ಬುಧವಾರ, ಮೇ 18, 2022
27 °C

ಸ್ತನದ ಸಾಮಾನ್ಯ ಕಾಯಿಲೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ಪ್ರಕಾರಗಳ ಸ್ತನ ಕಾಯಿಲೆಗಳು ತೀವ್ರ ಸ್ವರೂಪದ್ದಾಗಿರುತ್ತವೆ. ಆದರೆ ಹೆಚ್ಚಿನವು ತಾತ್ಕಾಲಿಕ ಬೇನೆಗಳಾಗಿರುತ್ತವೆಯಷ್ಟೆ.ಯಾವುವು ಸಾಮಾನ್ಯ ಮತ್ತು ಯಾವುವು ತೀವ್ರ ಕಾಯಿಲೆ ಎಂಬ ಬಗ್ಗೆ ಮಹಿಳೆಯರಲ್ಲಿ ಸ್ಪಷ್ಟವಾದ ತಿಳಿವಳಿಕೆ ಇರಬೇಕು.

 

ಒಬ್ಬ ಮಹಿಳೆ ಸ್ತನ ತೊಂದರೆಗೆ ಒಳಗಾದಾಗ, ಅದು ಹೆಚ್ಚಾಗಿ ಸ್ತನ ಬೆಳವಣಿಗೆಯ ಸಾಮಾನ್ಯ ಬದಲಾವಣೆಯಾಗಿರುತ್ತದೆ. ಈ ಬದಲಾವಣೆಗಳೆಂದರೆ ಸ್ತನಗಳು ಮೃದುವಾಗುವುದು/ ನೋವು, ತೊಟ್ಟುಗಳಲ್ಲಿ ಬದಲಾವಣೆ, ತುರಿಕೆ ..... ಇತ್ಯಾದಿ.ಈ ಎಲ್ಲಾ ಬದಲಾವಣೆಗಳು ಮಹಿಳೆಯರ ಹಾರ್ಮೋನುಗಳ ಏರುಪೇರುಗಳಿಂದ ಉಂಟಾಗಿರುತ್ತವೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಈ ತೊಂದರೆಗಳು ಅತಿರೇಕಕ್ಕೆ ಹೋಗಿ ಮಾರಣಾಂತಿಕ ಕಾಯಿಲೆಗಳಾಗಬಹುದು.ಸಾಮಾನ್ಯ ಬದಲಾವಣೆ ಹಾಗೂ ಸ್ವ-ಪರೀಕ್ಷೆ

ಸ್ತನಗಳಲ್ಲಿ ಸಾಮಾನ್ಯ ಬದಲಾವಣೆ ಯಾವುದೇ ಒಂದು ವಯೋಮಾನಕ್ಕೆ ಸೀಮಿತವಾದ ಪ್ರಕ್ರಿಯೆಯಲ್ಲ. ಜೀವನ ಪೂರ್ತಿ ನಡೆಯುವ ಕ್ರಿಯೆ. ಅವು ಯಾವ ಯಾವ ಹಂತದಲ್ಲಿ ಹೇಗೆ ಬದಲಾಗುತ್ತವೆ ಎಂಬ ಬಗ್ಗೆ ತಿಳಿವಳಿಕೆ ಇದ್ದಾಗ ಅನಗತ್ಯ ಆತಂಕ ಉಂಟಾಗದು. ಅತಿರೇಕದ ತೊಂದರೆಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಲೂ ನೆರವಾಗುವುದು. ಪ್ರತಿ ತಿಂಗಳು ನಿಮ್ಮ ಸ್ತನಗಳ ಸ್ವ-ಪರೀಕ್ಷೆಯನ್ನು ನಿರ್ವಹಿಸಿಕೊಳ್ಳುವುದರಿಂದ ಸಾಮಾನ್ಯ ಬದಲಾವಣೆಗಳನ್ನು ಗುರುತಿಸಬಹುದು. ಆದರೆ ಈ ಸ್ವ-ಪರೀಕ್ಷೆಯನ್ನು ಪ್ರತಿ ತಿಂಗಳು ಒಂದೇ ಸಮಯಕ್ಕೆ ಸೂಕ್ತ.ಸಾಮಾನ್ಯವಾಗಿ ಮುಟ್ಟಾಗಿ 3 ರಿಂದ 5 ದಿನಗಳ ಒಳಗೆ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಮುಟ್ಟು ನಿಂತ ನಂತರವೂ ಸರಿಯಾಗಿ ಅದೇ ಸಮಯಕ್ಕೆ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.* ಸ್ತನದ ಗಾತ್ರ, ಆಕಾರ ಅಥವಾ ಬಣ್ಣದಲ್ಲಿ ವ್ಯತ್ಯಾಸ.* ಸ್ತನದಲ್ಲಿ ಅಥವಾ ಅದರ ಸುತ್ತಮುತ್ತ ಗಡ್ಡೆ.* ತೋಳಿನಲ್ಲಿ ಉಂಟಾದ ಗಡ್ಡೆ ಮುಟ್ಟು ಕೊನೆಗೊಂಡ ನಂತರವೂ ಉಳಿದಾಗ.* ತೊಟ್ಟಿನ ಗಾತ್ರ ಹಾಗೂ ಬಣ್ಣದಲ್ಲಿ ವ್ಯತ್ಯಾಸ.* ತೊಟ್ಟು ಕೆಂಪಾದಾಗ, ತೊಟ್ಟಿನಿಂದ ದ್ರವ ಹರಿದಾಗ.* ಸ್ತನದ ಒಂದು ಭಾಗದಲ್ಲಿ ನಿಯಮಿತವಾಗಿ ನೋವು ಕಾಣಿಸಿಕೊಂಡಾಗ.ಚಿಕಿತ್ಸೆ

