ಶುಕ್ರವಾರ, ಮಾರ್ಚ್ 5, 2021
29 °C

ಸ್ಮರಣೀಯ ಇನಿಂಗ್ಸ್‌: ಮೆಕ್ಲಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಮರಣೀಯ ಇನಿಂಗ್ಸ್‌: ಮೆಕ್ಲಮ್‌

ವೆಲಿಂಗ್ಟನ್‌ (ಪಿಟಿಐ): ‘ಆರಂಭದಲ್ಲಿ ಕುಸಿತ ಕಂಡು ಸಂಕಷ್ಟಕ್ಕೆ ಸಿಲುಕಿದ್ದ ನಮ್ಮ ತಂಡಕ್ಕೆ ಆಸರೆಯಾದ ಖುಷಿಯಿದೆ. ಆದ್ದರಿಂದ ಇದು ನನ್ನ ಕ್ರಿಕೆಟ್‌ ಜೀವನದ ಸ್ಮರಣೀಯ ಇನಿಂಗ್ಸ್‌’ ಎಂದು ನ್ಯೂಜಿಲೆಂಡ್‌ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಹರ್ಷ ವ್ಯಕ್ತಪಡಿಸಿದರು.‘ಬ್ಯಾಟ್‌ ಮಾಡಲು ಬಂದಾಗ ಐದು ವಿಕೆಟ್‌ ಪತನವಾಗಿದ್ದವು. ಆದ್ದರಿಂದ ಒತ್ತಡದಲ್ಲಿಯೇ ಕ್ರೀಸ್‌ಗೆ ಬಂದೆ. ಆ ಒತ್ತಡದಲ್ಲಿಯೇ ಅತ್ಯು ತ್ತಮ ಜೊತೆಯಾಟವಾಡಿದೆ. ಸೋಮವಾರ ರಾತ್ರಿ  ಸ್ಟೀಫನ್‌ ಫ್ಲೆಮಿಂಗ್‌ ಜೊತೆ ಸಾಕಷ್ಟು ಹೊತ್ತು ಚರ್ಚೆ ನಡೆಸಿದ್ದೆ. ಆದ್ದರಿಂದ ಉತ್ತಮ ಇನಿಂಗ್ಸ್‌ ಕಟ್ಟಲು ಸಾಧ್ಯ ವಾಯಿತು’ ಎಂದು ಮೆಕ್ಲಮ್‌ ಹೇಳಿದರು.ಅವರು ಈ ಪಂದ್ಯದಲ್ಲಿ ಅಮೋಘ ತ್ರಿಶತಕ ಗಳಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು.84 ಟೆಸ್ಟ್ ಆಡಿರುವ ಮೆಕ್ಲಮ್‌  ಒಟ್ಟು 5219 ರನ್‌ ಗಳಿಸಿದ್ದಾರೆ. 2004ರಲ್ಲಿ ಹ್ಯಾಮಿ ಲ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಪದಾರ್ಪಣೆ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.