ಬೆಂಗಳೂರು: `ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ಲಾಸ್ಟಿಕ್ಮುಕ್ತವನ್ನಾಗಿ ಆಚರಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಾಗರಿಕರು ಸಹಕರಿಸಬೇಕು~ ಎಂದು ಪಾಲಿಕೆಯ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಮನವಿ ಮಾಡಿದರು.

ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಯ ಕುರಿತು ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ನಗರದಲ್ಲಿ ಈಚೆಗೆ ಪೂರ್ವಭಾವಿ ಸಭೆ ನಡೆಸಿದ ಅವರು, `ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರಿ ಇಲಾಖೆಗಳು ಪ್ಲಾಸ್ಟಿಕ್ನಿಂದ ಸಿದ್ಧಪಡಿಸಿದ ಬಾವುಟ ಮತ್ತು ಬಂಟಿಂಗ್ಸ್ಗಳನ್ನು ಬಳಸಬಾರದು. ಅದರ ಬದಲಾಗಿ ಬಟ್ಟೆ ಮತ್ತು ಕಾಗದದಿಂದ ಸಿದ್ಧಪಡಿಸಿದ ಧ್ವಜಗಳನ್ನೇ ಉಪಯೋಗಿಸಬೇಕು. ಪ್ಲಾಸ್ಟಿಕ್ ಬಾವುಟಗಳು ಮತ್ತು ಬಂಟಿಂಗ್ಸ್ಗಳನ್ನು ಮುದ್ರಿಸಿ ಮಾರಾಟ ಮಾಡುವ ಮುದ್ರಣಕಾರರು ಮತ್ತು ವಿತರಕರ ಉದ್ಯಮ ಪರವಾನಗಿಯನ್ನು ರದ್ದುಪಡಿಸಲಾಗುವುದು~ ಎಂದು ಎಚ್ಚರಿಸಿದರು.

`ಸ್ವಾತಂತ್ರ್ಯ ದಿನಾಚರಣೆಯ ಪರೇಡ್ ಮೈದಾನದಲ್ಲಿ ಶಾಲಾ ಮಕ್ಕಳಿಗೆ ತಿಂಡಿ-ತಿನಿಸುಗಳನ್ನು ಮತ್ತು ಕುಡಿಯುವ ನೀರನ್ನು ವಿತರಿಸಲು ಕಾಗದದ ಪ್ಲೇಟ್ ಮತ್ತು ಕಾಗದದ ಲೋಟಗಳನ್ನು ಮಾತ್ರ ಬಳಸಬೇಕು~ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.