ನಿಮ್ಮ ವೈದ್ಯರು ತೊಂದರೆ ಏನೆಂಬುದನ್ನು ಪತ್ತೆ ಹಚ್ಚುವ ಅಗತ್ಯಕ್ಕೆ ಅನುಗುಣವಾಗಿ ಅಲ್ಟ್ರಾಸೊನೊಗ್ರಫಿ, ಮ್ಯಾಮೊಗ್ರಫಿ, ಸಿಟಿ ಸ್ಕ್ಯಾನ್ ಹಾಗೂ ಎಫ್‌ಎನ್‌ಎಸಿಯಂತಹ ಪರೀಕ್ಷೆಗಳನ್ನು ಮಾಡಬಹುದು. ರೋಗಿಗಳ ವಯೋಮಾನ, ಕಾಯಿಲೆಯ ಪ್ರಕಾರ ಹಾಗೂ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಇವುಗಳಲ್ಲಿ ಯಾವುದಾದರೂ ಅಥವಾ ಅನೇಕ ಚಿಕಿತ್ಸೆಗಳನ್ನು ಮಾಡಬಹುದು.

 

ಶೇ 80 ರಷ್ಟು ಸ್ತನ ಕಾಯಿಲೆಗಳು ಸಾಮಾನ್ಯವಾಗಿರುತ್ತವೆ. ಆದ್ದರಿಂದ ಇಂತಹ ಲಕ್ಷಣಗಳು ಕಂಡು ಬಂದಾಗ ಕಂಗಾಲಾಗುವ ಅಗತ್ಯವಿಲ್ಲ. ಇಂತಹ ಗಂಭೀರವಲ್ಲದ ಸ್ತನ ತೊಂದರೆಗಳಿಗೆ ಕಾರಣಗಳೆಂದರೆ:* ಸಾಮಾನ್ಯ ಸ್ತನ ಬದಲಾವಣೆ, ಸೋಂಕು ಅಥವಾ ಗಾಯ* ಕೆಲವು ಪ್ರಕಾರಗಳ ವೈದ್ಯಕೀಯ ಚಿಕಿತ್ಸೆಗಳೂ ಕೂಡ ಸ್ತನ ಬದಲಾವಣೆಗೆ ಕಾರಣವಾಗಬಹುದು. ಉದಾ: ಕುಟುಂಬ ಯೋಜನೆಯ ಮಾತ್ರೆಗಳು, ಹಾರ್ಮೋನು ಪುನರ್‌ಜೋಡಣಾ ಚಿಕಿತ್ಸೆ.

