ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 7 ರ ಬಿಜೆಪಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ಸಂಖ್ಯೆಯ 14 ಸದಸ್ಯೆ ಲಕ್ಷ್ಮಿ ವೆಂಕಟಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ಪಟ್ಟಣ ಪಂಚಾಯ್ತಿ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾದರು. ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆದು ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಮೀಸಲಾತಿ ನಿಗದಿಗೊಳ್ಳದೆ ಖಾಲಿಯಾಗಿತ್ತು.

ಮುಂದಿನ 30 ತಿಂಗಳ ಅವಧಿಗೆ ಮೊದಲ 15 ತಿಂಗಳ ಅವಧಿಯನ್ನು ಸೊಪ್ಪುಗುಡ್ಡೆ ರಾಘವೇಂದ್ರ ಅವರನ್ನು ಪಕ್ಷ ನೇಮಕ ಮಾಡಿದೆ. ಪಟ್ಟಣ ಪಂಚಾಯ್ತಿ 15 ಸದಸ್ಯ ಬಲದಲ್ಲಿ ಬಿಜೆಪಿ 11ಕಾಂಗ್ರೆಸ್ 2, ಜೆಡಿಎಸ್1 ಹಾಗೂ ಕೆಜೆಪಿ 1ಸ್ಥಾನ ಗಳಿಸಿದೆ.

ಅಧ್ಯಕ್ಷ ಹುದ್ದೆ ಬಿಸಿಎಂ(ಎ) ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದೆ. ಬಿಸಿಎಂ(ಎ) ವರ್ಗಕ್ಕೆ ಸೇರಿದ 4 ಮಂದಿ ಸದಸ್ಯರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು ಅಧ್ಯಕ್ಷ ಹುದ್ದೆ ನೇಮಕ ಬಿಜೆಪಿಗೆ ಸವಾಲಾಗಿ ಪರಿಣಮಿಸಿತ್ತು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ರಹಮತ್ ಉಲ್ಲಾ ಅಸಾದಿ, ನವೀನ್, ರಾಜೀವನ್ ಅವರ ನಡುವೆ ಮುಂದಿನ 15 ತಿಂಗಳ ಅವಧಿಯ ಅಧಿಕಾರ ಹಂಚಿಕೆಯಾಗುವ ಸಾಧ್ಯತೆಗಳಿವೆ.

ಚುನಾವಣಾ ಅಧಿಕಾರಿಗಳಾಗಿ ತಹಶೀಲ್ದಾರ್ ಗಣೇಶ ಮೂರ್ತಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷರ ಆಯ್ಕೆ ಕಸರತ್ತಿನಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಮಾಜಿ ಶಾಸಕ ಆರಗ ಜ್ಞಾನೇಂದ್ರ, ಪಕ್ಷದ ಮುಖಂಡರಾದ ನಾಗರಾಜಶೆಟ್ಟಿ, ಪಕ್ಷದ ಕ್ಷೇತ್ರ ಅಧ್ಯಕ್ಷ ಚಕ್ಕೂಡಬೈಲು ರಾಘವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.