ಗುರುವಾರ , ಜೂನ್ 17, 2021
22 °C
ಚಂದ ಪದ್ಯ

ಸೋರೀ ಕ್ರೋ..!

– ನಿರ್ಮಲಾ ಸುರತ್ಕಲ್ Updated:

ಅಕ್ಷರ ಗಾತ್ರ : | |

ಅಮ್ಮ ನೀನು ಹಪ್ಳ ಕೊಟ್ಟೆ

ಹೊರಗೋಡ್ಬಂದು ತಿನ್ತಾ ಇದ್ದೆ

ಮರದ್ಮೇಲಿನ ಕಾಗೆ ಕೇಳ್ತು– ‘ಕಾ ಕಾ ಕಾ...’

‘ಪ್ಲೀಸ್‌, ಕೊಡೋ ಪ್ಲೀಸ್!’

‘ನೋ’ ಅಂದೆ, ಕೊಡಲ್ಲಾಂದೆ

ಕರ್ಕ್ ಕುರ್ಕ್ ಅಂತ ತಿನ್ತಾ ಇದ್ದೆ

ನೆಲಕ್ಕೆ ಹಾರಿ ಕಾಗೆ ಕೂಗ್ತು, ‘ಕ್ರಾ ಕ್ರಾ ಕ್ರಾ...’

‘ಚೂರು ಕೊಡೋ ಪ್ಲೀಸ್’

‘ಉಹೂಂ’  ಅಂದೆ, ಅಡಗಿಸಿ ಹಿಂದೆ

‘ಹಪ್ಳ ನಂಗೆ ಇಷ್ಟ’ ಅಂದೆ

ಮಾಮ ಆಗ ಬಂದ್ರು, ಕೊಟ್ರು ಐಸ್‌ಕ್ರೀಂ ವ್ಹಾ!

ವಾಹ್! ವಾಹ್! ವಾಹ್!

ಹಪ್ಪಳ ಕಾಗೆಗೆ ಎಸೆದೇ ಬಿಟ್ಟೆ

ಖುಷೀಲಿ ಐಸ್‌ಕ್ರೀಂ ತಿನ್ತಾ ಇದ್ದೆ

ಕಾಗೆ ಹಪ್ಳ ಎತ್ತಿ ಕರೀತು ‘ಕ್ರಾ! ಕ್ರಾ! ಕ್ರಾವ್!

‘ಕಂ ಕಂ ಕಮ್‘’

ಕಾಗೆಯ ಗುಂಪೇ ಹಾರಿ ಬಂತು

ಚೂರೇ ಚೂರೇ ಎಳ್ಕೊಂಡ್ ತಿನ್ತು

ನನ್ನ ಕಡೆಗೆ ನೋಡ್ತಾ ನೋಡ್ತಾ ‘ಕ್ರಾ ಕ್ರೋ ಕ್ರಾ!’

‘ಥೇಂಕ್ಸ್! ಥೇಂಕ್ಸ್! ಥೇಂಕ್ಸ್!’

ನಂಗೂ ಆಸೆ, ಅದ್ಕೂ ಆಸೆ

ಎಲ್ಲರ ಆಸೆ ಒಂದೇ ಅಲ್ವಾ?

ಬೇಜಾರಾಯ್ತು ಅಂದೆ, ‘ಕ್ರೋ, ಸೋರೀ ಕ್ರೋ!’

‘ಸೋರೀ ಸೋರೀ ಕ್ರೋ!’

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.