ಶನಿವಾರ, ಮೇ 21, 2022
23 °C

ಸ್ವಸ್ಥ ಬದುಕು: ಕ್ಷಣ-ಕ್ಷಣವೂ ಆಳವಾಗಿ ಬದುಕಿ

ಭರತ್ ಮತ್ತು ಶಾಲನ್ ಸವೂರ್ Updated:

ಅಕ್ಷರ ಗಾತ್ರ : | |

ಒಂದು ವಿಚಿತ್ರ ವಿದ್ಯಮಾನ ಘಟಿಸುತ್ತಿದೆ. ಬಹಳಷ್ಟು ಪುರುಷರು, ಮಹಿಳೆಯರು ಮನಸ್ಸಿಗೆ ಶಾಂತಿ, ಸಮಾಧಾನ ಇಲ್ಲದೇ ತೊಳಲಾಡುತ್ತಿದ್ದಾರೆ. ಒತ್ತಡ ಅವರ ಬದುಕಿನ ವಿಧಾನವಾಗುತ್ತಿದೆ. ಅದರಿಂದಾಗಿ ಅವರ ಕೂದಲು ಉದುರುತ್ತಿದೆ. ತಲೆ ಬೋಳಾಗುತ್ತಿದೆ.ತಲೆಯ ಮೇಲೆ ಸಣ್ಣ ಗಾಯಗಳೂ ಆಗುತ್ತಿದೆ. ಚರ್ಮ ಹಾಗೂ ಕೂದಲು ತಜ್ಞರು ಅವರಿಗೆಲ್ಲ ಒತ್ತಡ ಕಡಿಮೆ ಮಾಡಲು ಮಾತ್ರೆಗಳನ್ನು ನೀಡುತ್ತಿದ್ದಾರೆ. ಅದನ್ನು ತೆಗೆದುಕೊಳ್ಳುವವರೆಲ್ಲ ಹೇಳುತ್ತಾರೆ, `ನಾನು ಇಷ್ಟೊಂದು ಸಮಾಧಾನದಿಂದ ಇರುವುದು ಆಶ್ಚರ್ಯ ತರುತ್ತಿದೆ. ನಾನು ನಾನೇ ಎಂದು ಅನಿಸುತ್ತಿಲ್ಲ...!~ಎಲ್ಲ ಸಮಯದಲ್ಲೂ ಚಟುವಟಿಕೆಯಿಂದ ಇರುವುದು, ಯಾವುದೋ ಕೆಲಸ ಹಚ್ಚಿಕೊಳ್ಳುವುದು ಮನಸ್ಸು ಹಾಗೂ ದೇಹವನ್ನು ಒತ್ತಡದಲ್ಲಿ ನೂಕುತ್ತದೆ. ಅತಿಯಾದ ಸಡಗರ, ಉದ್ವೇಗವನ್ನು ನಿಮಗೆ ಬಿಡಲು ಸಾಧ್ಯವಾಗದ ಕಾರಣ ನಿಮ್ಮ ದೇಹ ಕೂದಲನ್ನು ಉದುರಿಸತೊಡಗುತ್ತದೆ.ಅದು ತನ್ನ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತದೆ. ನೀವು ಕೂದಲು ಕಸಿಯಂತಹ ವಿಧಾನಗಳ ಮೊರೆ ಹೋಗಬಹುದು. ಆದರೆ, ಒಳಗಿನ ಒತ್ತಡಕ್ಕೆ ಏನು ಮಾಡಬೇಕು? ನಿಮ್ಮ ನಿಜವಾದ ಸ್ವಭಾವ ಪ್ರದರ್ಶಿಸದ ಕಾರಣ ನಿಮ್ಮಳಗೆ ಕಾಲಿಡುತ್ತಿರುವ ಥೈರಾಯಿಡ್ ಸಮಸ್ಯೆಗೆ ಏನು ಮಾಡಬೇಕು? ಮೇಲೆಕೆಳಗಾಗುವ ರಕ್ತದೊತ್ತಡ, ಮೂತ್ರಪಿಂಡದಲ್ಲಿ ಬೆಳೆಯುವ ಕಲ್ಲಿಗೆ ಏನು ಮಾಡಬೇಕು?ಆ ಒತ್ತಡ ನಿವಾರಿಸಿಕೊಳ್ಳಿ. ಅದಕ್ಕಾಗಿ ಸುಲಭವಾದ ಸುಂದರವಾದ ವಿಧಾನವೊಂದನ್ನು ನಾನು ಹೇಳಿಕೊಡುತ್ತೇನೆ. ನೆಟ್ಟಗೆ ಆರಾಮವಾಗಿ ನಿಂತುಕೊಳ್ಳಿ. ನೆಲದಿಂದ ಕಾಲು ಮೇಲಕ್ಕೆ ಎತ್ತದೇ ನಿಮ್ಮ ಮೊಣಕಾಲನ್ನು ಸ್ವಲ್ಪವೇ ಬಗ್ಗಿಸಿ ದೇಹ ಪುಟಿದೇಳುವಂತೆ ಮಾಡಿ.

