ಸೋಮವಾರ, 18-6-1962
ಜನತಾ ಕಾರು: ಕೇಂದ್ರ ನಿರ್ಧಾರ
ಮದ್ರಾಸ್, ಜೂನ್ 17- ಸಣ್ಣ ಕಾರು ತಯಾರಿಕೆ ಯೋಜನೆ ಕೇಂದ್ರದ ಪರಿಶೀಲನೆಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ `ಜನತಾ ಕಾರು~ಗಳ ತಯಾರಿಬೇಕೆ, ಬೇಡವೆ ಎಂಬದು ಜಾಗ್ರತೆ ನಿರ್ಧರಿಸಲಾಗುವುದು ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಸಿ. ಸುಬ್ರಮಣ್ಯಂ ಇಂದು ಇಲ್ಲಿ ತಿಳಿಸಿದರು.
ಮಹಾರಾಜರಿಗೆ ಡಾಕ್ಟರೇಟ್
ಮೈಸೂರು, ಜೂನ್ 17- ಜುಲೈ 12 ರಂದು ನಡೆಯುವ ಮೈಸೂರು ವಿವಿಯ ವಿಶೇಷ ಘಟಿಕೋತ್ಸವ ಸಮಾರಂಭವೊಂದರಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ವಿಶೇಷ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗುವುದೆಂದು ಇಲ್ಲಿ ತಿಳಿದುಬಂದಿದೆ.
ಸ್ಟುಡಿಯೋ ಸ್ಥಾಪನೆ: ಸಿಎಂ ಸಲಹೆ
ಬೆಂಗಳೂರು, ಜೂನ್, 17- ನಗರದಲ್ಲಿ ಸ್ಟುಡಿಯೋ ಸ್ಥಾಪನೆ ಸರ್ಕಾರ ಮತ್ತು ಖಾಸಗಿಯವರ ಸಂಯುಕ್ತ ಯೋಜನೆಯಾಗಿ ರೂಪುಗೊಳ್ಳಲೆಂದು ಮುಖ್ಯಮಂತ್ರಿ ಶ್ರೀ ಎಸ್.ಆರ್. ಕಂಠಿಸಲಹೆ ಮಾಡಿದರು.
ಅದು ಪೂರ್ಣವಾಗಿ ಸರ್ಕಾರದ ಸ್ಟುಡಿಯೋ ಆದಲ್ಲಿ ಒಂದು ಇಲಾಖೆಯ ಅಂಗವಾಗಿ ಒಂದು ಮೊಳೆ ಕದಲಿಸಬೇಕಾದರೂ ಕಾಗದಗಳು ಓಡಾಡಬೇಕಾಗುವುದೆಂದೂ ಅದರಿಂದ ಆಗಬೇಕಾದ ಕೆಲಸ ಬೇಗನೆ ಆಗುವುದಕ್ಕೆ ಅಡ್ಡಿಯಾದೀತೆಂದು ಎಚ್ಚರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.