ಪ್ರಕಾರಗಳು* ಗಡ್ಡೆಗಳ (ಫಿಬ್ರಾಸಿಸ್ಟಿಕ್) ಬದಲಾವಣೆ - ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಉಂಟಾಗುವ ಹಾರ್ಮೋನು ಬದಲಾವಣೆಗಳಿಂದ ಇವು ಕಾಣಿಸಿಕೊಳ್ಳುತ್ತವೆ. 35 ರಿಂದ 50 ವರ್ಷಗಳ ನಡುವಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಇಂದು ಅಥವಾ ಎರಡೂ ಸ್ತನಗಳಲ್ಲಿ ಸಣ್ಣ, ದ್ರವ ತುಂಬಿದ ಕಿರುಚೀಲದಂತೆ ಕಾಣಿಸಿಕೊಳ್ಳಬಹುದು.ಈ ಗಡ್ಡೆಗಳು ಗಡುಸಾಗಿರಬಹುದು ಅಥವಾ ಮೃದುವಾಗಿರಬಹುದು ಗಡ್ಡೆಯ ಗಾತ್ರ ಸಾಮಾನ್ಯವಾಗಿ ಮುಟ್ಟಾಗುವ ಒಂದು ವಾರ ಮುಂಚೆ ಹಿಗ್ಗುತ್ತವೆ ಹಾಗೂ ಒಂದು ವಾರದ ನಂತರ ಇಳಿಯುತ್ತವೆ.* ಪೊಳ್ಳುಕೋಶ ಸಾಮಾನ್ಯವಾದ ದ್ರವ ತುಂಬಿದ ಸಣ್ಣ ಸಣ್ಣ ಬೊಕ್ಕೆಗಳಾಗಿದ್ದು ಎರಡೂ ಸ್ತನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಸೂಜಿಯಿಂದ ತೆಗೆಯಬಹುದು. ಆ ಬೊಕ್ಕೆಗಳಿಂದ ದ್ರವವನ್ನು ಹೊರಗೆ ತೆಗೆದ ನಂತರ ಬೊಕ್ಕೆಗಳು ಮಾಯವಾಗುತ್ತವೆ.* ಫೈಬ್ರೊ ಅಡಿನಾಮಸ್: ಇವು ಗಟ್ಟಿಯಾದ, ದುಂಡನೆಯ ಗಡ್ಡೆಗಳಾಗಿದ್ದು, ಸ್ತನದಲ್ಲಿ ಸ್ಥಳಾಂತರ ಹೊಂದುತ್ತಿರುತ್ತವೆ. ಇವುಗಳಲ್ಲಿ ನೋವು ಇರುವುದಿಲ್ಲ.* ಇಂಟ್ರಾಡಕ್ಟಲ್ ಪಪಿಲ್ಲೊಮಸ್: ಇದು ನರೂಲಿಯಾಕಾರದ ಒಂದು ಸಣ್ಣ ಗುಳ್ಳೆ. ಸ್ತನದ ತೊಟ್ಟಿನ ಹತ್ತಿರ ಬೆಳೆಯುತ್ತದೆ. ಸಾಮಾನ್ಯವಾಗಿ * 0 ರಿಂದ 50ನೇ ವಯೋಮಾನದಲ್ಲಿ ಕಂಡುಬರುವ ಈ ಸಮಸ್ಯೆಯಿಂದ ತೊಟ್ಟಿನಲ್ಲಿ ರಕ್ತ ಸೂಸಬಹುದು.* ಟ್ರೌಮ್ಯಾಟಿಕ್ ಫಾಟ್ ನೆಕ್ರೊಸಿಸ್: ಸಾಮಾನ್ಯವಾಗಿ ಸ್ತನದ ಶಸ್ತ್ರಚಿಕಿತ್ಸೆ ಅಥವಾ ಸ್ತನಕ್ಕೆ ಗಾಯವಾದಾಗ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಇದರಿಂದ ಗಟ್ಟಿಯಾದ ಗಡ್ಡೆ ಸ್ತನದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ತೊಟ್ಟಿನಿಂದ ದ್ರವ ಹೊರಗೆ ಬಂದು ನೋವು ಕಾಣಿಸಿಕೊಳ್ಳಬಹುದು.(ಲೇಖಕರ ಮೊಬೈಲ್: 98* 50903* 2)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.