ಶುಕ್ರವಾರ, ಜುಲೈ 30, 2021
21 °C

ಸ್ತ್ರೀಶಕ್ತಿ ಸಂಘಗಳಿಗೆ ತ್ಯಾಜ್ಯ ಸಂಗ್ರಹ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ತ್ರೀಶಕ್ತಿ ಸಂಘಗಳಿಗೆ ತ್ಯಾಜ್ಯ ಸಂಗ್ರಹ ಹೊಣೆ

ಶಿಡ್ಲಘಟ್ಟ: ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವರ್ಗೀಕರಿಸುವುದರಿಂದ ಉತ್ತಮ ಗೊಬ್ಬರವನ್ನು ತಯಾರಿಸಬಹುದಾಗಿದೆ. ತ್ಯಾಜ್ಯವಸ್ತುಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸಲು ಪಟ್ಟಣದ 9 ಸ್ತ್ರೀಶಕ್ತಿ ಗುಂಪು ನಿರತವಾಗಿವೆ ಎಂದು ಪುರಸಭೆ ಅಧ್ಯಕ್ಷೆ ಮಂಜುಳಾ ಸುಬ್ರಮಣಿ ತಿಳಿಸಿದರು.



ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಸ್ತ್ರೀಶಕ್ತಿ ಗುಂಪುಗಳಿಗೆ ಕಸ ಸಂಗ್ರಹಿಸುವ ತಳ್ಳುಗಾಡಿಗಳನ್ನು ಪುರಸಭೆ ವತಿಯಿಂದ ವಿತರಿಸಿ ಅವರು ಮಾತನಾಡಿದರು. ಮನೆಗಳಲ್ಲಿ ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಬೇಕು. ಪ್ರತಿ ಮನೆ, ಹೋಟೆಲ್, ಕಲ್ಯಾಣ ಮಂಟಪ, ಅಂಗಡಿ, ಸಿನಿಮಾ ಮಂದಿರ ಎಲ್ಲಾ ಕಡೆ ಕಸವನ್ನು ಸ್ತ್ರೀಶಕ್ತಿ ಗುಂಪುಗಳು ಹೋಗಿ ಸಂಗ್ರಹಿಸುತ್ತಾರೆ.

 

ಸರ್ಕಾರ ನಿಗದಿಪಡಿಸಿರುವಷ್ಟು ಹಣವನ್ನು ಆಯಾ ಮನೆ, ಹೋಟೆಲ್ ಮೊದಲಾದವರು ಸ್ತ್ರೀಶಕ್ತಿ ಗುಂಪುಗಳಿಗೆ ನೀಡಬೇಕು. ಒಂದೆಡೆ ಕ್ರೂಢೀಕರಿಸಿದ ಕಸವನ್ನು ಪುರಸಭೆಯವರು ಟ್ರಾಕ್ಟರ್ ಮೂಲಕ ಸಂಸ್ಕರಣಾ ಕ್ಷೇತ್ರಕ್ಕೆ ಸಾಗಿಸುತ್ತಾರೆ ಎಂದು ತಿಳಿಸಿದರು.



ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಕ್ತಿಯಾರ್‌ಪಾಷ, ಸದಸ್ಯರಾದ ಅಪ್ಸರ್‌ಪಾಷ, ಡಿ.ಎಂ.ಜಗದೀಶ್ವರ್, ಸಮೀವುಲ್ಲಾ, ಆದಿಲ್‌ಪಾಷ, ನಾರಾಯಣಸ್ವಾಮಿ, ಸಲಾಂ, ಷಫೀವುಲ್ಲಾ, ಸಯ್ಯದ್, ಪಾರ್ವತಮ್ಮ, ವಿನಾಯಕ, ಪರಿಸರ ಎಂಜಿನಿಯರ್ ರವಿಕುಮಾರ್, ಮುರಳಿ ಮತ್ತಿತರರು ಹಾಜರಿದ್ದರು.



ಗೋಸಂರಕ್ಷಣೆ ಯಾಗ

ಕೃಷಿ, ಗೋಸಂರಕ್ಷಣೆ  ಹಾಗೂ ಶಾಂತಿಗಾಗಿ ಶತರುದ್ರ ಜಪಯಜ್ಞ ಹಾಗೂ ನವಚಂಡೀಯಾಗವನ್ನು ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ  ಹಮ್ಮಿಕೊಂಡಿರುವುದಾಗಿ ಸಾಯಿಲೋಕ ಸೇವಾ ಟ್ರಸ್ಟ್ ಸಂಸ್ಥಾಪಕ ಮುರಳಿ ತಿಳಿಸಿದರು.



ಪತ್ರಿಕಾಗೋಷ್ಠಿಯಲ್ಲಿ ಈಚೆಗೆ ಮಾತನಾಡಿದ ಅವರು, ಕೃಷಿಯ ಅಗತ್ಯವಾದ ಗೋ ಸಂರಕ್ಷಣೆಗಾಗಿ ಈ ಸಂವತ್ಸರದಲ್ಲಿ ಪಶು ಸಂರಕ್ಷಕನಾದ ಕೃಷ್ಣನು ಪಶುಪಾಲಕನಾಗಿರುವುದರಿಂದ ನವಚಂಡೀ ಹೋಮವನ್ನು ಮೇ 6ರಿಂದ 8ರವರೆಗೆ ನಡೆಸಲಾಗುವುದು ಎಂದರು.



ಪತ್ರಿಕಾಗೋಷ್ಠಿಯಲ್ಲಿ ಯಾಗಸಮಿತಿ ಪ್ರಧಾನ ಆಚಾರ್ಯ ವಿ.ಅಚ್ಯುತಮೂರ್ತಿ, ಸದಸ್ಯರಾದ ಚಿಂತಾಮಣಿ ಮೋಹನ್, ಕೊತ್ತನೂರು ಮುನಿರೆಡ್ಡಿ, ನಾಯನಹಳ್ಳಿ ನಾಗೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.