 

ಆದರೆ, ನೀವು ಈ ವ್ಯಾಯಾಮ ಮಾಡುವಾಗ ಕುಕ್ಕರಿಸಬಾರದು. ದೇಹವನ್ನು ಚೆಂಡಿನಂತೆ ಪುಟಿದೇಳಿಸುತ್ತಲೇ ಎರಡು ತೋಳುಗಳನ್ನು ಪೆಂಡುಲಮ್‌ನಂತೆ ಅತ್ತಿಂದ ಇತ್ತ ಬೀಸಿ. ಈ ವ್ಯಾಯಾಮವನ್ನು ಯಾವುದೇ ಅವಸರವಿಲ್ಲದೇ ನಿಧಾನವಾಗಿ ಮಾಡಿ. ಹೀಗೆ ಪುಟಿದೇಳುವಾಗ, ಕೈತೋಳು ಬೀಸುವಾಗ `ರಿಲಾಕ್ಸ್, ರಿಲಾಕ್ಸ್~ ಎಂದು ಲಯಬದ್ಧವಾಗಿ ಹೇಳಿಕೊಳುತ್ತಾ ಇರಿ. ಐದು ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ.ಈ ಐದು ನಿಮಿಷಗಳ ಕಾಲ ನೀವು  `ರಿಲಾಕ್ಸ್~ ಅಥವಾ ವಿಶ್ರಾಂತಿ ಎಂಬ ಪದದ ಹೊರತಾಗಿ ಬೇರೇನೂ ಯೋಚಿಸುವುದಿಲ್ಲ. ಎಲ್ಲವನ್ನೂ ಮನಸ್ಸಿನಿಂದ ಕಿತ್ತೊಗೆಯಿರಿ. ನೀವು ಮಗುವಿನಂತೆ ಮುಗ್ಧರೂ, ಮುಕ್ತರು ಆಗುತ್ತೀರಿ. ನಿಮ್ಮ ಈ ದೇಹ ಈಗ ಬಾಲ್ಯಕ್ಕೆ ಮರಳುತ್ತದೆ. ದಿನವೂ ಈ ವ್ಯಾಯಾಮ ಮಾಡಿದಾಗ ನಿಮ್ಮ ವಿಚಾರಗಳು ಬದಲಾಗುತ್ತವೆ. ಎಲ್ಲವನ್ನೂ ನೀವು ಶಾಂತ ಮನೋಭಾವದಿಂದ ಅವಲೋಕಿಸುತ್ತಿರಿ.ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಿಮ್ಮ ಒತ್ತಡ ನಿಮ್ಮ ಯೋಚನಾ ಲಹರಿಯ ಪ್ರತಿಬಿಂಬವಾಗಿರುತ್ತದೆ. ಇನ್ನೂ ಚೆನ್ನಾಗಿ ಯೋಚಿಸಬಹುದು. ನೇತ್ಯಾತ್ಮಕವಾಗಿ ಯೋಚಿಸುವ ಬದಲು, ಸಕಾರಾತ್ಮಕವಾಗಿ ಯೋಚಿಸಬಹುದು. ಟೀಕಿಸುವ ಬದಲು, ಹೊಗಳಬಹುದು. ಜುಗುಪ್ಸೆ ವ್ಯಕ್ತಪಡಿಸುವ ಬದಲು ಪ್ರಶಂಸಿಸಬಹುದು. ಗೊಣಗುಟ್ಟುವ ಬದಲು ಧನ್ಯವಾದ ಹೇಳಬಹುದು.ದ್ವೇಷಿಸುವ ಬದಲು ಸ್ವೀಕರಿಸಬಹುದು. ನೀವು ಆನಂದದಿಂದ, ಸಂತಸದಿಂದ, ಕರುಣೆಯಿಂದ ಯೋಚಿಸುತ್ತಿದ್ದಲ್ಲಿ ಒತ್ತಡದ ಬದಲು ವಿಶ್ರಾಂತ ಭಾವ, ಸಮಾಧಾನ, ಪರಿಶುದ್ಧತೆ, ಸಿಹಿ, ಶಾಂತಿಯ ಭಾವ ನಿಮ್ಮನ್ನು ಆವರಿಸುತ್ತದೆ. ಶಾಂತಿ, ಶಾಂತಿ, ಶಾಂತಿ...ಯಾವುದನ್ನಾದರೂ ಬದಲಿಸಲು ಅವಸರ ಬೇಡ. ಅವಸರದಿಂದ ಯಾವುದೇ ಫಲಿತಾಂಶ ದೊರೆಯುವುದಿಲ್ಲ. ಯಾವ ಕೆಲಸವೇ ಆಗಲಿ ಯಾವಾಗ ಆದೀತು ಎಂಬ ತರಾತುರಿ ಬೇಡ.ಈಗ ಮಾಡುವುದರತ್ತ ಮಾತ್ರ ನಿಮ್ಮ ಗಮನ ಇರಲಿ. ಯಾವುದೇ ಅನಾರೋಗ್ಯಕರ ದೈಹಿಕ ಅಥವಾ ಮಾನಸಿಕ ವ್ಯಸನವನ್ನು ತ್ಯಜಿಸಲು ಅವಸರ ಮಾಡಬೇಡಿ. ಆರೋಗ್ಯಕರ ವಿಧಾನ ಬದುಕಿನಲ್ಲಿ ಅಳವಡಿಸಿಕೊಳ್ಳಿ.ಆಧ್ಯಾತ್ಮಿಕತೆ ನನಗೇನು ಕೊಡಬಲ್ಲದು ಎಂದು ಮದ್ಯವ್ಯಸನಿಯೊಬ್ಬ ಗುರುವಿನ ಬಳಿ ಪ್ರಶ್ನಿಸಿದ. `ಆಲ್ಕೋಹಾಲ್ ರಹಿತ ಅಮಲು~ ಎಂದು ಆ ಗುರು ಉತ್ತರಿಸಿದ. ಕುಡಿತ ತ್ಯಜಿಸಲು ಯಾವುದೇ ಅವಸರ ಬೇಡ. ಆದರೆ, ಪುಟಿದೇಳುವ ವ್ಯಾಯಾಮವನ್ನು ನೀವು ಆರಂಭಿಸಬಹುದು.

