ಬೆಳಗಾವಿಯಲ್ಲಿ ನಾಳೆಯಿಂದ ಮೂರು ದಿನ ವಿಶ್ವ ಕನ್ನಡ ಸಮ್ಮೇಳನ. ಇತ್ತ ಬೆಂಗಳೂರಿನಲ್ಲಿ ಇದೇ ವಿಷಯದ ಹಿನ್ನೆಲೆಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಸ್ವಾಭಿಮಾನಿ ಕನ್ನಡಿಗರ ಸಮ್ಮೇಳನ ಆಯೋಜಿಸಿದೆ.

ಕರ್ನಾಟಕದ ಇಂದಿನ ಆದ್ಯತೆಗಳೇನು ಎಂಬುದರ ಕುರಿತು ಚರ್ಚೆ ನಡೆಸಲು ಅನೇಕ ಸಮಾನ ಮನಸ್ಕರು ಇಲ್ಲಿ ಒಂದಾಗಲಿದ್ದಾರೆ. ‘ಇದು ವಿಶ್ವ ಕನ್ನಡ ಸಮ್ಮೇಳನಕ್ಕೆ ವಿರೋಧವಾದ ಸಮಾವೇಶ ಅಲ್ಲ. ಆದರೆ ಅಭಿವೃದ್ಧಿಯಿಂದ ವಂಚಿತವಾಗಿರುವ ಪ್ರದೇಶಗಳು, ತಂತ್ರಜ್ಞಾನ ಯುಗದಲ್ಲಿ ಕನ್ನಡದ ಬೆಳವಣಿಗೆ ಹಾಗೂ ಸಮಕಾಲಿನ ಸಮಸ್ಯೆಗಳ ಕುರಿತ ಚರ್ಚೆಗೆ ವೇದಿಕೆ’ ಎನ್ನುತ್ತಾರೆ ಸಂಘಟಕರು. ಇದರಲ್ಲಿ ಅನೇಕ ಬರಹಗಾರರು, ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಗುರುವಾರ ಬೆಳಿಗ್ಗೆ 10ಕ್ಕೆ ಉದ್ಘಾಟನೆ: ಪ್ರೊ. ಚಂದ್ರಶೇಖರ ಪಾಟೀಲ. ಅತಿಥಿಗಳು: ಡಾ.ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್, ಪ್ರೊ.ಕೆ.ಎಸ್. ಭಗವಾನ್, ಎಂ. ವೆಂಕಟಸ್ವಾಮಿ. ಅಧ್ಯಕ್ಷತೆ: ಡಾ. ವೆಂಕಟರೆಡ್ಡಿ.

ಬೆಳಿಗ್ಗೆ 11.45ಕ್ಕೆ ಗೋಷ್ಠಿ1: ಕನ್ನಡ ಸಾರ್ವಭೌಮತೆ ಹಾಗೂ ಕನ್ನಡ ವಿಶ್ವದ ಸಮಸ್ಯೆಗಳು. ಡಾ. ಸಿದ್ಧನಗೌಡ ಪಾಟೀಲ್ (ಕನ್ನಡ ಬದುಕು ಎದುರಿಸುತ್ತಿರುವ ಬಿಕ್ಕಟ್ಟುಗಳೇನು? ಕರ್ನಾಟಕ ಸರ್ಕಾರದ ನೀತಿಗಳು ಮತ್ತು ಕರ್ನಾಟಕದ ದುಡಿವ ಜನರು), ಡಾ. ವಸು (ಕನ್ನಡ ವಿಶ್ವದೊಳಗೆ ದಲಿತರು, ಮಹಿಳೆಯರು ಪಡೆದುಕೊಂಡಿರುವುದೆಷ್ಟು?), ಪ್ರೊ. ರಹಮತ್ ತರೀಕೆರೆ (ಕನ್ನಡ ಭಾಷೆ ಎದುರಿಸುತ್ತಿರುವ ಬಿಕ್ಕಟ್ಟುಗಳೇನು). ಅಧ್ಯಕ್ಷತೆ: ಕಲ್ಕುಳಿ ವಿಠಲ ಹೆಗ್ಡೆ.

ಮಧ್ಯಾಹ್ನ 2.45ಕ್ಕೆ ಗೋಷ್ಠಿ2: ಸಮಗ್ರ ಕರ್ನಾಟಕ ಮತ್ತು ವಿಶ್ವ ಕನ್ನಡ. ಎನ್.ಎ.ಎಂ. ಇಸ್ಮಾಯಿಲ್ (ಕನ್ನಡ- ವಿಶ್ವ ಕನ್ನಡ ಆಗುವ ಬಗೆ ಏನು?), ಎಸ್.ಕೆ. ಕಾಂತಾ (ಪ್ರಾದೇಶಿಕ ಅಸಮತೋಲನ: ಪರಿಹಾರ ಹೇಗೆ?), ಫಕೀರ್ ಮಹಮದ್ ಕಟ್ಟಾಡಿ (ಕರ್ನಾಟಕದೊಳಗೆ ಕನ್ನಡ ಮಾತೃ ಭಾಷೆಯಲ್ಲದವರ ಆತಂಕ ಮತ್ತು ಅನುಸಂಧಾನ). ಅಧ್ಯಕ್ಷತೆ: ಪ್ರೊ.ಕೆ. ಮರುಳಸಿದ್ದಪ್ಪ.

ಸಂಜೆ 5ಕ್ಕೆ ಗೋಷ್ಠಿ3: ಸಮಕಾಲೀನ ಸವಾಲುಗಳು: ಬಂಜೆಗೆರೆ ಜಯಪ್ರಕಾಶ್ (ಭಾರತೀಯತೆ ಮತ್ತು ಕನ್ನಡತನ: ಸಮಕಾಲೀನ ಪ್ರಶ್ನೆಗಳು), ಡಾ.ಎಚ್.ವಿ. ವಸು (ಜಾಗತೀಕರಣದ ಪ್ರಕ್ರಿಯೆಯು ಕನ್ನಡ ಮತ್ತು ಕರ್ನಾಟಕದ ಮುಂದಿಟ್ಟಿರುವ ಸವಾಲುಗಳು), ಅಧ್ಯಕ್ಷತೆ: ಡಾ.ಪಿ.ವಿ. ನಾರಾಯಣ.

ಸಂಜೆ 6.30ಕ್ಕೆ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ.
ಸ್ಥಳ: ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.