ಶುಕ್ರವಾರ, ಮೇ 14, 2021
31 °C

ಸೊರಬ: ಗುಡವಿ ಪಕ್ಷಿಧಾಮ ಪ್ರವೇಶ ಶುಲ್ಕ ಇಳಿಕೆಗೆ ವಿದ್ಯಾರ್ಥಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಗುಡವಿ ಪಕ್ಷಿಧಾಮದ ಪ್ರವೇಶ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಇಲ್ಲಿನ ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಈ ಮೊದಲು ರೂ 15 ಇದ್ದ ಶುಲ್ಕವನ್ನು ಏಕಾಏಕಿ 50ಕ್ಕೆ ಏರಿಸಲಾಗಿದೆ.ಇದರಿಂದಾಗಿ ಜನಸಾಮಾನ್ಯರಿಗೆ ಪಕ್ಷಿಧಾಮ ನೋಡುವ ಅವಕಾಶ ತಪ್ಪಿ ಹೋಗುತ್ತಿದೆ. ಅಲ್ಲದೇ, ಪ್ರವಾಸಿಗರ ಸಂಖ್ಯೆ ಸಹ ಕ್ಷೀಣಿಸುತ್ತಿದೆ. ಇದು ಪಕ್ಷಿಧಾಮದ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪ್ರವೇಶ ಶುಲ್ಕವನ್ನು ರೂ 5ಕ್ಕೆ, ವಾಹನ ಪಾರ್ಕಿಂಗ್ ಶುಲ್ಕವನ್ನು ರೂ 10ಕ್ಕೆ ಕಡಿಮೆಗೊಳಿಸುವಂತೆ ಆಗ್ರಹಿಸಿ, ತಾಲ್ಲೂಕು ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸ್ಥಳಕ್ಕೆ ಹಾಜರಾದ ಕಾರ್ಗಲ್ ವನ್ಯಜೀವಿ ವಲಯದ ಆರ್‌ಎಫ್‌ಒ ರಮೇಶ್ ಪುಟ್ನಳ್ಳಿ, ಸಿಬ್ಬಂದಿ ರಾಮಪ್ಪ ಮಾತನಾಡಿ, ಬಸ್, ಮಿನಿ ಬಸ್‌ಗಳಿಗೆ ರೂ10, ಜೀಪು, ಕಾರುಗಳಿಗೆ ರೂ 5, ಮೋಟಾರ್ ಸೈಕಲ್‌ಗೆ ್ಙ 2  ಹಾಗೂ ಸ್ಥಿರಚಿತ್ರ ಕ್ಯಾಮೆರಾಕ್ಕೆ ರೂ 10, ವಿಡಿಯೊ ಕ್ಯಾಮೆರಾಕ್ಕೆ ರೂ 25 ನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.ಪ್ರವೇಶ ಶುಲ್ಕ ಇಳಿಕೆ ಕುರಿತು ಕೂಡಲೇ ಮೇಲಧಿಕಾರಿ ಗಮನಕ್ಕೆ ತರುವುದಾಗಿ ಅಧಿಕಾರಿ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಜೆ.ಎಸ್. ಚಿದಾನಂದಗೌಡ, ವಾಹನ ಚಾಲಕರ ಸಂಘದ ಅಧ್ಯಕ್ಷ ದಿವಾಕರ್, ಮಾಜಿ ಪ.ಪಂ. ಸದಸ್ಯ ಶ್ರೀಕಾಂತ್‌ಶೇಟ್, ವೀರೇಂದ್ರಗೌಡ, ಸುದರ್ಶನ್, ಸಂತೋಷ್, ಅಲ್ತಾಫ್, ನಾಗರಾಜ್, ಅನಿಲ್‌ಕುಮಾರ್, ವಾಸಿಂ ಖಾನ್, ಪ್ರೇಮಕುಮಾರ್, ಹೇಮಾಜಿನಾಯ್ಕ, ಹರೀಶ್ ಇನ್ನಿತರ ಸರ್ಕಾರಿಟಿಐ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.