 

ಅಲ್ಲದೇ ನೀವು ಇಷ್ಟಪಡುವ ಮಂತ್ರವೊಂದನ್ನು ಹೇಳಿಕೊಳ್ಳಬಹುದು. ಆಗ ನಿಮ್ಮ ಬಗ್ಗೆ ನಿಮಗೇ ಗೌರವ ಮೂಡುತ್ತದೆ. ಆ ಮಂತ್ರ ಹಾಗೂ ರಿಲಾಕ್ಸ್ ಎಂಬ ಪದಗಳು ನಿಮ್ಮ ಮನಸ್ಸು, ತಲೆ ಹಾಗೂ ದೇಹದೊಳಗೆ ಅಚ್ಚಳಿಯದಂತೆ ಇಳಿಯುತ್ತವೆ.

 

ಕ್ರಮೇಣ ಆತ್ಮ ಗೌರವದಿಂದ ನೀವು ಕುಡಿತದ ಪ್ರಮಾಣ ಕಡಿಮೆ ಮಾಡುತ್ತ ಹೋಗುತ್ತೀರಿ. ನೀವು ಕುಡಿತವನ್ನು ಸಂಪೂರ್ಣವಾಗಿ ನಿಲ್ಲಿಸದೇ ಇರಬಹುದು. ಆದರೆ, ಕುಡಿತದ ಪ್ರಮಾಣ ಕಡಿಮೆಯಾಗಿದ್ದರಿಂದ ಆರೋಗ್ಯ ಸುಧಾರಿಸುತ್ತದೆ. ಜೀವನದ ಗುಣಮಟ್ಟ ಸುಧಾರಿಸುತ್ತದೆ.ಹಾಗೆಯೇ ನಿಮ್ಮ ಕೂದಲು ಮೊದಲಿನಷ್ಟು ದಟ್ಟವಾಗಿ ಬೆಳೆಯಲಾರದು. ಆದರೆ, ನಿಮ್ಮಳಗಿನ ಒತ್ತಡ ಖಂಡಿತವಾಗಿ ಕಡಿಮೆಯಾಗುತ್ತದೆ. ನೀವು ಮತ್ತಷ್ಟು ಸಂತಸದಿಂದ ಇರುತ್ತೀರಿ.ಉದ್ವೇಗಕ್ಕೆ ಒಳಗಾಗದೇ ಇರುತ್ತೀರಿ. ನೆಮ್ಮದಿಯಿಂದ ಜೀವಿಸುತ್ತೀರಿ. ರಕ್ತದೊತ್ತಡ ಇಳಿಯುತ್ತದೆ. ಕಿಡ್ನಿ ಕಲ್ಲು ಕರಗಿಹೋಗುತ್ತದೆ. ಅದನ್ನು ಮಾಡಬಾರದು, ಇದನ್ನು ಮಾಡಬಾರದು ಎಂದು ಒತ್ತಡದಲ್ಲಿ ನರಳುವ ಬದಲು ಆರೋಗ್ಯಕರ ಹವ್ಯಾಸಗಳತ್ತ ಗಮನ ನೀಡಿ. ಉತ್ತಮ ಹವ್ಯಾಸ, ಅಭ್ಯಾಸಗಳು ರೂಢಿಯಾದ ಮೇಲೆ ಕೆಟ್ಟ ಅಭ್ಯಾಸಗಳು ತಾನಾಗಿಯೇ ಮರೆಯಾಗುತ್ತವೆ.ನನಗೆ ತಲೆ ತುಂಬ ಕೂದಲಿದೆ, ತಲೆ ತುಂಬ ಕೂದಲಿದೆ ಎಂದು ಹೇಳಿಕೊಳ್ಳುತ್ತ ಹೋಗಿ. ಅದನ್ನು ಪದೇಪದೇ ಬರೆಯುತ್ತಿರಿ. ನಿಮ್ಮ ದೇಹದ ಕುರಿತು ಪ್ರೀತಿ ತೋರಿ. ಅದಕ್ಕೆ ಆರೋಗ್ಯಕರ ಆಹಾರ ನೀಡಿ. ವ್ಯಾಯಾಮ ಮಾಡಿ. ಅದರೊಂದಿಗೆ ಆಗಾಗ ಆಳವಾಗಿ ಉಸಿರಾಡುತ್ತ ಇರಿ.

