ಶನಿವಾರ, ಜೂನ್ 12, 2021
23 °C

ಸೌಂದರ್ಯ ವೃದ್ಧಿಗೆ ಹೊಸ ಸಂತೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಂದರ್ಯ ವೃದ್ಧಿಗೆ ಹೊಸ ಸಂತೂರ್

ವಿಪ್ರೋ ಲಿಮಿಟೆಡ್ ಲಿಮಿಟೆಡ್‌ನ ವಿಭಾಗೀಯ ಸಂಸ್ಥೆ ವಿಪ್ರೋ ಕನ್‌ಸ್ಯೂಮರ್ ಕೇರ್ ಅಂಡ್ ಲೈಟಿಂಗ್ ಸಂತೂರ್ ಸಾಬೂನನ್ನು ಹೊಸ ಮಾದರಿಯಲ್ಲಿ ಪರಿಚಯಿಸುತ್ತಿದೆ.ಹೊಸ ಸುಗಂಧ, ಆಕಾರ, ಪ್ಯಾಕೇಜಿಂಗ್ ಜೊತೆಗೆ ಸಹಜ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಸುಧಾರಣೆ ಮಾಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.ಭಾರತದ ಮೂರನೇ ಅತಿ ದೊಡ್ಡ ಸಾಬೂನು ಬ್ರ್ಯಾಂಡ್ ಎನಿಸಿರುವ ಸಂತೂರ್, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ (17.3%) ಕೂಡ ಹೌದು.ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ತೆಲುಗು ಚಿತ್ರ ನಟ ಮಹೇಶ್ ಬಾಬು ಅವರನ್ನು ಬ್ರ್ಯಾಂಡ್ ಪ್ರತಿನಿಧಿಗಳನ್ನಾಗಿ ನೇಮಿಸಲಾಗಿದ್ದು, ಇವರ ಮೂಲಕ ಪ್ರಚಾರಗೊಳ್ಳಲಿರುವ ಜಾಹೀರಾತುಗಳು ಸದ್ಯದಲ್ಲೇ ಟೀವಿ ವಾಹಿನಿಗಳಲ್ಲಿ ಪ್ರಸಾರವಾಗಲಿವೆ. ಸಂತೂರ್ ಶ್ರೀಗಂಧ ಹಾಗೂ ಅರಿಶಿನದ ಅಂಶವುಳ್ಳ ಪ್ರತ್ಯೇಕ ಬೆಲೆ: ಪ್ರತಿ 90 ಗ್ರಾಂ ಸಾಬೂನಿಗೆ ರೂ.19.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.