ಶುಕ್ರವಾರ, ಮೇ 14, 2021
35 °C

ಸ್ತ್ರೀ ಆರ್ಥಿಕ ಸಬಲೀಕರಣಕ್ಕೆ ಕೋಳಿ ತಂತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ದಿಸೆಯಲ್ಲಿ ಪ್ರತಿಯೊಬ್ಬರಿಗೂ ಎರಡು ನಾಟಿ ಕೋಳಿಗಳನ್ನು ನೀಡಿ ಉತ್ತೇಜಿಸುವ ವಿನೂತನ ಯೋಜನೆಯೊಂದನ್ನು ಸ್ಥಳೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಒಕ್ಕೂಟ ಮಾಡುತ್ತಿದೆ.`ತಾಲ್ಲೂಕಿನ ತೂಬಗೆರೆ ಹೋಬಳಿಯ ಆಯ್ದ ಗ್ರಾಮಗಳಲ್ಲಿ ಮಹಿಳೆಯರಿಗೆ ನಾಟಿ ಕೋಳಿಗಳನ್ನು ಉಚಿತವಾಗಿ ನೀಡಿ ಅವನ್ನು ಬೆಳೆಸಿ ಮತ್ತಷ್ಟು ಮರಿಗಳನ್ನು ಮಾಡಿ ನಂತರ ಮಾರಿದರೆ ಬರುವ ಹಣದಲ್ಲಿ ಕುರಿ, ಮೇಕೆ ಖರೀದಿಸಿ ಲಾಭ ಗಳಿಸುವುದು ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರು ಯಾವುದೇ ಸಾಲ ಸೌಲಭ್ಯಗಳ ಸಹಕಾರವಿಲ್ಲದೆ ಸಂಪೂರ್ಣ ಆರ್ಥಿಕ ಸ್ವಾವಲಂಬಿಗಳಾಗಲು ಸಹಕಾರಿ~ ಎಂದು ಸಂಸ್ಥೆಯ ಕಾರ್ಯದರ್ಶಿ ಚಿತ್ರಾವತಿ ಹೇಳುತ್ತಾರೆ.`ಸ್ತ್ರೀ ಶಕ್ತಿ ಸಂಘಗಳು ಒಕ್ಕೂಟದ ಸದಸ್ಯರು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಸಾಲ ಪಡೆದ ಸದಸ್ಯರು  ಆ ಹಣವನ್ನೇ ಮತ್ತೆ ಖಾಸಗಿಯಾಗಿ ಬಡ್ಡಿ ನೀಡುವ ಎಷ್ಟೋ ನಿದರ್ಶನ ಕಂಡಿದ್ದೇವೆ. ಆದ್ದರಿಂದ ಸಂಘಗಳು ನಗದು ಸಾಲದ ಬದಲಿಗೆ ಕೋಳಿಗಳನ್ನು ನೀಡಿ ಅವುಗಳಿಂದ ಬರುವ ಲಾಭವನ್ನು ಸರಿಯಾದ ಮಾರ್ಗದಲ್ಲಿ ದ್ವಿಗುಣಗೊಳಿಸಲಿ ಎಂಬುದೇ ನಮ್ಮ ಕಾಳಜಿ~ ಎಂದು ಅವರು ವಿವರಿಸುತ್ತಾರೆ.`ಕೃಷಿ ಕಾರ್ಮಿಕರು ಮನೆಯಲ್ಲಿ ಕೋಳಿ ಸಾಕಲು ಹೆಚ್ಚಿನ ಕಷ್ಟಪಡಬೇಕಿಲ್ಲ. ನಾವು ನೀಡುವ ಕೋಳಿಗಳು ಅವರ ಕೃಷಿ ಮತ್ತು ಒಟ್ಟು ಆದಾಯಕ್ಕೆ ಸಹಕಾರಿಯಾಗಲಿವೆ. ಇದರಿಂದ ಬರುವ ಹಣದಲ್ಲಿ ಕುರಿ ಮತ್ತು ಮೇಕೆ ಖರೀದಿಸಬೇಕು ಎನ್ನುವ ಗಟ್ಟಿ ನಿಯಮ ರೂಪಿಸಲಾಗಿದೆ.ನಮ್ಮ ಸಂಸ್ಥೆಯ ಗ್ರಾಮ ಸಂಘಟಕರು, ಮಹಿಳಾ ಒಕ್ಕೂಟದವರು ಮೇಲುಸ್ತುವಾರಿ ಮಾಡುತ್ತಾರೆ. ಒಂದೊಮ್ಮೆ ಯಾರಾದರೂ ಕೋಳಿ ಸಂತಾನಾಭಿವೃದ್ಧಿ ಮಾಡದೆ ಮಾರಿದರೆ ಅಂತಹವರಿಗೆ ಸಂಸ್ಥೆ ವತಿಯಿಂದ ಇತರೆ ಯಾವುದೇ ಸೌಲಭ್ಯ ನೀಡುವುದಿಲ್ಲ. ಎರೆಹುಳು, ಹಸು ಸಾಕಣೆ ಅಥವಾ ತೋಟಗಾರಿಕೆ ಬೀಜ ವಿತರಣೆಯಂತಹ ಸೌಲಭ್ಯ ಕಡಿತಗೊಳಿಸಲಾಗುವುದು~ ಎನ್ನುತ್ತಾರೆ ಚಿತ್ರಾವತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.