 

ಅಸಹನೆಯಿಂದ. ಋಣಾತ್ಮಕವಾಗಿ, ಒರಟಾಗಿ ಮಾತನಾಡುವುದು, ಆಲೋಚಿಸುವುದು ಬಿಡಿ. ನಿಮ್ಮ ನಡೆ,ನುಡಿ ಗಂಭೀರವಾಗಿರಲಿ. ಅಸಹನೆಯಿಂದ ಅವಸರದಿಂದ ಓಡಾಡಬೇಡಿ. ನಿಮ್ಮ ತಲೆಗೆ ಪ್ರತಿದಿನ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ನಿಮ್ಮ ಕೂದಲನ್ನು ಸಹ ಮೃದುವಾಗಿ ತೊಳೆಯಿರಿ.ಯುವಕನೊಬ್ಬನಿಗೆ ಕ್ಯಾನ್ಸರ್ ಪತ್ತೆಯಾಯಿತು. ವೈದ್ಯರು ಆತ ಮೂರೇ ವಾರ ಬದುಕುವುದು ಎಂದು ಹೇಳಿದ್ದರು. ಆದರೆ, ಆ ಮೂರು ವಾರವನ್ನು ಸಂತಸದಿಂದ ಕಳೆಯಲು ಆತ ನಿರ್ಧರಿಸಿದ. ಪ್ರತಿ ಕ್ಷಣವನ್ನು ಆನಂದಮಯವಾಗಿ ಕಳೆದ.ಮಾಡಿದ ಪ್ರತಿ ಕೆಲಸಕ್ಕೂ ಶೇ 100ರಷ್ಟು ಗಮನ ನೀಡಿದ. ದಿನವೂ ವಾಕ್ ಮಾಡುತ್ತಿದ್ದ. ಆಳವಾಗಿ ಉಸಿರಾಡುತ್ತ ಸಂತಸ ಪಡುತ್ತಿದ್ದ. ತಾಜಾ ಗಾಳಿ, ಬೆಚ್ಚನೆಯ ಸೂರ್ಯನ ಬೆಳಕು ಎಲ್ಲವನ್ನೂ ಆತ ಆನಂದಿಸಿದ.ತಿನ್ನುತ್ತಿದ್ದ ಆಹಾರದ ಪ್ರತಿ ಕಣದ ರುಚಿಯನ್ನೂ ಆಸ್ವಾದಿಸುತ್ತಿದ್ದ. ಆ ಮೂರು ವಾರಗಳು ಆತನ ಜೀವನದ ಅಮೂಲ್ಯ ಕ್ಷಣಗಳಾಗಿದ್ದವು. ಇದರಿಂದಾಗಿ ಆತ ಮತ್ತು ಹನ್ನೊಂದು ವರ್ಷಗಳ ಕಾಲ ಬದುಕಿದ. ನಮ್ಮ ಬದುಕಿನ ಪ್ರತಿ ಕ್ಷಣವನ್ನು ಹೀಗೆ ಆಳವಾಗಿ ಬದುಕೋಣ...! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.