ಸ್ನೂಕರ್: ಪಂಕಜ್ ಅಡ್ವಾಣಿಗೆ ಸೋಲು

7

ಸ್ನೂಕರ್: ಪಂಕಜ್ ಅಡ್ವಾಣಿಗೆ ಸೋಲು

Published:
Updated:

ನವದೆಹಲಿ (ಪಿಟಿಐ):  ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಪಂಕಜ್ ಅಡ್ವಾಣಿ ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದರು. ಸಿರಿಯಾದ ಡಮಾಸ್ಕಸ್‌ನಲ್ಲಿ ಗುರುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಪಂಕಜ್ ಅಡ್ವಾಣಿ 7-10 ಫ್ರೇಮ್‌ಗಳ ಅಂತರದಿಂದ ಥಾಯ್ಲೆಂಡ್‌ನ ಡೆಚಾಟ್ ಪೂಮಜಿಂಗ್ ವಿರುದ್ಧ ಪರಾಭವ ಗೊಂಡರು.ಪಂದ್ಯದ ಒಂದು ಹಂತದಲ್ಲಿ ಡೆಚಾಟ್ ಅವರು 5-4ರಲ್ಲಿ ಮುನ್ನಡೆ ಸಾಧಿಸಿದ್ದರು. ಅದೇ ಪ್ರದರ್ಶನವನ್ನು ಕೊನೆಯವರೆಗೆ ಕಾಯ್ದುಕೊಂಡು ಸಾಗುವಲ್ಲಿಯೂ ಯಶಸ್ವಿಯಾದರು. ಏಳು ಬಾರಿ ವಿಶ್ವ ಚಾಂಪಿಯನ್ ಆಗಿರುವ ಅಡ್ವಾಣಿ 9 ಮತ್ತು 10ನೇ ಫ್ರೇಮ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಕ್ರಮವಾಗಿ 57-56, 61-15 ಪಾಯಿಂಟ್‌ಗಳಿಂದ ಗೆಲುವನ್ನು ತಮ್ಮದಾಗಿಸಿಕೊಂಡರು. ಇದರಿಂದ 5-5ರ ಸಮಬಲ ಸಾಧಿಸಿದರಾದರೂ ಮುಂದಿನ ಫ್ರೇಮ್‌ಗಳಲ್ಲಿ ಡೆಚ್ಚಾಟ್ ಜಾಣ್ಮೆಯ ಪ್ರದರ್ಶನ ತೋರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry