ಮಂಗಳವಾರ, ಮಾರ್ಚ್ 28, 2023
29 °C

ಸ್ಪಾಟ್ ಫಿಕ್ಸಿಂಗ್: ಐಸಿಸಿಯಿಂದ ಸ್ಪಷ್ಟನೆ ಕೇಳಿದ ಪಿಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತಿರುವ ಆಟಗಾರರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡುವುದಕ್ಕೆ ಹಾದಿ ಸುಗಮ ಮಾಡಿ ಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಯತ್ನ ನಡೆಸಿದೆ. ಇದೇ ಕಾರಣಕ್ಕಾಗಿ ಪಿಸಿಬಿಯು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ಪತ್ರ ಬರೆದು ‘ಆರೋಪಿ ಕ್ರಿಕೆಟಿಗರಿಗೆ ಅವಕಾಶ ನೀಡಬೇಕೆ-ಬೇಡವೆ?’ ಎನ್ನುವ ವಿಷಯವಾಗಿ ಸ್ಪಷ್ಟ ಉತ್ತರ ಕೇಳಿದೆ.



ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಕಮ್ರನ್ ಅಕ್ಮಲ್, ಆಲ್ ರೌಂಡರ್ ಶೋಯಬ್ ಮಲಿಕ್ ಮತ್ತು ಲೆಗ್ ಸ್ಪಿನ್ನರ್ ದನೀಶ್ ಕನೇ ರಿಯಾ ಅವರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಆರೋಪಿಗಳಾಗಿದ್ದಾರೆ. ಅವರ ಮೇಲಿನ ಆರೋಪವನ್ನು ಇನ್ನೂ ತೆರವುಗೊಂಡಿಲ್ಲ. ಆದ್ದರಿಂದ ಪಿಸಿಬಿ ಚಿಂತೆಗೀಡಾಗಿದೆ.



ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದ ಮೇಲೆ ಈಗಾಗಲೇ ಅಮಾನತುಗೊಂಡಿರುವ ಟೆಸ್ಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್, ವೇಗದ ಬೌಲರ್ ಮೊಹ ಮ್ಮದ್ ಆಸಿಫ್ ಹಾಗೂ ಮೊಹ ಮ್ಮದ್ ಅಮೇರ್ ಬಗ್ಗೆ ಪಿಸಿಬಿ ಯಾವುದೇ ಪ್ರಶ್ನೆ ಕೇಳಿಲ್ಲ. ಕಳೆದ ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಇವರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದು ಮಾಧ್ಯಮ ವರದಿಯಿಂದ ಪತ್ತೆ ಆಗಿತ್ತು. ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ  ಸಂಬಂಧಿಸಿದಂತೆ ಲಂಡನ್ ಪೊಲೀಸರು ಚುರುಕಾಗಿ ಇನ್ನೂ ತನಿಖೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.