ಗುರುವಾರ , ಮೇ 13, 2021
35 °C

ಸ್ನೇಹ ಬುಕ್ 1000 ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ನೇಹ ಬುಕ್ ಹೌಸ್: ಭಾನುವಾರ ಸ್ನೇಹ ಬುಕ್ ಹೌಸ್ ಪ್ರಾರಂಭವಾದ 1000 ದಿನದ ಸಂಭ್ರಮ. ಪ್ರೊ.ಜಿ. ವೆಂಕಟಸುಬ್ಬಯ್ಯ ಅವರಿಂದ ಅರಳುಮಲ್ಲಿಗೆ ಪಾರ್ಥಸಾರಥಿ ಅವರ `ಶ್ರೀ ವ್ಯಾಸರಾಜ ಸಂಪುಟ~, ಡಾ. ವಾದಿರಾಜ ಪಂಚಮುಖಿ ಅವರಿಂದ `ಶ್ರೀ ವಾದಿರಾಜ ಸಂಪುಟ~ (ಮರು ಮುದ್ರಣ) ಕೃತಿ ಲೋಕಾರ್ಪಣೆ.

 

ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಂದ ಡಾ. ಲಕ್ಷ್ಮಿಕಾಂತ ಮೊಹರೀರ ಅವರ ಹಾಗೂ ಬುಕ್ ಹೌಸ್‌ನ 100ನೇ ಪುಸ್ತಕವಾಗಿ `ಮಹತ್ತನ್ನು ಚಿಂತಿಸು- ಬೃಹತ್ತನ್ನು ಸಾಧಿಸು~ (ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಬದುಕಿನ ಯಶೋಗಾಥೆ), ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರಿಂದ `ಅರಳುಮಲ್ಲಿಗೆಯವರ ಅಮೃತ ನುಡಿಗಳು~ ಕೃತಿಗಳ ಲೋಕಾರ್ಪಣೆ.ಪುಸ್ತಕೋದ್ಯಮಿಗಳಾದ ಸಪ್ನಾ ಬುಕ್ ಹೌಸ್‌ನ ನಿತಿನ್ ಷಾ, ವೇದಾಂತ ಬುಕ್ ಹೌಸ್‌ನ ಗೋಪಾಲ್, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ, ಸುಂದರ ಪ್ರಕಾಶನದ ಗೌರಿಸುಂದರ್, ಟಿ.ಎನ್. ಕೃಷ್ಣಯ್ಯ ಶೆಟ್ಟಿ ಅಂಡ್ ಸನ್‌ನ ಸುರೇಶ್ ಅವರಿಗೆ ಸನ್ಮಾನ.ಉದ್ಘಾಟನೆ: ಎಂ.ಎನ್. ವೆಂಕಟಾಚಲಯ್ಯ. ಅತಿಥಿಗಳು: ರವಿಸುಬ್ರಹ್ಮಣ್ಯ, ವಿ.ಲಕ್ಷ್ಮಿನಾರಾಯಣ, ಗೋವಿಂದ ಕುಲಕರ್ಣಿ, ಸಿ.ವಿ.ಎಲ್.ಶಾಸ್ತ್ರಿ, ರಾಜಾ ರಾಜಗೋಪಾಲಚಾರ್ಯ, ಸುಯಮೀಂದ್ರಾಚಾರ್ಯ. ಸಾನ್ನಿಧ್ಯ: ಇಸ್ಕಾನ್‌ನ ತಿರುಸ್ವಾಮಿಗಳು. ಅಧ್ಯಕ್ಷತೆ: ಭೀಮನಕಟ್ಟೆ ಮಠಾಧೀಶ ಶ್ರೀ ರಘುಮಾನ್ಯತೀರ್ಥ ಶ್ರೀಗಳು.ಬೆಳೆದ ಸ್ನೇಹ: ಸ್ನೇಹ ಬುಕ್ ಹೌಸ್ 2008ರಲ್ಲಿ ಆರಂಭವಾಯಿತು. ಅಂದು ನಟಿ ತಾರಾ ಅವರು ಗಣೇಶ ಕಾಸರಗೋಡು ಅವರ `ಮೌನ ಮಾತಾದಾಗ~ ಕೃತಿ ಲೋಕಾರ್ಪಣೆ ಮಾಡಿದ್ದರು. ಪತ್ರಕರ್ತೆ ಸಂಧ್ಯಾ ಪೈ ಅವರ 15 ಕೃತಿಗಳನ್ನು ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಿದ ದಾಖಲೆ ಸ್ನೇಹ ಬುಕ್ ಹೌಸ್‌ಗೆ ಸಂದಿದೆ.ಜನರಲ್ಲಿ ಸಾಹಿತ್ಯದ ಅಭಿರುಚಿಯೊಂದಿಗೆ ಓದುವ ಹವ್ಯಾಸ ಬೆಳೆಸುವುದು, ಮೌಲಿಕವಾದ ಕೃತಿಗಳ ಪ್ರಕಟಣೆ, ಪುಸ್ತಕ ಪ್ರದರ್ಶನ, ಮಾರಾಟ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ರಾಜ್ಯದಾದ್ಯಂತ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಆಶಯ ಹೊಂದಿದೆ. ಮೊದಲ ಬಾರಿಗೆ ಶ್ರೀನಗರ-ಗಿರಿನಗರ 2010 ಪುಸ್ತಕೋತ್ಸವ ಆಯೋಜಿಸಿದ ಹಿರಿಮೆ ಇದರ್ದ್ದದು.ವ್ಯಾಕರಣ, ಪದಕೋಶ, ಕಥಾಮಾಲೆ, ಕ್ವಿಜ್ ಪುಸ್ತಕ, ಗಣಿತ, ಕಾಮಿಕ್, ದೇಶ ಪ್ರೇಮ, ಖ್ಯಾತ ಸಾಹಿತಿಗಳ ಕೃತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳು, ಸೀಡಿ ಹೀಗೆ ಹತ್ತು ಸಾವಿರಕ್ಕೂ ಹೆಚ್ಚು ಹೆಸರಿನ ಉತ್ಪನ್ನಗಳು ಪುಸ್ತಕ ಮಳಿಗೆಯಲ್ಲಿ ಲಭ್ಯ. ಸಂಚಾರಿ ವಾಹನಗಳ ಮೂಲಕ ತನ್ನ ಪ್ರಕಾಶನದ ಪುಸ್ತಕಗಳನ್ನು ಮಾರುವ ವ್ಯವಸ್ಥೆಯನ್ನೂ ಮಾಡಿದೆ.ಸ್ಥಳ: ಗಣಪತಿ ಸಚ್ಚಿದಾನಂದ ಆಶ್ರಮ, ಕಾರ್ಯಸಿದ್ಧಿ ಮಂಟಪದ ಸಭಾಭವನ, ಗಿರಿನಗರ. ಸಂಜೆ 6.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.