ಮಂಗಳವಾರ, ಸೆಪ್ಟೆಂಬರ್ 17, 2019
25 °C

ಸ್ವಾತಂತ್ರ್ಯ ಹೋರಾಟಗಾರ ನರಸಿಂಗರಾವ್ ಇನ್ನಿಲ್ಲ

Published:
Updated:

ಶಿವಮೊಗ್ಗ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಅನೇಕ ಬಾರಿ ಜೈಲು ವಾಸ ಅನುಭವಿಸಿದ್ದ ನರಸಿಂಗರಾವ್ (92) ಗುರುವಾರ ರಾತ್ರಿ ನಿಧನರಾದರು. ಅವರಿಗೆ ಮೂವರು ಪುತ್ರರು ಹಾಗೂ ಐವರು ಪುತ್ರಿಯರು ಇದ್ದಾರೆ.ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ ನಗರದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.  1920ರಂದು ಶಿವಮೊಗ್ಗದಲ್ಲಿ ಜನಿಸಿದ್ದ ಅವರು, ಮಹಾತ್ಮ ಗಾಂಧಿ ಪ್ರಭಾವದಿಂದ ಬಾಲ್ಯದಲ್ಲಿಯೇ ಸ್ವಾತಂತ್ರ ಸಂಗ್ರಾಮಕ್ಕೆ ಧುಮಿಕಿದ್ದರು.ಅವರು ಭಾವಸಾರ ಕೋ-ಆಪ್‌ರೇಟಿವ್ ಸಂಸ್ಥೆಯ ನಿರ್ದೇಶಕರಾಗಿ, ಖಜಾಂಚಿಯಾಗಿ, ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು.

 

Post Comments (+)