ಗುರುವಾರ , ಜನವರಿ 23, 2020
23 °C
ಬ್ಯಾಡ್ಮಿಂಟನ್: ವಿಶ್ವ ಸೂಪರ್ ಸರಣಿ ಫೈನಲ್ಸ್‌

ಸೋಲು ಕಂಡ ನೆಹ್ವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲು ಕಂಡ ನೆಹ್ವಾಲ್‌

ಕ್ವಾಲಾಲಂಪುರ (ಪಿಟಿಐ/ ಐಎಎನ್‌ಎಸ್): ಭಾರತದ  ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಸೂಪರ್ ಸರಣಿ ಫೈನಲ್‌ನ ಎರಡನೇ ಪಂದ್ಯದಲ್ಲಿ  ಸೋಲನುಭವಿಸಿದ್ದಾರೆ.ಗುರುವಾರ ಇಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಸೈನಾ 9–21, 14–21 ನೇರ ಸೆಟ್‌ಗಳಿಂದ ವಿಶ್ವದ ಅಗ್ರ ರ್‍ಯಾಂಕಿಂಗ್‌ನ ಆಟಗಾರ್ತಿ ಚೀನಾದ ಲೀ ಕ್ಸುಯೆರೂಯಿ ಗೆ ಶರಣಾದರು.27 ನಿಮಿಷಗಳ ಆಟದ ಮೊದಲ ಸೆಟ್‌ನ ಆರಂಭದಲ್ಲಿ ಚೀನಾದ ಲೀ ಯಾವುದೇ ಅವಕಾಶಕ್ಕೆ ಆಸ್ಪದ ನೀಡದೆ 8–1 ರಿಂದ ಮುನ್ನಡೆ ಸಾಧಿಸಿದರು. ಆದರೆ ನಂತರ ಪುಟಿದೆದ್ದ ಸೈನಾ ಅಂತರವನ್ನು 8–10 ಕ್ಕೆ ಇಳಿಸಿದರು. ನಂತರ ಮತ್ತೆ ಮಿಂಚಿನ ಆಟ ಪ್ರದರ್ಶಿಸಿದ ಲೀ ಸತತವಾಗಿ ಎಂಟು ಪಾಯಿಂಟ್ ಕಲೆ ಹಾಕುವ ಮೂಲಕ ನಿರಾಯಾಸವಾಗಿ ಸೆಟ್‌ನಲ್ಲಿ ಗೆಲುವು ಸಾಧಿಸಿದರು.ಆದರೆ ಎರಡನೇ ಸೆಟ್‌ನಲ್ಲಿ ಆರಂಭದಿಂದಲೇ ತೀವ್ರ ಪ್ರತಿರೋಧ ತೋರಿದ ಸೈನಾ 5–5 ರಿಂದ ಸಮಬಲ ಸಾಧಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ನಂತರ ಪ್ರಭಾವಿ ಆಟ ತೋರಿದ ಲೀ ಭಾರತೀಯ ಆಟಗಾರ್ತಿಯನ್ನು ಗೆಲುವಿನ ಸನಿಹಕ್ಕೂ ಬಾರದಂತೆ ನೋಡಿಕೊಳ್ಳುವ ಮೂಲಕ ಪಂದ್ಯವನ್ನು ತಮ್ಮದಾಗಿಸಿಕೊಂಡರು.ಇದರೊಂದಿಗೆ ಸೈನಾ ಚೀನಾದ ಆಟಗಾರ್ತಿ ಎದುರು ಆರನೇ ಬಾರಿಗೆ ಸೋಲು ಕಂಡಂತಾಗಿದೆ.ಬುಧವಾರ ನಡೆದ ಫೈನಲ್‌ನ ಮೊದಲ ಪಂದ್ಯದಲ್ಲಿ ಸೈನಾ ಜಪಾನ್‌ ನ ಮಿನತ್ಸು ಮಿಥಾನಿ ವಿರುದ್ಧ ಪರಾಭವಗೊಂಡಿದ್ದರು. ಟೂರ್ನಿಯ ಮುಂದಿನ ಪಂದ್ಯದಲ್ಲಿ ಸೈನಾ ಕೊರಿಯಾದ ಯೆಒನ್ ಜೂ ಬೇ ಎದುರು ಆಡಲಿದ್ದಾರೆ.ಈಚೆಗೆ ಸತತ ವೈಫಲ್ಯದಿಂದಾಗಿ  ಅವರು ವಿಶ್ವ ರ್‍ಯಾಂಕಿಂಗ್‌ನಲ್ಲೂ ಆರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಪ್ರತಿಕ್ರಿಯಿಸಿ (+)