ್ಥೆಯ ಕೈಗಡಿಯಾರ ಬ್ರಾಂಡ್ ಸೋನಾಟಾ, ಅಗ್ಗದ ಕೈಗಡಿಯಾರವನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.ಅಲಾರಾಂ, ಸ್ಟಾಪ್‌ವಾಚ್, ಜಲ ನಿರೋಧಕ, ಒಂದು ವರ್ಷ ವಾರಂಟಿ ಮತ್ತಿತರ ಸೌಲಭ್ಯಗಳನ್ನು ಒಳಗೊಂಡಿರುವ ಡಿಜಿಟಲ್ ಕೈಗಡಿಯಾರವು ರೂ. 225ಕ್ಕೆ ದೊರೆಯಲಿದೆ. ಸಂಸ್ಥೆಯ ಇತರ ಎಲ್ಲ ಬಗೆಯ ಸೂಪರ್ ಫೈಬರ್ ಕೈಗಡಿಯಾರಗಳ ಮೇಲೆ ಫೆಬ್ರುವರಿ 14ರವರೆಗೆ ಶೇ 20ರಷ್ಟು ರಿಯಾಯ್ತಿ ಸೌಲಭ್ಯ ಘೋಷಿಸಲಾಗಿದೆ ಎಂದು ಟೈಟಾನ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಳಪೆ ಗುಣಮಟ್ಟದ, ಖಾತರಿ ಇಲ್ಲದ , ತೆರಿಗೆ ತಪ್ಪಿಸುವ ಅಸಂಘಟಿತ ವಲಯದ ಕೈಗಡಿಯಾರಗಳ ಹಾವಳಿ ತಪ್ಪಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನ ಒದಗಿಸಲು ಈ ಕೈಗಡಿಯಾರ ಪರಿಚಯಿಸಲಾಗಿದೆ. ಪ್ರತಿ ವರ್ಷ ಇಂತಹ 10 ಲಕ್ಷ ಕೈಗಡಿಯಾರ ಮಾರಾಟ ಮಾಡುವ ಗುರಿ ನಿಗದಿಪಡಿಸಲಾಗಿದೆ. ಮಧ್ಯಮ ವರ್ಗದವರನ್ನು ಗುರಿಯಾಗಿಟ್ಟುಕೊಂಡೇ ಈ ಅಗ್ಗದ ಕೈಗಡಿಯಾರ ಪರಿಚಯಿಸಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)