ನರಸಿಂಹರಾಜಪುರ: 2008ರಲ್ಲಿ ಚರ್ಚ್ಗಳ ಮೇಲಿನ ದಾಳಿ ಕುರಿತಂತೆ ನಿವೃತ್ತ ನ್ಯಾಯ ಮೂರ್ತಿ ಬಿ.ಕೆ.ಸೋಮಶೇಖರ್ ನೀಡಿದ ವರದಿಯನ್ನು ತಿರಸ್ಕರಿಸುವಂತೆ ತಾಲ್ಲೂಕು ಕ್ರೈಸ್ತ ಒಕ್ಕೂಟದ ನೂರಾರು ಸದಸ್ಯರು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮನವಿಯಲ್ಲಿ 2008ರ ಸೆಪ್ಟೆಂಬರ್ ತಿಂಗಳಲಲಿ ರಾಜ್ಯದಾದ್ಯಂತ ಹಲವು ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿರುವುದು ಕ್ರೈಸ್ತ ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಈ ದಾಳಿಗೆ ಹಲವು ಸಂಘಟನೆಗಳು ಕಾರಣವಾಗಿದ್ದು, ಇದರ ಬಗ್ಗೆ ನಿಜಾಂಶ ಬೆಳಕಿಗೆ ತರಲು ನಿವೃತ್ತ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ನೇತೃತ್ವದ ಆಯೋಗ ರಚಿಸಲಾಗಿತ್ತು.

ಈ ಆಯೋಗ 2010ರ ಫೆಬ್ರುವರಿಯಲ್ಲಿ ಮಧ್ಯಂತರ ವರದಿ ಸರ್ಕಾರದ ಮುಂದಿಟ್ಟು ಅನೇಕ ನಿಜಾಂಶಗಳನ್ನು ಬಯಲುಪಡಿಸಿತ್ತು .ಆದರೆ ಆಯೋಗ ಕಳೆದ ಜನವರಿಯಲ್ಲಿ ನೀಡಿದ ಅಂತಿಮ ವರದಿ ವ್ಯತಿರಿಕ್ತವಾಗಿದ್ದು, ಕ್ರೈಸ್ತರ ಮೇಲೆ ನಡೆದ ದಬ್ಬಾಳಿಕೆ ಬಗ್ಗೆ ನಿಷ್ಪಕ್ಷಪಾತವಾದ ವರದಿ ನೀಡಲು ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ಮಧ್ಯಂತರ ವರದಿಗೂ ಮತ್ತು ಅಂತಿಮ ವರದಿಗೂ ಬಹಳಷ್ಟು ವ್ಯತ್ಯಾಸವಿದ್ದು, ಸೋಮಶೇಖರ್ ವರದಿ ಏಕಪಕ್ಷೀಯವಾಗಿದ್ದು, ಅದ್ದರಿಂದ ಈ ವರದಿಯನ್ನು ತಿರಸ್ಕರಿಸಿ ಸಿಬಿಐ ತನಿಖೆಗೆ ವಹಿಸಬೇಕೆಂಬುದು ಒತ್ತಾಯಿಸಲಾಗಿದೆ, ಅಲ್ಲದೆ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಮಾಯಕ ಕ್ರೈಸ್ತರ ಮೇಲೆ ಹಾಕಿತುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯ ಬೇಕೆಂದು ಆಗ್ರಹಿಸಲಾಗಿದೆ. ಕ್ರೈಸ್ತ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಇ.ಸಿ.ಸೇವಿಯಾರ್, ಸಮುದಾಯದ ಮುಖಂಡರಾದ ಜೆ.ಟಿ.ವರ್ಗೀಸ್, ಕೆ.ಎ.ತರಿಯನ್, ಇ.ಸಿ.ಜೋಯಿ, ಸೇವಿಯಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.