ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಈಚೆಗೆ ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ, ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ನಿರೀಕ್ಷಿತ ಜಯ ಗಳಿಸದೇ ಇರುವುದಕ್ಕೆ ಕಾರಣಗಳನ್ನು ಹುಡುಕಿದೆ.

ಪಕ್ಷದಲ್ಲಿ ಪ್ರಶ್ನಾತೀತ ನಾಯಕಿಯಾಗಿರುವ ಸೋನಿಯಾ ಗಾಂಧಿ ಅಪರೂಪಕ್ಕೆ ಮಾಧ್ಯಮಗಳಿಗೆ ಮುಖಾಮುಖಿಯಾಗಿ ಚುನಾವಣೆ ಸೋಲಿನ ಕಾರಣಗಳನ್ನು ಹೇಳಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಘಟನೆಯಲ್ಲಿನ ಲೋಪ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿನ ದೋಷಗಳು ಸೋಲಿಗೆ ಪ್ರಮುಖ ಕಾರಣಗಳೆಂದು ಗುರುತಿಸಿದ್ದಾರೆ; ಬೆಲೆ ಏರಿಕೆಯೂ ಇದರಲ್ಲಿ ಪಾತ್ರ ವಹಿಸಿದೆ ಎಂದಿದ್ದಾರೆ.

ಇದು ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ. `ಮುಂದಿನ ಪ್ರಧಾನಿ ಅಭ್ಯರ್ಥಿ~ ಎಂದು ಪಕ್ಷದ ಭಟ್ಟಂಗಿಗಳಿಂದ ಬಿಂಬಿಸಲಾಗುತ್ತಿದ್ದ ರಾಹುಲ್ ಗಾಂಧಿ ಅವರು ಪ್ರಚಾರದ ನೇತೃತ್ವ ವಹಿಸಿದ್ದರೂ ನಿರೀಕ್ಷಿತ ಫಲ ಸಿಗಲಿಲ್ಲವೆಂದರೆ ಸೋನಿಯಾ ಗುರುತಿಸಿದ ಅಂಶಗಳಷ್ಟೇ ಕಾಂಗ್ರೆಸ್ ಸೋಲಿಗೆ ಕಾರಣಗಳಲ್ಲ ಎಂಬುದು ಸ್ಪಷ್ಟ.

ಪಕ್ಷದ ಸಂಘಟನೆ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರ ನಿರ್ಧಾರವೇ ಅಂತಿಮವಾಗಿರುವುದರಿಂದ ಕಾಂಗ್ರೆಸ್ಸಿನ ಈಗಿನ ಸ್ಥಿತಿಗೆ ಸ್ವತಃ ತಾವೇ ಕಾರಣ ಎಂಬುದನ್ನು ಅವರು ಒಪ್ಪಿಕೊಂಡಂತಾಗಿದೆ. ದೇಶವನ್ನು ಮುನ್ನಡೆಸಲು ಇಂದಿರಾ ಗಾಂಧಿ ಕುಟುಂಬದ ವ್ಯಕ್ತಿಗಳ ವಿನಾ ಬೇರೆ ಯಾರೂ ಸಮರ್ಥರೇ ಇಲ್ಲ ಎಂಬಂಥ ಸ್ಥಿತಿ ಪಕ್ಷದಲ್ಲಿ ಇರುವವರೆಗೆ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಯಶಸ್ಸು ಗಳಿಸುವುದು ಸುಲಭವಲ್ಲ.

ರಾಜಸತ್ತೆಯನ್ನು ಓಲೈಸಿದಂತೆ ಒಂದು ಕುಟುಂಬದ ಆರಾಧನೆಯನ್ನು ಈಗಿನ ಮತದಾರರು ಒಪ್ಪಿಕೊಳ್ಳುವುದಿಲ್ಲ ಎಂಬುದು ಕಳೆದ ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೇ ಸ್ಪಷ್ಟವಾಗಿದ್ದರೂ ಕಾಂಗ್ರೆಸ್ ಅದರಿಂದ ಪಾಠ ಕಲಿತಿಲ್ಲ. ಆಡಳಿತದಲ್ಲಿ ಅನುಭವ ಇರುವವರು, ಜನರೊಂದಿಗೆ ಬೆರೆತು ರಾಜಕೀಯ ವ್ಯಕ್ತಿತ್ವ ರೂಪಿಸಿಕೊಂಡ ಅನುಭವಿಗಳು ಯಾವುದೇ ರಾಜಕೀಯ ಪಕ್ಷದ ಶಕ್ತಿ. ಆದರೆ ಇಂಥವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಯುವುದಕ್ಕೆ ಕಾಂಗ್ರೆಸ್ ಯಾವತ್ತೂ ಆಸ್ಪದ ಕೊಟ್ಟಿಲ್ಲ.

ಇದರ ಪರಿಣಾಮವಾಗಿ ಪ್ರಾದೇಶಿಕ ಪಕ್ಷಗಳು ಜನರ ವಿಶ್ವಾಸ ಪಡೆಯುವುದರಲ್ಲಿ ಯಶಸ್ವಿಯಾಗಿವೆ. ಈಗಂತೂ ಪ್ರಾದೇಶಿಕ ಪಕ್ಷಗಳ ಬೆಂಬಲ ಇಲ್ಲದೆ ರಾಷ್ಟ್ರೀಯವೆಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಸಾಧ್ಯವೇ ಇಲ್ಲ. ರಾಜ್ಯಗಳಲ್ಲಿ ಅಧಿಕಾರ ಹಿಡಿದ ಪ್ರಾದೇಶಿಕ ಪಕ್ಷಗಳ ವೈಫಲ್ಯಗಳ ಲಾಭ ಪಡೆದುಕೊಳ್ಳುವುದರಲ್ಲಿಯೂ ಕಾಂಗ್ರೆಸ್ ವಿಫಲವಾಗುತ್ತಿದೆ.

ಒಂದು ಜಿಲ್ಲಾ ಘಟಕದ ಅಧ್ಯಕ್ಷನ ಆಯ್ಕೆಯ ಅಧಿಕಾರವನ್ನೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯ ತೀರ್ಮಾನಕ್ಕೆ ಬಿಡುವಂಥ ದಯನೀಯ ಸ್ಥಿತಿಯಿಂದ ಕಾಂಗ್ರೆಸ್ ಹೊರಬರಬೇಕು. ಜನಪರವಾಗಿರುವ, ಭ್ರಷ್ಟಾಚಾರ ಮತ್ತು ಅಪರಾಧ ಹಿನ್ನೆಲೆ ಇಲ್ಲದ ಸ್ಥಳೀಯ ನಾಯಕರನ್ನು ಗುರುತಿಸಿ ಟಿಕೆಟ್ ನೀಡುವ ಕ್ರಮವನ್ನು ಅನುಸರಿಸಿದರೆ ಚುನಾವಣೆಯಲ್ಲಿ ಗೆಲುವನ್ನು ನಿರೀಕ್ಷಿಸುವುದು ಸಾಧ್ಯ.

ಅಂಥ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಪಕ್ಷದಲ್ಲಿ ತಳಮಟ್ಟದಿಂದಲೇ ಸುಧಾರಣೆಯ ಕ್ರಮಗಳನ್ನು ಆರಂಭಿಸಬೇಕಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಹಣ, ಜಾತಿ ಮತ್ತು ತೋಳ್ಬಲ ಸಾಕು ಎಂದುಕೊಂಡರೆ ಮತದಾರರನ್ನು ಒಲಿಸಲಾಗದು ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳುವುದು ಲೇಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.