ಬಾಲಿವುಡ್ ಸುಂದರಿ ಸೋಹಾ ಅಲಿ ಖಾನ್ ಶಿಕ್ಷಕಿಯಾದರೆ ಹೇಗಿದ್ದೀತು? ಅಂದಗಾತಿ ಶಿಕ್ಷಕಿಯಿಂದ ಪಾಠ ಹೇಳಿಸಿಕೊಳ್ಳುವ ಭಾಗ್ಯ ಮಕ್ಕಳದ್ದು ಅಂದುಕೊಳ್ಳೋಣವೇ? ಸ್ನಿಗ್ಧ ನಗೆಯ ಸೋಹಾ ಇನ್ನು ಮುಂದೆ ಬಾಲಿವುಡ್ ಓಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವೇ ಎಂದು ಅವರ ಅಭಿಮಾನಿಗಳಿಗೆ ಬೇಸರವೂ ಆದೀತು. ಆದರೆ ಅವರು ಶಿಕ್ಷಕಿಯ ದಿರಿಸಿನಲ್ಲಿ ಪಾಠ ಮಾಡಿದ್ದು ಕೋಲ್ಕತ್ತಾದ ‘ಪಿ.ಅಂಡ್ ಜಿ. ಶಿಕ್ಷಾ ಸ್ಕೂಲ್’ನಲ್ಲಿ. ಪಿ ಅಂಡ್ ಜಿ ಶಿಕ್ಷಾ ಅಭಿಯಾನದ ಅಂಗವಾಗಿ ಅವರು ಒಂದು ದಿನದ ಮಟ್ಟಿಗೆ ‘ಸೋಹಾ ಮಿಸ್ ’ ಆದರು. ಮಕ್ಕಳೊಂದಿಗೆ ಬೆರೆತು ಸಂವಾದದ ರೂಪದಲ್ಲಿ ತರಗತಿಯನ್ನು ನಡೆಸಿಕೊಟ್ಟ ಸೋಹಾ, ಅಭಿಯಾನದ ಅಂಗವಾಗಿ ಶಾಲೆಯ ಗೋಡೆಯೊಂದಕ್ಕೆ ಬಣ್ಣವನ್ನೂ ಬಳಿದರು.

‘ಅವಕಾಶವಂಚಿತ ಮಕ್ಕಳ ಕನಸನ್ನು ನನಸು ಮಾಡುವುದು ಮತ್ತು ಗುಣಮಟ್ಟದ ಬದುಕು ಸಾಗಿಸಲು ಅಗತ್ಯ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯ. ದೇಶದಲ್ಲಿ ಶೇ 42ರಷ್ಟು ಗ್ರಾಮೀಣ ಭಾಗದ ಶಾಲೆಗಳಲ್ಲಿ ಇಂದಿಗೂ ಪ್ರಾಥಮಿಕ ಶಾಲೆಗಳಿಲ್ಲ, ಶೇ 30 ಪ್ರಾಥಮಿಕ ಶಾಲೆಗಳಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆಯಾಗಲೀ ಮೂಲಸೌಕರ್ಯಗಳಾಗಲೀ ಇಲ್ಲ’ ಎಂದೂ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.