ಶುಕ್ರವಾರ, ಮೇ 7, 2021
21 °C

ಸೋಹನಕುಮಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಬೆಂಗಳೂರು, (ಪಿಟಿಐ): ಕರ್ನಾಟಕ ಲೋಕಾಯುಕ್ತ ಪೊಲೀಸರು ಭೂಮಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಳಿಯ ಸೋಹನ್ ಕುಮಾರ್ ಅವರಿಗೆ ಸೇರಿದ್ದ  ಇಲ್ಲಿನ ನಾಲ್ಕು ಕಚೇರಿಗಳ ಮೇಲೆ ಮಂಗಳವಾರ ದಾಳಿ ನಡೆಸಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದರು.

ಲೋಕಾಯುಕ್ತ ಪೊಲೀಸರ ನಾಲ್ಕು ತಂಡಗಳು ಪ್ರತ್ಯೇಕವಾಗಿ ಪ್ರೇರಣಾ ಚೇಂಬರ್ಸ್, ಧವಳಗಿರಿ ಪ್ರಾಪರ್ಟಿಸ್ ನ ಎರಡು ಕಚೇರಿಗಳು ಮತ್ತು  ಸಹ್ಯಾದ್ರಿ ಹೆಲ್ತ್ ಕೇರ್ ಸಂಸ್ಥೆಗಳ ಕಚೇರಿಗಳ ಮೇಲೆ ದಾಳಿ ನಡೆಸಿದವು.

ಧವಳಗಿರಿ ಪ್ರಾಪರ್ಟಿಸ್ ಸಂಸ್ಥೆ  ಯಡಿಯೂರಪ್ಪ ಅವರ ಅಳಿಯ ಸೋಹನಕುಮಾರ ಮತ್ತು ಮಕ್ಕಳಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜೇಂದ್ರ ಅವರಿಗೆ ಸೇರಿದೆ.

ಅಳಿಯ ಮತ್ತು ಮಕ್ಕಳಿಗೆ ಅನುಕೂಲ ಕಲ್ಪಸುವ ಉದ್ದೇಶದಿಂದ ಕಾನೂನುಬಾಹಿರವಾಗಿ ಡಿನೋಟಿಪಿಕೇಷನ್ ಮಾಡಲಾಗಿದೆ ಹಾಗೂ ಅಕ್ರಮ ಎಸಗಲಾಗಿದೆ ಎಂಬ ಖಾಸಗಿ ದೂರಿನ ಪ್ರಕರಣದ ತನಿಖೆಯ ಅಂಗವಾಗಿ ಈ ದಾಳಿ ಮತ್ತು ದಾಖಲೆಗಳ ಪರಿಶೀಲನೆ ನಡೆದಿದೆ. 

ಕೊಪ್ಪಳದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಕೈಗೊಂಡಿರುವ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಲೋಕಾಯುಕ್ತ ಪೊಲೀಸರ ದಾಳಿಯ ಕುರಿತು ತಮಗೆ ನಿನ್ನೆಯೇ ಮಾಹಿತಿ ಇತ್ತು ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.