ಲಂಡನ್ (ಪಿಟಿಐ): ಹೆಚ್ಚಿನವರಿಗೆ ಇದೊಂದು ವಿಲಕ್ಷಣ ಸಲಹೆ ಅಂತ ಅನಿಸಬಹುದು. ಆದರೆ ತಜ್ಞರು ಅಂತಹ ಸಲಹೆಯನ್ನು ನಮ್ಮ ಮುಂದಿಟ್ಟಿದ್ದಾರೆ.

`ನೀವು ಯಾರನ್ನಾದರೂ ಭೇಟಿ ಆದ ಸಂದರ್ಭದಲ್ಲಿ ಹಸ್ತ ಲಾಘವ ಮಾಡಬೇಡಿ; ಬದಲಿಗೆ ಅವರ ಮೊಣಕೈಯನ್ನು ಸ್ಪರ್ಶಿಸಿ! - ಜ್ವರ ಸೇರಿದಂತೆ ಸೋಂಕಿನಿಂದ ಬರುವ ಇನ್ನಿತರ ರೋಗಗಳು ಹರಡುವುದನ್ನು ತಡೆಗಟ್ಟಲು ಈ ಅಭ್ಯಾಸ ನೆರವಾಗಬಲ್ಲದು~ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

`ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕುಗಳನ್ನು ಬರದಂತೆ ತಡೆಯಲು, ಮೊಣಕೈಯನ್ನು ಸ್ಪರ್ಶಿಸುವುದು ಅಥವಾ ಜಪಾನಿಯರು ಅನುಸರಿಸುವ ಮುಂದಕ್ಕೆ ಬಾಗಿ ನಮಸ್ಕರಿಸುವುದು ಸೇರಿದಂತೆ ಇತರ ಸುರಕ್ಷಿತ ಕ್ರಮಗಳನ್ನು ಜನರು ಬಳಸಬೇಕು~ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವೈರಸ್ ತಜ್ಞ ಡಾ. ನಾಥನ್ ವೋಲ್ಫ್ ಅವರು ಸಲಹೆ ನೀಡಿದ್ದಾರೆ.

ಹೊಟ್ಟೆ ನೋವು, ಜ್ವರ, ಶೀತ ಮುಂತಾದ ಕಾಯಿಲೆಗಳು ವ್ಯಕ್ತಿಗಳ ಚರ್ಮಗಳ ಸ್ಪರ್ಶದಿಂದ ಹರಡುತ್ತವೆ ಎಂದು ಡಾ. ವೊಲ್ಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿ `ದಿ ಸಂಡೇ ಟೈಮ್ಸ~ ವರದಿ ಮಾಡಿದೆ.

ಇದರ ಕುರಿತಾಗಿಯೇ, `ದಿ ವೈರಲ್ ಸ್ಟಾರ್ಮ್, ಡಾ. ವೋಲ್ಫ್ ಸೇಸ್~ ಎಂಬ ಪುಸ್ತಕವನ್ನೂ ಅವರು ಬರೆದಿದ್ದಾರೆ.
ಪರಸ್ಪರ ಹಸ್ತ ಲಾಘವ ಮಾಡುವುದನ್ನು ಬಿಟ್ಟು ಮೊಣಕೈ ಸ್ಪರ್ಶಿಸುವುದರಿಂದ ಸಿಗುವ ಆರೋಗ್ಯ ಸುರಕ್ಷತೆಯ ಬಗ್ಗೆ ನಾವು ಜನರಿಗೆ ಮಾಹಿತಿ ನೀಡಬೇಕು.

ಖಂಡಿತವಾಗಿಯೂ ಈ ಅಭ್ಯಾಸ ಸೋಂಕು ಹರಡುವ ಪ್ರಮಾಣವನ್ನು ಕುಗ್ಗಿಸಬಲ್ಲುದು. ಅದೇ ರೀತಿ ಸೀನುವಾಗ ನಾವು ಅಂಗೈಯನ್ನು ಹಿಡಿಯುವ ಬದಲು ಮೊಣಕೈಯನ್ನು ಬಾಯಿಗೆ ಅಡ್ಡವಾಗಿ ಹಿಡಿಯುವುದು ಒಳಿತು~ ಎಂದು ವೋಲ್ಫ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಜ್ವರ ತರುವ ವೈರಸ್ನ ಕುರಿತಂತೆ ಇತ್ತೀಚೆಗೆ ಅಧ್ಯಯನ ನಡೆಸಲಾಗಿದ್ದು, ಈ ವೈರಸ್ಗಳು ಬಾಗಿಲಿಗೆ ಅಳವಡಿಸಿರುವ ಕೈಗಳಲ್ಲಿ, ರಿಮೋಟ್ ಕಂಟ್ರೋಲ್ಗಳಲ್ಲಿ, ತೊಳಯದೇ ಇರುವ ಪಾತ್ರೆಗಳಲ್ಲಿ 24 ಗಂಟೆಗಳವರೆಗೆ ಜೀವಿಸಬಲ್ಲವು ಎಂಬುದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.